ವೆಂಟಿಲೇಟರ್ ಕಿತ್ಕೊಂಡ ಕೊರೊನಾ: ಮದ್ವೆಯಾಗಿ ಕೇವಲ 1 ವರ್ಷವಾಗಿದ್ದ TB ಪೇಶಂಟ್ ಸಾವು!
ಬೆಂಗಳೂರು: ಈ ಮಹಾಮಾರಿ ತುಂಬಾನೇ ಕ್ರೂರಿ. ಸದ್ದಿಲ್ಲದೆ ಸೋಂಕಿತರನ್ನು ಬಲಿಪೆಡಯುತ್ತಿದ್ದ ಕೊರೊನಾ ಇದೀಗ ಇತರೆ ರೋಗಿಗಳತ್ತ ಮುಖಮಾಡಿದ ಹಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಮದುವೆಯಾಗಿ ಕೇವಲ ಒಂದು ವರ್ಷವಾಗಿದ್ದ TB ಪೇಶಂಟ್ ಒಬ್ಬರು ಕೊರೊನಾದಿಂದ ಉಂಟಾದ ವೆಂಟಿಲೇಟರ್ ಕೊರತೆಯಿಂದ ಸಾವನ್ನಪ್ಪಿರೋ ಹೃದಯವಿದ್ರಾವಕ ಘಟನೆ ನಗರದಲ್ಲಿ ವರದಿಯಾಗಿದೆ. ವೆಂಟಿಲೇಟರ್ ಕಸಿದುಕೊಂಡ ಕೊರೊನಾ ಮೂಲತಃ ಕೋಲಾರ ಮೂಲದ 21 ವರ್ಷದ ಮಹಿಳೆ ಕ್ಷಯ ರೋಗದಿಂದ ಬಳಲುತ್ತಿದ್ದು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ಯಲಹಂಕಕ್ಕೆ ಬಂದು ನೆಲೆಸಿದ್ದರು. 21 ದಿನಗಳ ಹಿಂದೆ ಈಕೆಯನ್ನು ಚಿಕಿತ್ಸೆಗಾಗಿ […]
ಬೆಂಗಳೂರು: ಈ ಮಹಾಮಾರಿ ತುಂಬಾನೇ ಕ್ರೂರಿ. ಸದ್ದಿಲ್ಲದೆ ಸೋಂಕಿತರನ್ನು ಬಲಿಪೆಡಯುತ್ತಿದ್ದ ಕೊರೊನಾ ಇದೀಗ ಇತರೆ ರೋಗಿಗಳತ್ತ ಮುಖಮಾಡಿದ ಹಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಮದುವೆಯಾಗಿ ಕೇವಲ ಒಂದು ವರ್ಷವಾಗಿದ್ದ TB ಪೇಶಂಟ್ ಒಬ್ಬರು ಕೊರೊನಾದಿಂದ ಉಂಟಾದ ವೆಂಟಿಲೇಟರ್ ಕೊರತೆಯಿಂದ ಸಾವನ್ನಪ್ಪಿರೋ ಹೃದಯವಿದ್ರಾವಕ ಘಟನೆ ನಗರದಲ್ಲಿ ವರದಿಯಾಗಿದೆ.
ವೆಂಟಿಲೇಟರ್ ಕಸಿದುಕೊಂಡ ಕೊರೊನಾ ಮೂಲತಃ ಕೋಲಾರ ಮೂಲದ 21 ವರ್ಷದ ಮಹಿಳೆ ಕ್ಷಯ ರೋಗದಿಂದ ಬಳಲುತ್ತಿದ್ದು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ಯಲಹಂಕಕ್ಕೆ ಬಂದು ನೆಲೆಸಿದ್ದರು. 21 ದಿನಗಳ ಹಿಂದೆ ಈಕೆಯನ್ನು ಚಿಕಿತ್ಸೆಗಾಗಿ ಮಲ್ಲೇಶ್ವರದಲ್ಲಿರುವ ಕೆ.ಸಿ. ಜನರಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ವೆಂಟಿಲೇಟರ್ಗಳ ಬೇಡಿಕೆಯು ಉಂಟಾಯಿತು.
ಹಾಗಾಗಿ, ಮಹಿಳೆಗೆ ನೀಡಲಾಗಿದ್ದ ವೆಂಟಿಲೇಟರ್ನ ಕೊರೊನಾ ಸೋಂಕಿತರಿಗೆ ನೀಡಲು ನಿರ್ಧರಿಸಲಾಯಿತು. ಆದರೆ, ದುರದೃಷ್ಟವಶಾತ್ ಇಂದು ಬೆಳಿಗ್ಗೆ ಮಹಿಳೆಯಿಂದ ವೆಂಟಿಲೇಟರ್ ತೆಗೆದ ಮರುಕ್ಷಣವೇ ಆಕೆ ಅಸುನೀಗಿದ್ದಾರೆ. ಒಟ್ನಲ್ಲಿ ಇನ್ನೂ ಬದುಕಿ ಬಾಳಬೇಕಿದ್ದ ಹೆಣ್ಣುಮಗಳು ಕೊರೊನಾದಿಂದ ದೂರವಿದ್ದರೂ ಅದರ ಕರಿಛಾಯೆ ಮಾತ್ರ ಆಕೆಯನ್ನು ಆವರಿಸಿಯೇಬಿಟ್ಟಿತು.
Published On - 7:26 pm, Wed, 24 June 20