ಬೆಂಗಳೂರು/ಬಳ್ಳಾರಿ : ರಜೆ (Leave) ವಿಚಾರವಾಗಿ ಬಳ್ಳಾರಿ (Bellary) ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ವಿರುದ್ಧ ಸಿಡಿದೆದ್ದ ಬಳ್ಳಾರಿ ಜಿಲ್ಲೆಯ ಡಿವೈಎಸ್ಪಿ ಎಸ್ಎಸ್ ಕಾಶಿ ಅವರಿಗೆ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ನೀಡಿ ವರ್ಗಾವಣೆ ಮಾಡಲಾಗಿದೆ. ಬಳ್ಳಾರಿಯ ಸಬ್ ಡಿವಿಜನ್ ಆಗಿರುವ ತೋರಣಗಲ್ ಡಿವೈಎಸ್ಪಿ ಎಸ್ಎಸ್ ಕಾಶಿ ಅವರನ್ನು ಎಸ್ಪಿ ಹುದ್ದೆ ಬಡ್ತಿಯೊಂದಿಗೆ ಮಡಿಕೇರಿಯ ಅರಣ್ಯ ಪ್ರದೇಶ ಸೆಲ್ಗೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರ ಜೊತೆಗೆ ರಾಜ್ಯ ಸರ್ಕಾರ ಇಂದು(ಜೂನ್ 28) ಒಟ್ಟು 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಅದರಲ್ಲಿ ಕೆಲವರನ್ನು ವಿವಿಧ ಇಲಾಖೆಗಳ ಆಯುಕ್ತರು ಹಾಗೂ ಉಪ ಆಯುಕ್ತರಾಗಿ ನೇಮಿಸಲಾಗಿದೆ.
ರಜೆ ವಿಚಾರವಾಗಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ರಂಜಿತ್ ಕುಮಾರ್ ವಿರುದ್ಧ ಸಿಡಿದೆದ್ದ ಸಂಡೂರು ಉಪವಿಭಾಗದ ಉಪ ಅಧೀಕ್ಷಕರಾಗಿರುವ ಡಿವೈಎಸ್ಪಿ ಆಗಿರುವ ಎಸ್ ಎಸ್ ಕಾಶಿ ಅವರಿಗೆ ಎಸ್ಪಿ ಹುದ್ದೆಯ ಬಡ್ತಿ ನೀಡಲಾಗಿದೆ. ಇದೀಗ ರಾಜ್ಯ ಸರ್ಕಾರ ಇವರನ್ನು ಮಡಿಕೇರಿ ಅರಣ್ಯ ಪ್ರದೇಶದ ಸೆಲ್ ಎಸ್ಪಿಯಾಗಿ ವರ್ಗಾಯಿಸಿದೆ.
, ವ್ಯಯಕ್ತಿಕ ಕಾರಣಕ್ಕಾಗಿ ಒಂದು ತಿಂಗಳು ಕಾಲ ರಜೆ ಕೋರಿ ಮೇ 25 ರಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದರು. ಕಾಶಿ ಅವರು ವೈಯಕ್ತಿಕ ಕಾರಣಕ್ಕೆ ಒಂದು ತಿಂಗಳು ರಜೆಗಾಗಿ ಮನವಿ ಮಾಡಿದ್ದರು. ಮಾನಸಿಕ ನೆಮ್ಮದಿಗಾಗಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುವುದಕ್ಕಾಗಿ ವೈಯಕ್ತಿಕ ರಜೆ ನೀಡಬೇಕೆಂದು ಅವರು ಕೋರಿದ್ದರು. ಆದರೆ, ಎಸ್ಪಿ ಕೇವಲ 5 ದಿನಗಳ ಕಾಲ ರಜೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಕಾಶಿ, ಎಸ್ಪಿ ನಡೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಡಿಜಿ, ಐಜಿಪಿ, ಎಡಿಜಿಪಿಗೆ ಪತ್ರ ಬರೆದು ಅಳಲು ಕಾಶೀ ಅವರು ತಮ್ಮ ತೋಡಿಕೊಂಡಿದ್ದರು.
1 ತಿಂಗಳು ರಜೆ ಕೇಳಿದರೆ ಕೇವಲ 5 ದಿನ ರಜೆ ನೀಡಲಾಗಿದೆ. ರಜೆ ನೀಡದೆ ತಾರತಮ್ಯ ಮಾಡಲಾಗಿದೆ. ತಮಗೆ ಕಿರುಕುಳ ನೀಡಲಾಗುತ್ತಿದೆ. ಈ ಮೂಲಕ ಮಾನಸಿಕ ನೆಮ್ಮದಿ ಕದಡಿದ್ದಾರೆ. ಮಾನಸಿಕ ನೆಮ್ಮದಿ ಇಲ್ಲದೆ ಕರ್ತವ್ಯದ ವೇಳೆ ಲೋಪವಾದರೆ ಇಲಾಖೆಯೇ ಹೊಣೆ ಎಂದು ಬಳ್ಳಾರಿ ಎಸ್ಪಿ ರಂಜಿತ್ ಕುಮಾರ್ ವಿರುದ್ಧ ಪತ್ರ ಬರೆದಿದ್ದರು. ಡಿವೈಎಸ್ಪಿಯ ರಜೆ ವಿಚಾರದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಪ್ರಸ್ತುತ ಬಿಬಿಎಂಪಿ ವಿಶೇಷ ಆಯುಕ್ತರಾಗಿರುವ ಉಜ್ವಲ್ ಕುಮಾರ್ ಘೋಷ್ಗೆ ಬಾಗಲಕೋಟೆ, ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನ, ಪುನರ್ವಸತಿ ಆಯುಕ್ತರಾಗಿ ಹೆಚ್ಚುವರಿ ಹೊಣೆ ನೀಡಲಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