ಸ್ನಾನಗೃಹ ಅಲಂಕಾರಕ್ಕೆ ಇಲ್ಲಿವೆ 6 ವಿವಿಧ ಗಿಡಗಳು

ಮನೆಯಲ್ಲಿಟ್ಟ ಗಿಡಗಳನ್ನು ನೋಡುತ್ತಿದ್ದರೆ ನೆಮ್ಮದಿಯ ಘಳಿಗೆ ಹುಟ್ಟುತ್ತದೆ. ಮನೆಯ ಹೊರಗೆ, ಒಳಗೆ ಗಿಡಗಳನ್ನು ಅಲಂಕರಿಸುವ ಜೊತೆಗೆ ಸ್ನಾನದ ಗೃಹದಲ್ಲೂ ಗಿಡಗಳನ್ನು ಇಡಬಹುದು. ಇದರಿಂದ ಕಣ್ಣಿಗೂ ತಂಪು, ಮನಸ್ಸಿಗೂ ಇಂಪು ಎನ್ನುವಂತಾಗುತ್ತದೆ. ಹಾಗಂತ ಸ್ನಾನಗೃಹಕ್ಕೆ ಎಲ್ಲ ಗಿಡಗಳನ್ನು ಇಡಲು ಸಾಧ್ಯನಾ? ಖಂಡಿತಾ ಇಲ್ಲ.

ಸ್ನಾನಗೃಹ ಅಲಂಕಾರಕ್ಕೆ ಇಲ್ಲಿವೆ 6 ವಿವಿಧ ಗಿಡಗಳು
ಸ್ನಾನಗೃಹದ ಸೌಂದರ್ಯವನ್ನು ಹೆಚ್ಚಿಸುವ ಗಿಡ
Follow us
sandhya thejappa
|

Updated on: May 18, 2021 | 5:01 PM

ಬೆಂಗಳೂರು: ಮನೆಯನ್ನು ಅಲಂಕಾರ ಮಾಡುವುದು ಒಂದು ಕಲೆ. ಎಲ್ಲರಿಗೂ ಈ ಬಗ್ಗೆ ಆಸಕ್ತಿ ಇರಲ್ಲ. ಹೆಚ್ಚಾಗಿ ಮಹಿಳೆಯರು ಮನೆಯನ್ನು ಅಲಂಕರಿಸುವ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಬೇರೆಯವರ ಮನೆಗೆ ಹೋಗಿ ಬಂದಾಗ ಅವರಂತೆ ನಮ್ಮ ಮನೆಯನ್ನೂ ಸುಂದರವಾಗಿಸಬೇಕು.. ಎಲ್ಲರೂ ನಮ್ಮ ಮನೆಯನ್ನು ನೋಡಿ ವಾವ್ ಎಂದು ಹೇಳಬೇಕು ಅಂತೆಲ್ಲಾ ಅಂದುಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆ ಶ್ರಮವನ್ನು ವಹಿಸುತ್ತಾರೆ. ಹೆಚ್ಚಾಗಿ ಹೂವಿನ ಗಿಡಗಳಿಂದ ಮನೆಯನ್ನು ಆಕರ್ಷಿಸುತ್ತಾರೆ. ಬಣ್ಣದ ಎಲೆಗಳ ಹೂವುಗಳನ್ನು ಮನೆಯಲ್ಲಿ ಇಟ್ಟಾಗ ಮನಸ್ಸಿಗೂ ನೆಮ್ಮದಿ ಸಿಗುವ ಜೊತೆಗೆ ಮನೆಯೂ ಸುಂದರವಾಗಿ ಕಾಣುತ್ತದೆ.

