World Hypertension Day 2021: ಹೈಪರ್​ ಟೆನ್ಶನ್​ ನಿಯಂತ್ರಣ ಹೇಗೆ ಸಾಧ್ಯ? ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಪರಿಹಾರವಿದೆಯೇ?

ಪ್ರತಿ ವರ್ಷ ಮೇ 17ರಂದು ವಿಶ್ವ ಹೈಪರ್​ ಟೆನ್ಶನ್​ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಅಧಿಕ ರಕ್ತದೊತ್ತಡ ಉಂಟಾಗಲು ಪ್ರಮುಖ ಕಾರಣ ಹೈಪರ್​ ಟೆನ್ಶನ್​. ರಕ್ತದೊತ್ತಡ ನಿಯಂತ್ರಣ ಹೇಗೆ ಸಾಧ್ಯ? ಎಂಬುದನ್ನು ತಿಳಿಯೋಣ.

World Hypertension Day 2021: ಹೈಪರ್​ ಟೆನ್ಶನ್​ ನಿಯಂತ್ರಣ ಹೇಗೆ ಸಾಧ್ಯ? ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಪರಿಹಾರವಿದೆಯೇ?
World Hypertension Day 2021
Follow us
shruti hegde
|

Updated on: May 16, 2021 | 12:21 PM

ಪ್ರತಿ ವರ್ಷ ಮೇ 17ರಂದು ವಿಶ್ವ ಹೈಪರ್​ ಟೆನ್ಶನ್​ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಅಧಿಕ ರಕ್ತದೊತ್ತಡ ಉಂಟಾಗಲು ಪ್ರಮುಖ ಕಾರಣ ಹೈಪರ್​ ಟೆನ್ಶನ್​. ಪಸ್ತುತ ಸಮಯದಲ್ಲಿ ರಕ್ತದ ಒತ್ತಡ ನಿಯಂತ್ರಣ ಅತ್ಯವಶ್ಯಕ ಎಂದೇ ಹೇಳಬಹುದು. ಇಡೀ ದೇಶವು ಕೊವಿಡ್​ ಸೋಂಕಿನಿಂದ ಬಳಲುತ್ತಿರುವ ಈ ಸಂದರ್ಭದಲ್ಲಿ ಮಾನಸಿಕ ಒತ್ತಡಕ್ಕೆ ಸಿಲುಕದೇ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿರುಸಿಕೊಳ್ಳುವುದು ಒಳಿತು.

ಹೃದಯ ಸಂಬಂಧಿತ ಕಾಯಿಲೆ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯಗಳಂತಹ ಸಮಸ್ಯೆಗಳಿಗೆ ರಕ್ತದೊತ್ತಡ ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಆರೋಗ್ಯದ ಏರು-ಪೇರಿನಿಂದ ಉಂಟಾಗುವ ಬಿಪಿಯನ್ನು ನಿಯಂತ್ರಣಕ್ಕೆ ತರದಿದ್ದಲ್ಲಿ ಅಥವಾ ಮಾನಸಿಕ ಒತ್ತಡ, ರಕ್ತದೊತ್ತಡದ ಬಗ್ಗೆ ನಿರ್ಲಕ್ಷ್ಯವಹಿಸಿದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ನಾವು ನಮ್ಮ ಆಹಾರ ಕ್ರಮವನ್ನು ಶಿಸ್ತುಬದ್ಧವಾಗಿ ರೂಢಿಯಲ್ಲಿಟ್ಟುಕೊಳ್ಳಬೇಕು.

ಆಹಾರ ಕ್ರಮ ಹೇಗಿರಬೇಕು? ದಿನಕ್ಕೆ ಒಂದು ಟೀ ಸ್ಪೂನ್​ಅಷ್ಟು ಮಾತ್ರ ಉಪ್ಪು ಸೇವನೆ. ಆದಷ್ಟು ಕಡಿಮೆ ಉಪ್ಪು ಸೇವನೆಯಿಂದ ರಕ್ತದ ಒತ್ತಡ (ಹಥಪರ್​ ಟೆನ್ಶನ್​) ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚು ಪೊಟ್ಯಾಶಿಯಂ ಇರುವ ಆಹಾರ ಪದಾರ್ಥಗಳಿಂದ ದೂರ ಇರುವುದು ಒಳಿತು.

