ಇಂದು ತ್ರಿಶತಕ ಬಾರಿಸಿದ ಕೊರೊನಾ.. ರಾಜ್ಯದಲ್ಲಿ 10 ಸಾವಿರದ ಗಡಿ ದಾಟಿಯೇಬಿಟ್ಟಿತು

| Updated By: Team Veegam

Updated on: Jun 25, 2020 | 2:10 AM

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿಯ ಆರ್ಭಟ ದಿನೇ ದಿನೆ ಹೆಚ್ಚುತ್ತಲೇ ಇದೆ. ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ ಇಂದು ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿದ್ದು ಹೊಸದಾಗಿ 397 ಕೇಸ್​ಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,118ಕ್ಕೆ ಏರಿದೆ. ಇಂದು ಬೆಂಗಳೂರಲ್ಲಿ ಅತ್ಯಂತ ಹೆಚ್ಚು ಅಂದರೆ 173ಪ್ರಕರಣಗಳು ಪತ್ತೆಯಾಗಿದೆ. ಇಂದು ಬಳ್ಳಾರಿಯಲ್ಲಿ 34, ಕಲಬುರಗಿಯಲ್ಲಿ 22 ಕೇಸ್​ಗಳು, ರಾಮನಗರದಲ್ಲಿ 22, ಉಡುಪಿಯಲ್ಲಿ 14 ಪ್ರಕರಣಗಳು ಪತ್ತೆಯಾಗಿದೆ. ಜೊತೆಗೆ ಯಾದಗಿರಿಯಲ್ಲಿ 13, ದಕ್ಷಿಣ ಕನ್ನಡ ಮತ್ತು ಧಾರವಾಡದಲ್ಲಿ ತಲಾ […]

ಇಂದು ತ್ರಿಶತಕ ಬಾರಿಸಿದ ಕೊರೊನಾ.. ರಾಜ್ಯದಲ್ಲಿ 10 ಸಾವಿರದ ಗಡಿ ದಾಟಿಯೇಬಿಟ್ಟಿತು
Follow us on

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿಯ ಆರ್ಭಟ ದಿನೇ ದಿನೆ ಹೆಚ್ಚುತ್ತಲೇ ಇದೆ. ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ ಇಂದು ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿದ್ದು ಹೊಸದಾಗಿ 397 ಕೇಸ್​ಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,118ಕ್ಕೆ ಏರಿದೆ. ಇಂದು ಬೆಂಗಳೂರಲ್ಲಿ ಅತ್ಯಂತ ಹೆಚ್ಚು ಅಂದರೆ 173ಪ್ರಕರಣಗಳು ಪತ್ತೆಯಾಗಿದೆ.

ಇಂದು ಬಳ್ಳಾರಿಯಲ್ಲಿ 34, ಕಲಬುರಗಿಯಲ್ಲಿ 22 ಕೇಸ್​ಗಳು, ರಾಮನಗರದಲ್ಲಿ 22, ಉಡುಪಿಯಲ್ಲಿ 14 ಪ್ರಕರಣಗಳು ಪತ್ತೆಯಾಗಿದೆ. ಜೊತೆಗೆ ಯಾದಗಿರಿಯಲ್ಲಿ 13, ದಕ್ಷಿಣ ಕನ್ನಡ ಮತ್ತು ಧಾರವಾಡದಲ್ಲಿ ತಲಾ 12 ಕೇಸ್​ಗಳು ಹಾಗೂ ಕೊಪ್ಪಳದಲ್ಲಿ 11 ಪ್ರಕರಣಗಳು ವರದಿಯಾಗಿದೆ. ರಾಯಚೂರು ಮತ್ತು ಉತ್ತರ ಕನ್ನಡದಲ್ಲಿ 9 ಪ್ರಕರಣಗಳು ವರದಿಯಾಗಿದ್ದರೆ ಇನ್ನು ದಾವಣಗೆರೆಯಲ್ಲಿ 8 ಕೇಸ್​ಗಳು ಬೆಳಕಿಗೆ ಬಂದಿದೆ.

ಕೊರೊನಾ ಸೋಂಕು ಇಂದು 14 ಜನರನ್ನು ಬಲಿಪಡೆದಿದೆ. ಬೆಂಗಳೂರಿನಲ್ಲಿ ಇಂದು 5 ಸೋಂಕಿತರು ಮೃತಪಟ್ಟಿದ್ದಾರೆ. ಜೊತೆಗೆ ಸೋಂಕಿತರ ಪೈಕಿ 6,151 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಅಂತಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಮಾಹಿತಿ ನೀಡಿದೆ.

Published On - 7:39 pm, Wed, 24 June 20