Karnataka Dam Water Level: ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಜೋರು ಮಳೆ; ಜು.8ರ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ

ಕರ್ನಾಟಕದ ಜಲಾಶಯಗಳ ಜುಲೈ 8ರ ನೀರಿನ ಮಟ್ಟ: ಕರ್ನಾಟಕದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಜನರ ಮೊಗದಲ್ಲಿ ಸಂತಸ ಮೂಡಿದೆ. ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಮಳೆರಾಯ ಕೃಪೆ ತೋರಿದ್ದು, ಮುಂಗಾರು ಮಳೆಯಿಂದ ಕೃಷಿ ಚಟುವಟಿಕೆಗಳು ಜೋರಾಗಿವೆ. ಹಾಗಿದ್ದರೇ ಯಾವ ಯಾವ ಡ್ಯಾಂಗಳು ತುಂಬಿವೆ, ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ವಿವರ.

Karnataka Dam Water Level: ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಜೋರು ಮಳೆ; ಜು.8ರ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ
ಕೆಆರ್​​ಎಸ್​​ ಜಲಾಯಶ
Follow us
|

Updated on: Jul 08, 2023 | 6:36 AM

ಬೆಂಗಳೂರು: ಕರ್ನಾಟಕದಲ್ಲಿ ಮಳೆಯ (Karnataka Rain) ಅಬ್ಬರ ಜೋರಾಗಿದ್ದು, ಜನರ ಮೊಗದಲ್ಲಿ ಸಂತಸ ಮೂಡಿದೆ. ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಮಳೆರಾಯ ಕೃಪೆ ತೋರಿದ್ದು, ಮುಂಗಾರು ಮಳೆಯಿಂದ (Monsoon) ಕೃಷಿ ಚಟುವಟಿಕೆಗಳು ಜೋರಾಗಿವೆ. ಇನ್ನು ಕುಡಿಯುವ ನೀರಿಗಾಗಿ ಸಂಕಷ್ಟ ಅನುಭವಿಸುತ್ತಿದ್ದ ಜನರು ನಿರಾಳರಾಗಿದ್ದಾರೆ. ಆದರೂ ಕೂಡ ರಾಜ್ಯದ ಜೀವನಾಡಿಗಳಾಗಿರುವ ಪ್ರಮುಖ ಜಲಾಶಯಗಳು ಇನ್ನೂ ಭರ್ತಿಯಾಗಬೇಕಿವೆ. ಇದರೊಂದಿಗೆ ಇಂದಿನ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ (Karnataka Dam Water Level) ಹೀಗಿದೆ.

ಡ್ಯಾಂಗಳ ನೀರಿನ ಮಟ್ಟ

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಒಟ್ಟು ಸಾಮರ್ಥ್ಯ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್​​)
ಕೆಆರ್​ಎಸ್​ ಜಲಾಶಯ (KRS Dam) 38.04 49.45 10.57 39.3 3966
ಆಲಮಟ್ಟಿ ಜಲಾಶಯ (Almatti Dam) 519.6 123.08 19.14 57.39 0
ತುಂಗಭದ್ರಾ ಜಲಾಶಯ (Tungabhadra Dam) 497.71 105.79 3.08 58.21 302
ಮಲಪ್ರಭಾ ಜಲಾಶಯ (Malaprabha Dam) 633.8 37.73 6.88 12.5 0
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 15.83 38.38 23,252
ಕಬಿನಿ ಜಲಾಶಯ (Kabini Dam) 696.13 19.52 7.5 15.25 16218
ಭದ್ರಾ ಜಲಾಶಯ (Bhadra Dam) 657.73 71.54 26.15 46.5 7232
ಘಟಪ್ರಭಾ ಜಲಾಶಯ (Ghataprabha Dam) 662.91 51 4.13 7.73 816
ಹೇಮಾವತಿ ಜಲಾಶಯ (Hemavathi Dam) 890.58 37.1 14.14 29.51 4444
ವರಾಹಿ ಜಲಾಶಯ (Varahi Dam) 594.36 31.1 3.29 5.7 2642
ಹಾರಂಗಿ ಜಲಾಶಯ (Harangi Dam)​​ 871.38 8.5 3.39 6.85 2776
ಸೂಫಾ (Supa Dam) 564.33 145.33 30.88 29.1 11581