ಬೆಂಗಳೂರು: ‘ಹೆಲ್ತ್ ಆ್ಯಂಡ್ ವೆಲ್‌ನೆಸ್ ಕೇಂದ್ರಗಳಲ್ಲಿ ನಾವೇ ನಂ.1′ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವಿಟರ್ ಮೂಲಕ ಸಂತಸ ಹೊರ ಹಾಕಿದ್ದಾರೆ. ಕೇಂದ್ರ ಸರ್ಕಾರ ನಡೆಸಿದ ಱಂಕಿಂಗ್ನಲ್ಲಿ ರಾಜ್ಯವೇ ಪ್ರಥಮ ಸ್ಥಾನ ಪಡೆದಿದೆ ಇಂದು ಡಾ.ಕೆ.ಸುಧಾಕರ್ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕದ ಯೋಜನೆ ಅನುಷ್ಠಾನದಲ್ಲಿ ಹೆಲ್ತ್ ಆ್ಯಂಡ್ ವೆಲ್‌ನೆಸ್ ಕೇಂದ್ರಗಳ (ಹೆಚ್‌ಡಬ್ಲ್ಯುಸಿ) ಅನುಷ್ಠಾನದಲ್ಲಿ ಕರ್ನಾಟಕ ಇಡೀ ದೇಶದಲ್ಲೇ ಅತ್ಯುತ್ತಮ ರಾಜ್ಯವಾಗಿ ಹೊರಹೊಮ್ಮಿದೆ. ಈ ಮಹೋನ್ನತ ಸಾಧನೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಾನು ಪ್ರಶಂಸಿಸುತ್ತೇನೆ ಎಂದು ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Karnataka emerges as the best state in the country in implementation of Health and Wellness Centres (HWCs) under Ayushman Bharat Program. I appreciate all the officers and staff of Health and Family Welfare Department on this outstanding achievement. @PMOIndia @CMofKarnataka pic.twitter.com/OGJ5uQJCcD
— Dr Sudhakar K (@mla_sudhakar) May 18, 2021
ಇದನ್ನೂ ಓದಿ: ರಾಜೀವ ಗಾಂಧಿ ಹಂತಕನಿಂದ ಕೊವಿಡ್ ಫಂಡ್ಗೆ 5 ಸಾವಿರ ದೇಣಿಗೆ