ಹಾವು ರಕ್ಷಕರಿಗಾಗಿ ರಾಜ್ಯದ ಮೊದಲ ಕಾರ್ಯಾಚರಣಾ ಕೈಪಿಡಿ ಬಿಡುಗಡೆ ಮಾಡಿದ ಕರ್ನಾಟಕ ಅರಣ್ಯ ಇಲಾಖೆ

| Updated By: Rakesh Nayak Manchi

Updated on: Nov 29, 2022 | 10:18 AM

ಮಾನವ-ಹಾವು ಸಂಘರ್ಷದ ಘಟನೆಗಳನ್ನು ಹೆಚ್ಚುತ್ತಿವೆ. ಇವುಗಳನ್ನು ನಿಭಾಯಿಸಲು ಅನೇಕ ಹಾವು ರಕ್ಷಕರು ಇದ್ದಾರೆ. ಆದರೆ ಬೆಂಗಳೂರಿನಲ್ಲಿ ಐದು ಪ್ರಮಾಣೀಕೃತ ಹಾವು ರಕ್ಷಕರಿದ್ದರೆ, ರಾಜ್ಯದ ಉಳಿದ ಭಾಗದಲ್ಲಿ ಯಾರೂ ಇಲ್ಲ. ಅದಾಗ್ಯೂ 100ಕ್ಕೂ ಹೆಚ್ಚು ರಕ್ಷಕರು ಕೆಲಸದಲ್ಲಿದ್ದಾರೆ.

ಹಾವು ರಕ್ಷಕರಿಗಾಗಿ ರಾಜ್ಯದ ಮೊದಲ ಕಾರ್ಯಾಚರಣಾ ಕೈಪಿಡಿ ಬಿಡುಗಡೆ ಮಾಡಿದ ಕರ್ನಾಟಕ ಅರಣ್ಯ ಇಲಾಖೆ
ಹಾವು ರಕ್ಷಕರಿಗಾಗಿ ರಾಜ್ಯದ ಮೊದಲ ಕಾರ್ಯಾಚರಣಾ ಕೈಪಿಡಿಯನ್ನು ಬಿಡುಗಡೆ ಮಾಡಿದ ಕರ್ನಾಟಕ ಅರಣ್ಯ ಇಲಾಖೆ
Follow us on

ಬೆಂಗಳೂರು: ಕೇರಳ, ಗುಜರಾತ್ ಮತ್ತು ಮಹಾರಾಷ್ಟ್ರಗಳು ಮಾತ್ರ ಹಾವು ರಕ್ಷಣೆಗೆ ತಮ್ಮದೇ ಆದ ಮಾರ್ಗಸೂಚಿಗಳನ್ನು ಹೊಂದಿವೆ. ಇದೀಗ ಕರ್ನಾಟಕದಲ್ಲೂ ಅರಣ್ಯ ಇಲಾಖೆ ಕೈಪಿಡಿಯನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಮಾನವ-ಹಾವು ಸಂಘರ್ಷಗಳನ್ನು ನಿಭಾಯಿಸಲು ಮತ್ತು ನಿಗದಿತ ವೈಜ್ಞಾನಿಕ ರೀತಿಯಲ್ಲಿ ಹಾವುಗಳನ್ನು ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಅರಣ್ಯ ಇಲಾಖೆಯು (Karnataka Forest Department) ಹಾವು ರಕ್ಷಕರಿಗಾಗಿ (Snake Rescuers) ರಾಜ್ಯದ ಮೊದಲ ಕಾರ್ಯಾಚರಣಾ ಕೈಪಿಡಿಯನ್ನು ಸೋಮವಾರ ಬಿಡುಗಡೆ ಮಾಡಿದೆ.

