AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಯಸಿಯನ್ನು ಮದುವೆಯಾಗಲು ಕೆಲಸ ಮಾಡುತ್ತಿದ್ದ ಎಟಿಎಮ್ ದೋಚಿದ ಸೆಕ್ಯುರಿಟಿ ಗಾರ್ಡ್​

ಪ್ರೇಯಸಿಯನ್ನು ಮದುವೆಯಾಗಲು ಕೆಲಸ ಮಾಡುತ್ತಿದ್ದ ಎಟಿಎಮ್ ದೋಚಿದ ಸೆಕ್ಯುರಿಟಿ ಗಾರ್ಡ್​

TV9 Web
| Edited By: |

Updated on:Nov 29, 2022 | 10:51 AM

Share

ಅವಳನ್ನು ಮದುವೆಯಾಗಿ ತನ್ನದೇ ಆದ ಹೋಟೆಲೊಂದನ್ನು ಶುರುಮಾಡಲು ಯೋಚಿಸಿದ್ದ ಇವನು ತಾನು ಕೆಲಸ ಮಾಡುತ್ತಿದ್ದ ಎಟಿಎಮ್ ನಲ್ಲೇ ಹಣ ದೋಚಿ ಪೋಲಿಸರಿಗೆ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರು: ಪ್ರೀತಿ ಕುರುಡು, ಅದು ಏನನ್ನೆಲ್ಲ ಮಾಡಿಸುತ್ತದೆ ಅಂತ ಹೇಳುತ್ತಾರೆ. ಅಸ್ಸಾಂ ಮೂಲದ ಈ ಯುವಕನ್ನು ನೋಡಿದರೆ ಅದು ಸರಿ ಅನಿಸುತ್ತದೆ ಆದರೆ ಇವನು ಮಾಡಿದ್ದು ಮಾತ್ರ ಕಾನೂನಿನ ದೃಷ್ಟಿಯಲ್ಲಿ ಅಪರಾಧ. ಇವನ ಹೆಸರು ದೀಪಂಕರ್ ನೋಮೋಸುದರ್ (Dipankar Nomosudar) ಮತ್ತು ನಗರದ ಬ್ಯಾಂಕೊಂದರ ಎಟಿಎಮ್ ಕಿಯಾಸ್ಕ್ನಲ್ಲಿ (ATM Kiosk) ಸೆಕ್ಯುರಿಟಿ ಗಾರ್ಡ್ ಅಂತ ಕೆಲಸಮಾಡುತ್ತಾನೆ. ಎಲ್ಲ ಯುವಕರಂತೆ ದೀಪಂಕರ್ ಸಹ ಒಬ್ಬ ಯುವತಿಯನ್ನು ಪ್ರೀತಿಸುತ್ತಾನೆ. ಅವಳನ್ನು ಮದುವೆಯಾಗಿ ತನ್ನದೇ ಆದ ಹೋಟೆಲೊಂದನ್ನು ಶುರುಮಾಡಲು ಯೋಚಿಸಿದ್ದ ಇವನು ತಾನು ಕೆಲಸ ಮಾಡುತ್ತಿದ್ದ ಎಟಿಎಮ್ ನಲ್ಲೇ ಹಣ ದೋಚಿ ಪೋಲಿಸರಿಗೆ ಸಿಕ್ಕಿಬಿದ್ದಿದ್ದಾನೆ. ವಿಲ್ಸನ್ ಗಾರ್ಡನ್ (Wilson Garden) ಪೊಲೀಸರು ಅವನನ್ನು ಬಂಧಿಸಿ ದೋಚಿದ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Nov 29, 2022 10:42 AM