ಧಾರಕಾರ ಮಳೆ ನಡುವೆ ಉಡುಪಿಯ ಮರವಂತೆ ಬೀಚ್​ನಲ್ಲಿ ಪ್ರವಾಸಿಗರ ಹುಚ್ಚಾಟ!

ಧಾರಕಾರ ಮಳೆ ನಡುವೆ ಉಡುಪಿಯ ಮರವಂತೆ ಬೀಚ್​ನಲ್ಲಿ ಪ್ರವಾಸಿಗರ ಹುಚ್ಚಾಟ!

TV9 Web
| Updated By: sandhya thejappa

Updated on: Jul 09, 2022 | 10:23 AM

ಹವಾಮಾನ ಇಲಾಖೆ ಇಂದು ಉಡುಪಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಈ ಹಿನ್ನೆಲೆ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಉಡುಪಿ (Udupi) ಜಿಲ್ಲೆಯಾದ್ಯಂತ ಭಾರಿ ಮಳೆ (Heavy Rain) ಮುಂದುವರಿದಿದ್ದು, ಮುಂಜಾಗ್ರತ ಹಿನ್ನೆಲೆ ಜಿಲ್ಲಾಡಳಿತ ಶಾಲಾ- ಕಾಲೇಜುಗಳಿಗೆ ರಜೆ ನೀಡಿದೆ. ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದರೂ, ಮರವಂತೆ ಬೀಚ್ನಲ್ಲಿ ಪ್ರವಾಸಿಗರು ಹುಚ್ಚಾಟ ಮೆರೆದಿದ್ದಾರೆ. ರಸ್ತೆ ಬದಿ ಕಾರು ನಿಲ್ಲಿಸಿ ಪ್ರವಾಸಿಗರು ಬೀಚ್ಗೆ ಇಳಿದು ಸೆಲ್ಫಿಗೆ ಪೋಸ್ ಕೊಡುತ್ತಿದ್ದಾರೆ. ಸಮುದ್ರದಲ್ಲಿ ಆಟವಾಡಲು ಪೋಷಕರೇ ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ. ಇನ್ನು ಲೈಫ್ ಗಾರ್ಡ್ ಸಿಬ್ಬಂದಿಯನ್ನು ನೇಮಕ ಮಾಡಿದ್ದರೂ ಯಾರೋಬ್ಬರು ಕಾಣಿಸುತ್ತಿಲ್ಲ. ಹವಾಮಾನ ಇಲಾಖೆ ಇಂದು ಉಡುಪಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಈ ಹಿನ್ನೆಲೆ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ಒಟಿಟಿ ಪ್ರಿಯರಿಗೆ ಕಹಿ ಸುದ್ದಿ ನೀಡಿದ ಬಾಲಿವುಡ್​; ಸಿನಿಮಾ ರಿಲೀಸ್ ವಿಚಾರದಲ್ಲಿ ಭಾರೀ ಬದಲಾವಣೆ