ಸೋಂಕು ಹೆಚ್ಚಳ ತಡೆಗೆ ಬೆಂಗಳೂರು ನಗರದ 15 ಪ್ರಮುಖ ರಸ್ತೆಗಳು ಸೀಲ್‌ಡೌನ್
ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ 15 ಪ್ರಮುಖ ರಸ್ತೆಗಳನ್ನು ಸೀಲ್‌ಡೌನ್ ಮಾಡಲು ಬಿಬಿಎಂಪಿ ಆಯುಕ್ತ ಆದೇಶ ಹೊರಡಿಸಿದ್ದಾರೆ. ಹೀಗಾಗಿ ನಗರದ ಟೌನ್‌ಹಾಲ್ ಸರ್ಕಲ್, ಜೆ.ಸಿ.ರಸ್ತೆ, ಎ.ಎಂ.ರಸ್ತೆ, ಕಲಾಸಿಪಾಳ್ಯ ಮುಖ್ಯರಸ್ತೆ. ಕೆ.ಆರ್.ಮಾರ್ಕೆಟ್ ಜಂಕ್ಷನ್, ಸರ್ವಿಸ್ ರಸ್ತೆ, ತರಗುಪೇಟೆಯ 2ನೇ ಮುಖ್ಯರಸ್ತೆ, ಟಿಪ್ಪುಸುಲ್ತಾನ್ ಪ್ಯಾಲೇಸ್ ರಸ್ತೆ, ತರಗುಪೇಟೆ 4ನೇ ಮುಖ್ಯರಸ್ತೆ, ಭಾಷ್ಯಂ ರಸ್ತೆ, ಶ್ರೀನಿವಾಸ ಮಂದಿರಂ ರಸ್ತೆ, ಕಿಲರಿ ರಸ್ತೆ, ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಸನಕಲಪೇಟೆ ರಸ್ತೆ, ಎಸ್‌ಜಿಪಿ ರಸ್ತೆ ಸೇರಿದಂತೆ ಪ್ರಮುಖ […]
ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ 15 ಪ್ರಮುಖ ರಸ್ತೆಗಳನ್ನು ಸೀಲ್‌ಡೌನ್ ಮಾಡಲು ಬಿಬಿಎಂಪಿ ಆಯುಕ್ತ ಆದೇಶ ಹೊರಡಿಸಿದ್ದಾರೆ. ಹೀಗಾಗಿ ನಗರದ ಟೌನ್‌ಹಾಲ್ ಸರ್ಕಲ್, ಜೆ.ಸಿ.ರಸ್ತೆ, ಎ.ಎಂ.ರಸ್ತೆ, ಕಲಾಸಿಪಾಳ್ಯ ಮುಖ್ಯರಸ್ತೆ.
ಕೆ.ಆರ್.ಮಾರ್ಕೆಟ್ ಜಂಕ್ಷನ್, ಸರ್ವಿಸ್ ರಸ್ತೆ, ತರಗುಪೇಟೆಯ 2ನೇ ಮುಖ್ಯರಸ್ತೆ, ಟಿಪ್ಪುಸುಲ್ತಾನ್ ಪ್ಯಾಲೇಸ್ ರಸ್ತೆ, ತರಗುಪೇಟೆ 4ನೇ ಮುಖ್ಯರಸ್ತೆ, ಭಾಷ್ಯಂ ರಸ್ತೆ, ಶ್ರೀನಿವಾಸ ಮಂದಿರಂ ರಸ್ತೆ, ಕಿಲರಿ ರಸ್ತೆ, ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಸನಕಲಪೇಟೆ ರಸ್ತೆ, ಎಸ್‌ಜಿಪಿ ರಸ್ತೆ ಸೇರಿದಂತೆ ಪ್ರಮುಖ 15 ರಸ್ತೆಗಳು ಸೀಲ್‌ಡೌನ್ ಆಗಲಿವೆ. ಸೀಲ್‌ಡೌನ್ ಪ್ರದೇಶದಲ್ಲಿ ವಾಣಿಜ್ಯ ವ್ಯಾಪಾರ ವಹಿವಾಟು ಬಂದ್ ಆಗುತ್ತೆ. ಅತ್ಯಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಮಾತ್ರ ಅವಕಾಶ ನೀಡಲಾಗುತ್ತೆ. ಆಸ್ಪತ್ರೆ, ಕ್ಲಿನಿಕ್, ಮೆಡಿಕಲ್ ಶಾಪ್‌ಗಳು ಎಂದಿನಂತೆ ಓಪನ್ ಆಗಿರಲಿವೆ.
