ಅನೈತಿಕ ಸಂಬಂಧ ಆರೋಪ, ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ
ಬೆಳಗಾವಿ: ಅನೈತಿಕ ಸಂಬಂಧ ಆರೋಪ ಹಿನ್ನೆಲೆಯಲ್ಲಿ ಯುವಕನನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೈಲಹೊಂಗಲ ತಾಲೂಕಿನ ಹೊಸ ಕುರಗುಂದದಲ್ಲಿ ನಡೆದಿದೆ. ದ್ಯಾಮಪ್ಪ ವಣ್ಣೂರ(22) ಕೊಲೆಯಾದ ದುರ್ದೈವಿ. ದ್ಯಾಮಪ್ಪ ನಿನ್ನೆ ಸಂಜೆ ಬೈಕ್ನಲ್ಲಿ ತೆರಳುವಾಗ ಕೆಲ ದುಷ್ಕರ್ಮಿಗಳು ಅಡ್ಡಕಟ್ಟಿ ಅವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹೊಸ ಕುರಗುಂದ ಗ್ರಾಮದ ಈರಪ್ಪ ನಾಯ್ಕರ್ ಮತ್ತು ಕುಟುಂಬಸ್ಥರು ಸೇರಿ ಕೊಲೆ ಮಾಡಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಮೃತ ದ್ಯಾಮಪ್ಪ ಈರಪ್ಪನ ಹೆಂಡತಿ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ಎಂಬ […]
ಬೆಳಗಾವಿ: ಅನೈತಿಕ ಸಂಬಂಧ ಆರೋಪ ಹಿನ್ನೆಲೆಯಲ್ಲಿ ಯುವಕನನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೈಲಹೊಂಗಲ ತಾಲೂಕಿನ ಹೊಸ ಕುರಗುಂದದಲ್ಲಿ ನಡೆದಿದೆ. ದ್ಯಾಮಪ್ಪ ವಣ್ಣೂರ(22) ಕೊಲೆಯಾದ ದುರ್ದೈವಿ.
ದ್ಯಾಮಪ್ಪ ನಿನ್ನೆ ಸಂಜೆ ಬೈಕ್ನಲ್ಲಿ ತೆರಳುವಾಗ ಕೆಲ ದುಷ್ಕರ್ಮಿಗಳು ಅಡ್ಡಕಟ್ಟಿ ಅವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹೊಸ ಕುರಗುಂದ ಗ್ರಾಮದ ಈರಪ್ಪ ನಾಯ್ಕರ್ ಮತ್ತು ಕುಟುಂಬಸ್ಥರು ಸೇರಿ ಕೊಲೆ ಮಾಡಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಮೃತ ದ್ಯಾಮಪ್ಪ ಈರಪ್ಪನ ಹೆಂಡತಿ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪ ಕೇಳಿ ಬಂದಿದ್ದು, ಇದೇ ಕಾರನಕ್ಕೆ ಆಕೆಯ ಪತಿ ಯುವಕನನ್ನ ಹತ್ಯೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.