‘ಪರಿಣಾಮಕಾರಿ ಮಾನವ-ಹಾವು ಸಂಘರ್ಷ ನಿರ್ವಹಣೆ ಮತ್ತು ತಗ್ಗಿಸುವಿಕೆ-ಪ್ರಮಾಣೀಕೃತ ಹಾವು ರಕ್ಷಕರಿಗೆ ಒಂದು ಕಾರ್ಯಾಚರಣೆ ಕೈಪಿಡಿ’ ಅನ್ನು ಹೆಸರಾಂತ ಹರ್ಪಿಟಾಲಜಿಸ್ಟ್ ರೊಮುಲಸ್ ವಿಟೇಕರ್, ಹರ್ಪಿಟಾಲಜಿಸ್ಟ್ ಮತ್ತು ದಿ ಲಿಯಾನಾ ಟ್ರಸ್ಟ್ ಸಂಸ್ಥಾಪಕ ಟ್ರಸ್ಟಿ ಗೆರಾರ್ಡ್ ಮಾರ್ಟಿನ್ ಮತ್ತು ಹ್ಯೂಮನ್ ಸೊಸೈಟಿ ಇಂಟರ್ನ್ಯಾಷನಲ್/ಇಂಡಿಯಾ ಹಿರಿಯ ವ್ಯವಸ್ಥಾಪಕ ಸುಮಂತ್ ಬಿಂದು ಅವರು ರಚಿಸಿದ್ದಾರೆ.

ಕೈಪಿಡಿ ಬಗ್ಗೆ ಮಾತನಾಡಿದ ಸುಮಂತ್ ಬಿಂದು, ಅನೇಕ ಹಾವಿನ ರಕ್ಷಣೆಗಳು ನಡೆಯುತ್ತಿದ್ದು, ಈ ವೇಳೆ ರಕ್ಷಕರು ಹಾವು ಕಡಿತಕ್ಕೆ ಒಳಗಾದ ನಿದರ್ಶನಗಳಿವೆ. ಅಲ್ಲದೆ ರಕ್ಷಿಸಿದ ಹಾವುಗಳನ್ನು ಎಲ್ಲಿ ಮತ್ತು ಹೇಗೆ ಬಿಡಬೇಕು ಎಂಬ ಬಗ್ಗೆ ಅನೇಕ ರಕ್ಷಕರಿಗೆ ತಿಳಿದಿಲ್ಲ. ಇಂತಹ ಸಂದರ್ಭದಲ್ಲಿ ಮಾರ್ಗಸೂಚಿಗಳು ಸಹಾಯ ಮಾಡುತ್ತವೆ. ರಕ್ಷಕರಿಗೆ ಅರಣ್ಯ ಇಲಾಖೆಯಿಂದ ತರಬೇತಿ ನೀಡಿ ಪ್ರಮಾಣೀಕರಿಸಲಾಗುವುದು. ಪ್ರಮಾಣೀಕೃತ ರಕ್ಷಕರ ಹೆಸರು ಮತ್ತು ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಹುಡುಕಲು ನಾಗರಿಕರಿಗೆ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು ಎಂದರು.

ಇದನ್ನೂ ಓದಿ: ಗಡಿ ವಿಚಾರದಲ್ಲಿ ಎಂಇಎಸ್ ಮತ್ತೆ ಕ್ಯಾತೆ: ಬೆಳಗಾವಿಗೆ ಬರುವಂತೆ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವರಿಗೆ ಪತ್ರ

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವಿಜಯಕುಮಾರ್ ಗೋಗಿ ಮಾತನಾಡಿ, ರಕ್ಷಕರನ್ನು ಗುರುತಿಸುವುದು, ದೃಢೀಕರಿಸುವುದು ಮತ್ತು ಪ್ರಮಾಣೀಕರಿಸುವುದನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲಾಗುವುದು ಎಂದರು. ಅಧಿಕಾರಿಗಳ ಪ್ರಕಾರ, ಬೆಂಗಳೂರಿನಲ್ಲಿ ಐದು ಪ್ರಮಾಣೀಕೃತ ಹಾವು ರಕ್ಷಕರಿದ್ದರೆ, ರಾಜ್ಯದ ಉಳಿದ ಭಾಗದಲ್ಲಿ ಯಾರೂ ಇಲ್ಲ, 100 ಕ್ಕೂ ಹೆಚ್ಚು ರಕ್ಷಕರು ಕೆಲಸದಲ್ಲಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:17 am, Tue, 29 November 22