ಸರಿಯಾದ ಆಹಾರ ಕ್ರಮದೊಂದಿಗೆ ತೂಕವನ್ನು ಇಳಿಸಿ. ಸರಿಯಾದ ದೇಹದ ತೂಕ ಹೊಂದಿರುವ ಮೂಲಕ ನಿಮ್ಮ ಆರೋಗ್ಯದ ಸುರಕ್ಷತೆಯನ್ನು ಕಾಪಾಡಿಕೊಳ್ಳಬಹುದಾಗಿದೆ. ಹಣ್ಣು, ತರಕಾರಿಗಳನ್ನು ಸೇವಿಸಿ. ಉತ್ತಮ ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವುದರ ಮೂಲಕ ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಬಹುದು. ಜೊತೆಗೆ ಹೆಚ್ಚು ಕೊಬ್ಬಿನಾಂಶವಿರುವ ಆಹಾರ ಪದಾರ್ಥವನ್ನು ಕಡಿಮೆ ಸೇವಿಸಿ. ಪ್ರತಿನಿತ್ಯ ವ್ಯಾಯಾಮ, ಪ್ರಾಣಾಯಾಮದ ಜೊತೆಗೆ ದೇಹಕ್ಕೆ ಯೋಗಾಭ್ಯಾಸ ನೀಡುವ ಕ್ರಮವನ್ನು ರೂಢಿಯಲ್ಲಿಟ್ಟುಕೊಳ್ಳಿ. ವ್ಯಾಯಾಮದಲ್ಲಿ ದಿನನಿತ್ಯ ತೊಡಗುವುದರಿಂದ ಅದೆಷ್ಟೋ ರೋಗಗಳಿಂದ ಮುಕ್ತಿ ಹೊಂದಬಹುದು. ಜೊತೆಗೆ ದೇಹದಲ್ಲಿ ರಕ್ತ ಸಂಚಾರ ಸುಲಲಿತಗೊಳ್ಳುತ್ತದೆ. ಮತ್ತು ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ.

ಹೈ ಬಿಪಿ ನಿಯಂತ್ರಣ ಹೇಗೆ? ಬಿಪಿ ಇದ್ದವರು ಆದಷ್ಟು ವೈದ್ಯರ ಬಳಿ ಸಲಹೆ ಪಡೆದುಕೊಳ್ಳುವುದು ಉತ್ತಮ. ಆಹಾರದ ನಿಯಂತ್ರಣ ಮತ್ತು ಬಿಪಿ ನಿಯಂತ್ರಣಕ್ಕೆ ಬೇಕಾದ ಸಲಹೆಗಳನ್ನು ವೈದ್ಯರ ಬಳಿ ತೆಗೆದುಕೊಳ್ಳಿ. ಹೃದಯ ರಕ್ತನಾಳಗಳಿಗೆ ಸಂಬಂಧಿಸಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಟೊಮೆಟೋ ಸೇವನೆ ಉತ್ತಮ ಮಾರ್ಗ ಎಂಬುದನ್ನು ಅಧ್ಯಯನ ತಿಳಿಸಿದೆ. ಹೃದಯ ಬಡಿತ, ಹೃದಯದ ಒತ್ತಡದಂತಹ ಸಮಸ್ಯೆಗೆ ಪರಿಹಾರವಾಗಿ ಟೊಮೆಟೋ ಸೇವನೆ ಒಳಿತು. ಬಿಪಿ ಕಡಿಮೆ ಮಾಡಿಕೊಳ್ಳಲೂ ಸಹ ಟೊಮೆಟೋ ಉತ್ತಮ ಮಾರ್ಗ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಆದರೂ ಅವರವರ ದೇಹ ಪ್ರಕೃತಿಯಿಂದ ಬಿಪಿ, ಹೈಟೆನ್ಶನ್​ ಸಮಸ್ಯೆ ಉಂಟಾಗುವುದರಿಂದ ನೇರವಾಗಿ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಉತ್ತಮ.

ಇದನ್ನೂ ಓದಿ: Health Tips: ಲಾಕ್​ಡೌನ್​ನಲ್ಲಿ ಪಾಲಿಸಲೇಬೇಕಾದ ಸರಳ ಆರೋಗ್ಯ ಸೂತ್ರಗಳು

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