ಸೀಲ್‍ಡೌನ್ ರೂಲ್ಸ್ * ಎಲ್ಲ ರೀತಿಯ ವಾಣಿಜ್ಯ ವಹಿವಾಟು ನಡೆಸುವ ಅಂಗಡಿಗಳು ಬಂದ್ * ಹೋಟೆಲ್, ರೆಸ್ಟೋರೆಂಟ್ ಹಾಗೂ ಬೀದಿ ವ್ಯಾಪರಕ್ಕೂ ಅವಕಾಶ ಇರುವುದಿಲ್ಲ. * ಧಾರ್ಮಿಕ ಕೇಂದ್ರಗಳು ತೆರೆಯುವುದಕ್ಕೆ ಅಥವಾ ಜನ ಸಮೂಹ ಸೇರುವಂತಹ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ * ಕಿರಣಿ ಮಾರಾಟಗಾರರು ಅಥವಾ ಅಂಗಡಿಗಳ ಮಾಲೀಕರು ಈ ಪ್ರದೇಶಗಳಲ್ಲಿ ಮಾರಾಟ ಮಾಡುವಂತಿಲ್ಲ. * ಮದ್ಯ ಮಾರಾಟಕ್ಕೂ ಅವಕಾಶ ಇಲ್ಲ. * ಹೂ ಮಾರುಕಟ್ಟೆ ಮತ್ತು ಅಂಗಡಿಗಳು ಬಂದ್ ಮಾಡಲು ನಿರ್ದೇಶನ ನೀಡಲಾಗಿದೆ.
ಯಾವುದಕ್ಕೆ ಅವಕಾಶ: -ಅತ್ಯಾವಶ್ಯಕ ವಸ್ತುಗಳ ಮಾರಾಟ ಮತ್ತು ಖರೀದಿಗೆ ಅವಕಾಶ -ಆಸ್ಪತ್ರೆ, ಕ್ಲಿನಿಕ್ ಹಾಗೂ ಮೆಡಿಕಲ್ ಶಾಪ್‍ಗಳು ತೆರೆದಿರಲಿವೆ -ದಿನಪತ್ರಿಕೆ, ಹಾಲು ಹಾಗೂ ಅತ್ಯಾವಶ್ಯಕ ವಸ್ತುಗಳು ಸಿಗಲಿವೆ. ಸೀಲ್‍ಡೌನ್ ಆಗುವ ಈ ಪ್ರದೇಶಗಳಲ್ಲಿ ಜನರ ಆರೋಗ್ಯ ಪರೀಕ್ಷೆ, ಸೋಂಕಿತರ ಸಂಪರ್ಕದಲ್ಲಿರುವ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯಾಚರಣೆಗೆ ಹೆಚ್ಚು ಮುಂಜಾಗ್ರತೆ ವಹಿಸುವಂತೆ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಉಸಿರಾಟದ ಸಮಸ್ಯೆ, ಸೋಂಕಿನ ಲಕ್ಷಣ ಕಾಣಿಸಿಕೊಂಡವರ ಪರೀಕ್ಷೆ ನಡೆಸಬೇಕು ಹಾಗೂ ಸ್ಯಾಬ್ ಸಂಗ್ರಹ ಹಾಗೂ ರ್ಯಾಂಡಮ್ ಪರೀಕ್ಷೆಗೆ ಸೂಚನೆ ನೀಡಲಾಗಿದೆ.