ಮನೆಯಲ್ಲಿಟ್ಟ ಗಿಡಗಳನ್ನು ನೋಡುತ್ತಿದ್ದರೆ ನೆಮ್ಮದಿಯ ಘಳಿಗೆ ಹುಟ್ಟುತ್ತದೆ. ಮನೆಯ ಹೊರಗೆ, ಒಳಗೆ ಗಿಡಗಳನ್ನು ಅಲಂಕರಿಸುವ ಜೊತೆಗೆ ಸ್ನಾನದ ಗೃಹದಲ್ಲೂ ಗಿಡಗಳನ್ನು ಇಡಬಹುದು. ಇದರಿಂದ ಕಣ್ಣಿಗೂ ತಂಪು, ಮನಸ್ಸಿಗೂ ಇಂಪು ಎನ್ನುವಂತಾಗುತ್ತದೆ. ಹಾಗಂತ ಸ್ನಾನಗೃಹಕ್ಕೆ ಎಲ್ಲ ಗಿಡಗಳನ್ನು ಇಡಲು ಸಾಧ್ಯನಾ? ಖಂಡಿತಾ ಇಲ್ಲ. ಕೆಲವು ಗಿಡಗಳು ಸ್ನಾನ ಗೃಹಕ್ಕೆ ಸೂಕ್ತವಾಗಿವೆ. ಹಾಗಾದರೆ ಸ್ನಾನ ಗೃಹಕ್ಕೆ ಸೂಕ್ತವಾಗಿರುವ ಗಿಡಗಳು ಯಾವುವು? ಇವೆಲ್ಲವನ್ನೂ ಈ ಕೆಳಗೆ ಹೇಳಿದ್ದೇವೆ ನೋಡಿ.

* ಪೊಥೋಸ್ (Pothos) ಈ ಪೊಥೋಸ್ ಗಿಡ ಎಲ್ಲ ಕಾಲಕ್ಕೂ ಹೊಂದಿಕೊಂಡು ಬದುಕುತ್ತದೆ. ಇದನ್ನು ಪಾಟ್ ಒಳಗೆ ಹಾಕಿ ಇಡಬಹುದು. ಪಾಟ್ ಬದಲಿಗೆ ಇನ್ನೂ ಚೆನ್ನಾಗಿ ಕಾಣಿಸಬೇಕಾದರೆ ಗ್ಲಾಸ್ ಒಳಗೂ ಇದನ್ನೂ ಹಾಕಿ ಇಡಬಹುದು. ಈ ಗಿಡ ಸ್ನಾನ ಗೃಹದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದು ಬೇಗನೆ ದೊಡ್ಡದಾಗಿ ಬೆಳೆಯುತ್ತದೆ. ಮತ್ತು ಇದು ಸುಲಭವಾಗಿ ಸಾಯುವ ಗಿಡವಲ್ಲ.

*ಲಿಲಿ (Lily) ಲಿಲಿ ಗಿಡ ತೇವಾಂಶ ಮತ್ತು ಕಡಿಮೆ ಬೆಳಕಿನಲ್ಲಿ ಬೆಳೆಯುತ್ತದೆ. ಈ ಗಿಡ ಗಾಳಿಯನ್ನು ಶುದ್ಧೀಕರಿಸುವ ಶಕ್ತಿಯನ್ನು ಹೊಂದಿರುತ್ತದೆ. ಈ ಗಿಡ ಸ್ನಾನದ ಗೃಹದಲ್ಲಿ ಇರಿಸಿದರೆ ನೋಡಲು ಚೆನ್ನಾಗಿ ಕಾಣುವ ಜೊತೆಗೆ ಮನಸ್ಸಿಗೂ ನೆಮ್ಮದಿ ದೊರಕುವಂತಾಗುತ್ತದೆ.

*ಬೋಸ್ಟನ್ ಫರ್ನ್ (Boston Fern) ಇದು ಕೂಡಾ ಗಟ್ಟಿ ಮುಟ್ಟಾದ ಗಿಡ. ಈ ಗಿಡ ಸ್ನಾನಗೃಹದ ತೇವಾಂಶವನ್ನು ಹೊಂದಿಕೊಂಡು ಬೆಳೆಯುತ್ತದೆ. ಇದನ್ನು ಸ್ನಾನಗೃಹದ ಕಿಟಕಿಯ ಪಕ್ಕದಲ್ಲಿ ನೇತು ಹಾಕಬಹುದು. ಅಲ್ಲದೇ ಬಾತ್ರೂಂ ಬಾಗಿಲಿನ ಪಕ್ಕದಲ್ಲೂ ಇಡಬಹುದು. ಸ್ನಾನಗೃಹಕ್ಕೆ ಈ ಗಿಡ ಆಕರ್ಷಣೆಯಾಗಿದೆ.

