Karnataka Dams Water Level: ಕೆಆರ್​ಎಸ್ ಅಣೆಕಟ್ಟು ಶೇ.86ರಷ್ಟು ಭರ್ತಿ, ಕರ್ನಾಟಕದ ವಿವಿಧ ಅಣೆಕಟ್ಟುಗಳ ಸದ್ಯದ ಸ್ಥಿತಿಗತಿ ಹೀಗಿವೆ

| Updated By: Rakesh Nayak Manchi

Updated on: Jul 09, 2022 | 11:00 AM

ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ: ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದು, ವಿವಿಧ ಅಣೆಕಟ್ಟುಗಳಿಗೆ ನೀರಿನ ಒಳ ಹರಿವು ಹೆಚ್ಚಾಗುತ್ತಿದೆ. ರಾಜ್ಯದ ವಿವಿಧ ಅಣೆಕಟ್ಟುಗಳ ಸದ್ಯದ ಸ್ಥಿತಿಗತಿ ಹೀಗಿವೆ.

Karnataka Dams Water Level: ಕೆಆರ್​ಎಸ್ ಅಣೆಕಟ್ಟು ಶೇ.86ರಷ್ಟು ಭರ್ತಿ, ಕರ್ನಾಟಕದ ವಿವಿಧ ಅಣೆಕಟ್ಟುಗಳ ಸದ್ಯದ ಸ್ಥಿತಿಗತಿ ಹೀಗಿವೆ
ಹಾರಂಗಿ ಡ್ಯಾಂ
Follow us on

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಇತರೆ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಕೆಆರ್​ಎಸ್ ಶೇ.86ರಷ್ಟು ಭರ್ತಿಗೊಂಡರೆ, ತುಂಗಾಭದ್ರಾ ಶೇ. 64, ಕಬಿನಿ ಜಲಾಶಯದಲ್ಲಿ ಶೇ. 85, ಮಲಪ್ರಭಾ ಶೇ. 34, ಘಟಪ್ರಭಾ ಶೇ. 18, ಲಿಂಗನಮಕ್ಕಿ ಶೇ.28, ಹಾರಂಗಿ ಶೇ. 79, ಆಲಮಟ್ಟಿ ಡ್ಯಾಂ ಶೇ.52ರಷ್ಟು ಭರ್ತಿಯಾಗಿವೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (Karnataka Reservoir Water Level)ದ  ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಧಾರಕಾರ ಮಳೆ ನಡುವೆ ಉಡುಪಿಯ ಮರವಂತೆ ಬೀಚ್​ನಲ್ಲಿ ಪ್ರವಾಸಿಗರ ಹುಚ್ಚಾಟ!

ಕೆಆರ್​ಎಸ್​ ಜಲಾಶಯ (KRS Dam) ಗರಿಷ್ಠ ನೀರಿನ ಮಟ್ಟ- 38.04 ಮೀಟರ್, ಗರಿಷ್ಠ ಸಾಮರ್ಥ್ಯ- 49.45 ಟಿಎಂಸಿ, ಇಂದಿನ ನೀರಿನ ಮಟ್ಟ- 42.34 ಟಿಎಂಸಿ, ಇಂದಿನ ಒಳಹರಿವು- 38,858 ಕ್ಯೂಸೆಕ್ಸ್​, ಇಂದಿನ ಹೊರಹರಿವು-3,453 ಕ್ಯೂಸೆಕ್ಸ್,​​

ವರಾಹಿ ಜಲಾಶಯ (Varahi Dam) ಗರಿಷ್ಠ ಮಟ್ಟ- 594.36 ಮೀಟರ್, ಒಟ್ಟು ಸಾಮರ್ಥ್ಯ – 31.10 ಟಿಎಂಸಿ, ಇಂದಿನ ನೀರಿನ ಮಟ್ಟ- 6.43 ಟಿಎಂಸಿ, ಇಂದಿನ ಒಳಹರಿವು- 8288 ಕ್ಯೂಸೆಕ್ಸ್​, ಇಂದಿನ ಹೊರಹರಿವು- 0​​

