ಇಂದು ತ್ರಿಶತಕ ಬಾರಿಸಿದ ಕೊರೊನಾ.. ರಾಜ್ಯದಲ್ಲಿ 10 ಸಾವಿರದ ಗಡಿ ದಾಟಿಯೇಬಿಟ್ಟಿತು
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿಯ ಆರ್ಭಟ ದಿನೇ ದಿನೆ ಹೆಚ್ಚುತ್ತಲೇ ಇದೆ. ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ ಇಂದು ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿದ್ದು ಹೊಸದಾಗಿ 397 ಕೇಸ್ಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,118ಕ್ಕೆ ಏರಿದೆ. ಇಂದು ಬೆಂಗಳೂರಲ್ಲಿ ಅತ್ಯಂತ ಹೆಚ್ಚು ಅಂದರೆ 173ಪ್ರಕರಣಗಳು ಪತ್ತೆಯಾಗಿದೆ. ಇಂದು ಬಳ್ಳಾರಿಯಲ್ಲಿ 34, ಕಲಬುರಗಿಯಲ್ಲಿ 22 ಕೇಸ್ಗಳು, ರಾಮನಗರದಲ್ಲಿ 22, ಉಡುಪಿಯಲ್ಲಿ 14 ಪ್ರಕರಣಗಳು ಪತ್ತೆಯಾಗಿದೆ. ಜೊತೆಗೆ ಯಾದಗಿರಿಯಲ್ಲಿ 13, ದಕ್ಷಿಣ ಕನ್ನಡ ಮತ್ತು ಧಾರವಾಡದಲ್ಲಿ ತಲಾ […]
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿಯ ಆರ್ಭಟ ದಿನೇ ದಿನೆ ಹೆಚ್ಚುತ್ತಲೇ ಇದೆ. ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ ಇಂದು ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿದ್ದು ಹೊಸದಾಗಿ 397 ಕೇಸ್ಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,118ಕ್ಕೆ ಏರಿದೆ. ಇಂದು ಬೆಂಗಳೂರಲ್ಲಿ ಅತ್ಯಂತ ಹೆಚ್ಚು ಅಂದರೆ 173ಪ್ರಕರಣಗಳು ಪತ್ತೆಯಾಗಿದೆ.
ಇಂದು ಬಳ್ಳಾರಿಯಲ್ಲಿ 34, ಕಲಬುರಗಿಯಲ್ಲಿ 22 ಕೇಸ್ಗಳು, ರಾಮನಗರದಲ್ಲಿ 22, ಉಡುಪಿಯಲ್ಲಿ 14 ಪ್ರಕರಣಗಳು ಪತ್ತೆಯಾಗಿದೆ. ಜೊತೆಗೆ ಯಾದಗಿರಿಯಲ್ಲಿ 13, ದಕ್ಷಿಣ ಕನ್ನಡ ಮತ್ತು ಧಾರವಾಡದಲ್ಲಿ ತಲಾ 12 ಕೇಸ್ಗಳು ಹಾಗೂ ಕೊಪ್ಪಳದಲ್ಲಿ 11 ಪ್ರಕರಣಗಳು ವರದಿಯಾಗಿದೆ. ರಾಯಚೂರು ಮತ್ತು ಉತ್ತರ ಕನ್ನಡದಲ್ಲಿ 9 ಪ್ರಕರಣಗಳು ವರದಿಯಾಗಿದ್ದರೆ ಇನ್ನು ದಾವಣಗೆರೆಯಲ್ಲಿ 8 ಕೇಸ್ಗಳು ಬೆಳಕಿಗೆ ಬಂದಿದೆ.
ಕೊರೊನಾ ಸೋಂಕು ಇಂದು 14 ಜನರನ್ನು ಬಲಿಪಡೆದಿದೆ. ಬೆಂಗಳೂರಿನಲ್ಲಿ ಇಂದು 5 ಸೋಂಕಿತರು ಮೃತಪಟ್ಟಿದ್ದಾರೆ. ಜೊತೆಗೆ ಸೋಂಕಿತರ ಪೈಕಿ 6,151 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಅಂತಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Published On - 7:39 pm, Wed, 24 June 20