Covid 19: ದೇಶದಲ್ಲಿ ಏರಿಕೆಯಾಗುತ್ತಿದೆ ಕೊರೊನಾ; ಒಂದೇ ದಿನ 2,64,202 ಪ್ರಕರಣ ಪತ್ತೆ, 315 ಮಂದಿ ಸಾವು
ಭಾರತದಲ್ಲಿ ಕೊರೊನಾ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರ 14.78 ಇದ್ದು, ನಿನ್ನೆ ಒಂದೇ ದಿನ 2,64,202 ಪ್ರಕರಣಗಳು ವರದಿಯಾಗಿವೆ.
ಭಾರತರದಲ್ಲಿ ಕೊವಿಡ್ ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ. ನಿನ್ನೆಗಿಂತ (ಗುರುವಾರ) ಇಂದು 6.7 ಪ್ರತಿಶತ ಪ್ರಕರಣಗಳು ಏರಿಕೆಯಾಗಿವೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 2,64,202 ಪ್ರಕರಣಗಳು ದಾಖಲಾಗಿವೆ. 315 ಜನರು ಸಾವನ್ನಪ್ಪಿದ್ದು, ಒಟ್ಟಾರೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 4,85,350ಕ್ಕೆ ತಲುಪಿದೆ. ದೇಶದಲ್ಲಿ ಪ್ರಸ್ತುತ 12,72,073 ಸಕ್ರಿಯ ಪ್ರಕರಣಗಳಿದ್ದು, ದೈನಂದಿನ ಪಾಸಿಟಿವಿಟಿ ದರ ಶೇ.14.78ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 1,09,345 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 3,48,24,706 ಕ್ಕೆ ತಲುಪಿದೆ.
ಭಾರತದಲ್ಲಿ ಕೊವಿಡ್ ಪ್ರಕರಣಗಳ ಕುರಿತ ಎಎನ್ಐ ಮಾಹಿತಿ:
The country recorded 315 COVID fatalities in the last 24 hours, taking the total death toll to 4,85,350: Union Health Ministry
As per the ministry, over 15.17 crore balance COVID vaccine doses are available with the States/UTs to be administered
— ANI (@ANI) January 14, 2022
ದೇಶದಲ್ಲಿ ಒಟ್ಟು 5,753 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಲಸಿಕೆ ನೀಡಿಕೆಯನ್ನು ಹೆಚ್ಚಿಸಲಾಗುತ್ತಿದ್ದು, 155.39 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. 15.17 ಕೋಟಿ ಡೋಸ್ ಲಸಿಕೆ ಸಂಗ್ರಹದಲ್ಲಿದೆ. ಕಳೆದ 24 ಗಂಟೆಯಲ್ಲಿ 17,87,457 ಟೆಸ್ಟ್ಗಳನ್ನು ನಡೆಸಲಾಗಿದೆ. ಈ ಮೂಲಕ ಇದುವರೆಗೆ ದೇಶದಲ್ಲಿ ಒಟ್ಟಾರೆ 69.90 ಕೋಟಿ ಟೆಸ್ಟ್ ನಡೆಸಲಾಗಿದೆ.
ಭಾರತದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದರು. ಭಯಪಡುವ ಅವಶ್ಯಕತೆ ಇಲ್ಲ, ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳಿ ಎಂದು ಪ್ರಧಾನಿ ಸೂಚಿಸಿದರು. ಮೂರನೇ ಅಲೆ ಪ್ರಾರಂಭವಾದ ನಂತರ ಪ್ರಧಾನಿ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಮೊದಲ ಸಂವಾದ ಇದಾಗಿದೆ.
ಇದನ್ನೂ ಓದಿ:
ದೆಹಲಿಯಲ್ಲಿ ಜ.9-12ರವರೆಗೆ ಕೊವಿಡ್ನಿಂದ ಮೃತಪಟ್ಟ 92 ರೋಗಿಗಳಲ್ಲಿ ಕೇವಲ 8 ಜನ ಸಂಪೂರ್ಣ ಲಸಿಕೆ ಪಡೆದವರು: ವರದಿ
Tax Refund: ಏಪ್ರಿಲ್ನಿಂದ ಜನವರಿ 10ರ ತನಕ 1.59 ಕೋಟಿಗೂ ಹೆಚ್ಚು ತೆರಿಗೆದಾರರಿಗೆ 1.54 ಲಕ್ಷ ಕೋಟಿ ರೀಫಂಡ್
Published On - 9:49 am, Fri, 14 January 22