ಹಾರಂಗಿ ಜಲಾಶಯ (Harangi Dam) ಗರಿಷ್ಠ ಮಟ್ಟ-871.42 ಮೀಟರ್, ಒಟ್ಟು ಸಾಮರ್ಥ್ಯ – 8.50 ಟಿಎಂಸಿ, ಇಂದಿನ ನೀರಿನ ಮಟ್ಟ- 6.74 ಟಿಎಂಸಿ, ಇಂದಿನ ಒಳಹರಿವು- 11317 ಕ್ಯೂಸೆಕ್ಸ್, ​ಇಂದಿನ ಹೊರಹರಿವು- 12567 ಕ್ಯೂಸೆಕ್ಸ್​​

ಇದನ್ನೂ ಓದಿ: ಕೊಡಗಿನಲ್ಲಿ ಇಂದೂ ಕೂಡಾ ಶಾಲಾ -ಕಾಲೇಜುಗಳಿಗೆ ರಜೆ; ಉಡುಪಿಯಲ್ಲಿ ಭಾರಿ ಮಳೆಯ ಎಚ್ಚರಿಕೆ

ಹೇಮಾವತಿ ಜಲಾಶಯ (Hemavathi Dam) ಗರಿಷ್ಠ ಮಟ್ಟ- 890.58 ಮೀಟರ್, ಒಟ್ಟು ಸಾಮರ್ಥ್ಯ – 37.10 ಟಿಎಂಸಿ, ಇಂದಿನ ನೀರಿನ ಮಟ್ಟ- 31.06 ಟಿಎಂಸಿ, ಇಂದಿನ ಒಳಹರಿವು-18221 ಕ್ಯೂಸೆಕ್ಸ್​​, ಇಂದಿನ ಹೊರಹರಿವು- 250 ಕ್ಯೂಸೆಕ್ಸ್​

ಕಬಿನಿ ಜಲಾಶಯ (Kabini Dam) ಗರಿಷ್ಠ ನೀರಿನ ಮಟ್ಟ- 696.13 ಮೀಟರ್, ಒಟ್ಟು ಸಾಮರ್ಥ್ಯ – 19.09 ಟಿಎಂಸಿ, ಇಂದಿನ ನೀರಿನ ಮಟ್ಟ- 16.49 ಟಿಎಂಸಿ, ಇಂದಿನ ಒಳಹರಿವು- 17353 ಕ್ಯೂಸೆಕ್ಸ್​, ಇಂದಿನ ಹೊರಹರಿವು- 2875 ಕ್ಯೂಸೆಕ್ಸ್​​

ಲಿಂಗನಮಕ್ಕಿ ಜಲಾಶಯ (Linganamakki Dam) ಗರಿಷ್ಠ ಮಟ್ಟ- 554.4 ಮೀಟರ್, ಒಟ್ಟು ಸಾಮರ್ಥ್ಯ – 151.75 ಟಿಎಂಸಿ, ಇಂದಿನ ನೀರಿನ ಮಟ್ಟ- 43.23 ಟಿಎಂಸಿ, ಇಂದಿನ ಒಳಹರಿವು- 56645 ಕ್ಯೂಸೆಕ್ಸ್​ಇಂದಿನ ಹೊರಹರಿವು- 284 ಕ್ಯೂಸೆಕ್ಸ್

ಸೂಪಾ ಜಲಾಶಯ (Supa Dam) ಗರಿಷ್ಠ ನೀರಿನ ಮಟ್ಟ- 564.00 ಮೀಟರ್, ಒಟ್ಟು ಸಾಮರ್ಥ್ಯ- 145.33 ಟಿಎಂಸಿ, ಇಂದಿನ ನೀರಿನ ಮಟ್ಟ- 31.53 ಟಿಎಂಸಿ, ಇಂದಿನ ಒಳಹರಿವು- 28526 ಕ್ಯೂಸೆಕ್ಸ್​ಇಂದಿನ ಹೊರಹರಿವು- 0 ಕ್ಯೂಸೆಕ್ಸ್​​

