AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ಮಾರ್ಗಸೂಚಿ ಜನವರಿ ಅಂತ್ಯದವರೆಗೆ ಮುಂದುವರಿಕೆ; ಫೆಬ್ರವರಿ 3-4ನೇ ವಾರದಲ್ಲಿ ಪ್ರಕರಣ ಇಳಿಕೆಯಾಗುವ ನಿರೀಕ್ಷೆ: ಸಚಿವ ಸುಧಾಕರ್

Dr Sudhakar: ಕೊವಿಡ್ ಮಾರ್ಗಸೂಚಿ ಈ ತಿಂಗಳಾಂತ್ಯದವರೆಗೂ ಮುಂದುವರೆಯಲಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ಫೆಬ್ರವರಿ 3-4 ನೇ ವಾರದಲ್ಲಿ ಪ್ರಕರಣ ಕಡಿಮೆಯಾಘುವ ನಿರೀಕ್ಷೆ ಇದೆ ಎಂದು ಸುಧಾಕರ್ ನುಡಿದಿದ್ದಾರೆ.

ಕೊವಿಡ್ ಮಾರ್ಗಸೂಚಿ ಜನವರಿ ಅಂತ್ಯದವರೆಗೆ ಮುಂದುವರಿಕೆ; ಫೆಬ್ರವರಿ 3-4ನೇ ವಾರದಲ್ಲಿ ಪ್ರಕರಣ ಇಳಿಕೆಯಾಗುವ ನಿರೀಕ್ಷೆ: ಸಚಿವ ಸುಧಾಕರ್
ಆರೋಗ್ಯ ಸಚಿವ ಡಾ.ಕೆ.ಸುಧಾಕರ
TV9 Web
| Updated By: shivaprasad.hs|

Updated on:Jan 14, 2022 | 10:06 AM

Share

ಕೊವಿಡ್ (Covid 19) ಮಾರ್ಗಸೂಚಿ ತಿಂಗಳಾಂತ್ಯದವರೆಗೂ ಮುಂದುವರೆಯಲಿದೆ. ಈ ಕುರಿತು ಸ್ವತಃ ಮುಖ್ಯಮಂತ್ರಿ ಬಸವರಾಜ ಬಸವರಾಜ ಬೊಮ್ಮಾಯಿಯವರೇ (CM Bommai) ಹೇಳಿದ್ದಾರೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Dr K Sudhakar) ಹೇಳಿಕೆ ನೀಡಿದ್ದಾರೆ.  ಹಲವೆಡೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಲಕ್ಷಣ ಇಲ್ಲವೆಂದು ಯಾರೂ ನಿರ್ಲಕ್ಷ್ಯ ಮಾಡಲು ಹೋಗಬೇಡಿ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬೂಸ್ಟರ್‌ ಡೋಸ್ ಪಡೆಯಲು ಅರ್ಹರಿರುವವರು ಪಡೆಯಿರಿ. 2ನೇ ಡೋಸ್ ಲಸಿಕೆ ಪಡೆಯದವರೂ ಆದಷ್ಟು ಬೇಗ ಪಡೆಯಿರಿ. ಕ್ರಮಗಳನ್ನು ಜನರೇ ಸ್ವಯಂಪ್ರೇರಿತವಾಗಿ ತೆಗೆದುಕೊಳ್ಳಬೇಕು ಎಂದು ಸುಧಾಕರ್ ಸಲಹೆ ನೀಡಿದ್ದಾರೆ.

ಲಾಕ್​ಡೌನ್ ಕುರಿತು ಮಾತನಾಡಿರುವ ಸುಧಾಕರ್, ‘‘ಲಾಕ್‌ಡೌನ್ ಮೂಲಕ ಕೊರೊನಾ ನಿಯಂತ್ರಿಸುವುದು ಸರಿಯಲ್ಲ. ಸಿಎಂಗಳ ಜತೆಗಿನ ಸಭೆಯಲ್ಲಿ ಪ್ರಧಾನಿಯೂ ಇದನ್ನೇ ಹೇಳಿದ್ದಾರೆ. ಜನರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಅನಗತ್ಯವಾಗಿ ಜನಜಂಗುಳಿ ಸೇರುವುದು, ಸಮಾರಂಭ ಮಾಡಬೇಡಿ’’ ಎಂದಿದ್ದಾರೆ.

ಶೇ.5-6ರಷ್ಟು ಸೋಂಕಿತರು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ದಾದಿಯರು, ವೈದ್ಯರಿಗೂ ಕೊವಿಡ್ ಸೋಂಕು ದೃಢಪಡುತ್ತಿದೆ. ಇದು ನಮಗೆ ಆತಂಕದ ಸಂಗತಿಯಾಗಿದೆ ಎಂದು ಆರೋಗ್ಯ ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ. ಒಂದೇ ವಾರದಲ್ಲಿ ಕೊರೊನಾ ಕಡಿಮೆಯಾಗುವುದು ಸಾಧ್ಯವಿಲ್ಲ. 5-6 ಪಟ್ಟು ಹೆಚ್ಚು ವೇಗವಾಗಿ ಹರಡುವ ಪ್ರಭೇದ ಇದು ಎಂದು ಅವರು ಹೇಳಿದ್ದಾರೆ. ಫೆಬ್ರವರಿ ಮೊದಲ ವಾರದಲ್ಲಿ ಕೊರೊನಾ ಪೀಕ್‌ಗೆ ಹೋಗುತ್ತದೆ. ಫೆಬ್ರವರಿ 3-4ನೇ ವಾರದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ವೀಕೆಂಡ್ ಕರ್ಫ್ಯೂ ಹಿನ್ನೆಲೆ: ಮದ್ಯಪ್ರಿಯರಿಗೆ ಮತ್ತೆ ಶಾಕ್: ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಇಂದು ರಾತ್ರಿ 10ರಿಂದ ಸೋಮವಾರ ಬೆಳಗ್ಗೆವರೆಗೆ ಬಾರ್ ಬಂದ್ ಮಾಡಲಾಗುತ್ತದೆ ಎಂದು ಅಬಕಾರಿ ಇಲಾಖೆ ಸಚಿವ ಕೆ.ಗೋಪಾಲಯ್ಯ ಟಿವಿ9ಗೆ ಮಾಹಿತಿ ನೀಡಿದ್ದಾರೆ. ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ವೇಳೆ ಮದ್ಯದಂಗಡಿ ಬಂದ್ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

Covid 19: ದೇಶದಲ್ಲಿ ಏರಿಕೆಯಾಗುತ್ತಿದೆ ಕೊರೊನಾ; ಒಂದೇ ದಿನ 2,64,202 ಪ್ರಕರಣ ಪತ್ತೆ, 315 ಮಂದಿ ಸಾವು

ದೆಹಲಿಯಲ್ಲಿ ಜ.9-12ರವರೆಗೆ ಕೊವಿಡ್​ನಿಂದ ಮೃತಪಟ್ಟ 92 ರೋಗಿಗಳಲ್ಲಿ ಕೇವಲ 8 ಜನ ಸಂಪೂರ್ಣ ಲಸಿಕೆ ಪಡೆದವರು: ವರದಿ

Published On - 10:00 am, Fri, 14 January 22