*ಬೆಗೊನಿಯಾಸ್ (Begonias) ವರ್ಣರಂಜಿತ ಎಲೆಗಳನ್ನು ಹೊಂದಿರುವ ಈ ಸಸ್ಯಗಳನ್ನು ನೋಡಿಕೊಳ್ಳುವುದು ಸುಲಭ ಮತ್ತು ಸುಂದರವಾದ ಎಲೆಗಳನ್ನು ಹೊಂದಿರುತ್ತದೆ. ಈ ಗಿಡ ಎಲ್ಲ ಕಾಲಕ್ಕೂ ಹೊಂದಿಕೊಂಡು ಬೆಳೆಯುತ್ತದೆ. ಸ್ನಾನಗೃಹಕ್ಕೆ ಹೆಚ್ಚಿನ ಸೌಂದರ್ಯವನ್ನು ನೀಡುವ ಶಕ್ತಿಯನ್ನು ಈ ಬೆಗೊನಿಯಾಸ್ ಗಿಡ ಹೊಂದಿದೆ.

*ಸ್ಪೈಡರ್ ಗಿಡ (Spider plant) ಈ ಗಿಡವನ್ನು ಸಾಯಿಸುವುದು ಅಥವಾ ಹಾಳು ಮಾಡುವುದು ತುಂಬಾ ಕಷ್ಟ. ಆದರೆ ಈ ಗಿಡದ ನಿರ್ವಹಣೆ ತುಂಬಾ ಸುಲಭ. ಈ ಗಿಡವಿರುವ ಪ್ರದೇಶದಲ್ಲಿ ಉತ್ತಮ ಗಾಳಿ ಸಿಗುತ್ತದೆ. ಉಸಿರಾಟಕ್ಕೆ ಯೋಗ್ಯವಾದ ಗಾಳಿ ಈ ಗಿಡದಿಂದ ದೊರಕುತ್ತದೆ. ಹೆಚ್ಚು ಆಕರ್ಷಣೀಯವಾಘಿ ಕಾಣುವ ಈ ಗಿಡ ಸ್ನಾನಗೃಹದಲ್ಲಿ ಇಡಲು ಹೇಳು ಮಾಡಿಸಿದಂತಾಗುತ್ತದೆ.

*ಲೋಳೆಸರ (Aloe vera) ಲೋಳೆಸರ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಗಿಡ. ಈ ಗಿಡ ಉದ್ದ ಉದ್ದವಾದ ದಪ್ಪ ಎಲೆಗಳಿಂದ ಕೂಡಿರುತ್ತದೆ. ಈ ಗಿಡದ ಎಲೆಯಲ್ಲಿರುವ ಜೆಲ್ನ ತಲೆಗೆ, ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಸೌಂದರ್ಯದ ಬಗ್ಗೆ ಹೆಚ್ಚು ಗಮನಹರಿಸುವವರು ಈ ಲೋಳೆಸರದ ಸಾಮರ್ಥ್ಯವನ್ನು ತಿಳಿದಿರುತ್ತಾರೆ. ಅದರಂತೆ ಈ ಗಿಡವನ್ನು ಸ್ನಾನಗೃಹದಲ್ಲೂ ಇಟ್ಟರೆ ಕೋಣೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ

World Hypertension Day 2021: ಹೈಪರ್​ ಟೆನ್ಶನ್​ ನಿಯಂತ್ರಣ ಹೇಗೆ ಸಾಧ್ಯ? ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಪರಿಹಾರವಿದೆಯೇ?

World AIDS Vaccine Day 2021: ಹೆಚ್​ಐವಿ ಏಡ್ಸ್​ಗೆ ತಿರುಗದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ?

(Six plants fit for Bathroom Decoration)