ಇದನ್ನೂ ಓದಿ: ENG vs IND: ಭಾರತ-ಇಂಗ್ಲೆಂಡ್ 2ನೇ ಟಿ20ಗೆ ಇದೆಯೆ ಮಳೆಯ ಕಾಟ?: ಇಲ್ಲಿದೆ ಹವಾಮಾನ ವರದಿ

ತುಂಗಾಭದ್ರಾ ಜಲಾಶಯ (Tungabhadra Dam) ಗರಿಷ್ಠ ನೀರಿನ ಮಟ್ಟ- 497.71 ಮೀಟರ್, ಒಟ್ಟು ಸಾಮರ್ಥ್ಯ- 100.86 ಟಿಎಂಸಿ, ಇಂದಿನ ನೀರಿನ ಮಟ್ಟ- 64.73 ಟಿಎಂಸಿ, ಇಂದಿನ ಒಳಹರಿವು- 73843 ಕ್ಯೂಸೆಕ್ಸ್​, ಇಂದಿನ ಹೊರಹರಿವು- 434 ಕ್ಯೂಸೆಕ್ಸ್​

ಭದ್ರಾ ಜಲಾಶಯ (Bhadra Dam) ಗರಿಷ್ಠ ನೀರಿನ ಮಟ್ಟ- 657.73 ಮೀಟರ್, ಒಟ್ಟು ಸಾಮರ್ಥ್ಯ – 71.54 ಟಿಎಂಸಿ, ಇಂದಿನ ನೀರಿನ ಮಟ್ಟ- 49.07 ಟಿಎಂಸಿ, ಇಂದಿನ ಒಳಹರಿವು- 29942 ಕ್ಯೂಸೆಕ್ಸ್, ​ಇಂದಿನ ಹೊರಹರಿವು- 143 ಕ್ಯೂಸೆಕ್ಸ್​​

ಮಲಪ್ರಭಾ ಜಲಾಶಯ (Malaprabha Dam) ಗರಿಷ್ಠ ನೀರಿನ ಮಟ್ಟ- 633.80 ಮೀಟರ್, ​ಒಟ್ಟು ಸಾಮರ್ಥ್ಯ – 37.73 ಟಿಎಂಸಿ, ಇಂದಿನ ನೀರಿನ ಮಟ್ಟ- 12.90 ಟಿಎಂಸಿ, ಇಂದಿನ ಒಳಹರಿವು- 4881 ಕ್ಯೂಸೆಕ್ಸ್​, ಇಂದಿನ ಹೊರಹರಿವು- 194 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ (Ghataprabha Dam) ಗರಿಷ್ಠ ಮಟ್ಟ- 662.94 ಮೀಟರ್, ​ಒಟ್ಟು ಸಾಮರ್ಥ್ಯ – 51.00 ಟಿಎಂಸಿ, ಇಂದಿನ ನೀರಿನ ಮಟ್ಟ- 8.98 ಟಿಎಂಸಿ, ಇಂದಿನ ಒಳಹರಿವು- 14608 ಕ್ಯೂಸೆಕ್ಸ್​​, ಇಂದಿನ ಹೊರಹರಿವು- 100 ಕ್ಯೂಸೆಕ್ಸ್

ಆಲಮಟ್ಟಿ ಜಲಾಶಯ (Alamatti Dam) ಗರಿಷ್ಠ ಮಟ್ಟ- 519.60 ಮೀಟರ್, ಒಟ್ಟು ಸಾಮರ್ಥ್ಯ – 123.08 ಟಿಎಂಸಿ, ಇಂದಿನ ನೀರಿನ ಮಟ್ಟ- 63.84 ಟಿಎಂಸಿ, ಇಂದಿನ ಒಳಹರಿವು- 75207 ಕ್ಯೂಸೆಕ್ಸ್​ಇಂದಿನ ಹೊರಹರಿವು- 451 ಕ್ಯೂಸೆಕ್ಸ್

ಇದನ್ನೂ ಓದಿ: Karnataka Rains Live Updates: ಕರ್ನಾಟಕದಲ್ಲಿ ಮುಂದುವರೆದ ಮಳೆ: ಜನ ಜೀವನ ತತ್ತರ, ಸಂಚಾರ ಸಂಪೂರ್ಣ ಅಸ್ತವ್ಯಸ್ತ