ಬೆಂಗಳೂರು ಅ.21: ಸರ್ಕಾರ ಕೊಡುವ ಪ್ರಶಸ್ತಿಗೆ ಅರ್ಜಿ ಹಾಕಿಸುವುದನ್ನ ನಿಲ್ಲಿಸಬೇಕು. ಯಾಕೆಂದರೆ ತುಂಬ ಜನ ಹಾಕಿದ್ದಾರೆ. ಯಾರನ್ನು ಆಯ್ಕೆ ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಹೀಗಾಗಿ ಸರ್ಕಾರ ಒಂದು ಸಮಿತಿ ರಚಿಸಿ ಆಯ್ಕೆ ಮಾಡುತ್ತದೆ. ಈ ಮೊದಲು 200 ಜನಕ್ಕೆ ರಾಜ್ಯೋತ್ಸವ ಪ್ರಶಸ್ತಿಯನ್ನು (Rajyotsava Award) ಕೊಡಲಾಗಿತ್ತು. ಈಗ ಪ್ರಶಸ್ತಿ ಕೊಡುವವರ ಸಂಖ್ಯೆ ಕಡಿಮೆ ಮಾಡಿದ್ದೇವೆ. ಈ ಭಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ವರ್ಷಕ್ಕೆ ಅನುಗುಣವಾಗಿ ಕೊಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು.
ಬೆಂಗಳೂರಿನಲ್ಲಿ ನಡೆದ ಸಂಸ್ಕೃತಿ ಸಂಗಮ ಕಾರ್ಯಕ್ರಮ ಭಾಗವಹಿಸಿ, ಜೀವಮಾನ ಸಾಧನೆಗಾಗಿ ನಾಡಿನ ಹಿರಿಯ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸರ್ಕಾರ ಮಾಡದ ಕೆಲಸ ಮಠಗಳು ಮಾಡುತ್ತಿವೆ. ಸರ್ಕಾರ ಭಾಗ ಅಲ್ಲದೆ ಹೋದರು, ಸಮಾಜದ ಭಾಗ ನೀವು. ಮಠಾದೀಶರು, ತತ್ವಜ್ಞಾನಿಗಳು, ಭಗವದ್ಗೀತೆ, ಸಂಸ್ಕೃತಿ ಭಾರತದ ಆಸ್ತಿ ಎಂದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು 2.5 ವರ್ಷದಲ್ಲಿ ಕ್ಯಾಬಿನೆಟ್ ಪುನರ್ ರಚನೆ ವಿಚಾರವಾಗಿ ಮಾತನಾಡಿದ ಅವರು ನಾನು ಒಂದು ದೊಡ್ಡ ಸಂಕಟದಲ್ಲಿ ತಗಲಾಗಿಕೊಂಡಿದ್ದೇನೆ. ಪಕ್ಷದ ವಿಚಾರವಾಗಿ ಏನ್ ಬೇಕು ಅದು ಚರ್ಚೆಯಾಗಿದೆ. ಕಲವೊಂದನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಕ್ಕೆ ಆಗುವುದಿಲ್ಲ. ಸದ್ಯಕ್ಕೆ ಆ ರೀತಿಯ ಮಾಹಿತಿ ನನ್ನ ಬಳಿ ಇಲ್ಲ ಎಂದು ಜಾರಿಕೊಂಡರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿನಿಕ್