ಪ್ರತಿಭಟನೆ ವೇಳೆ ಕೆಎಸ್​ಆರ್​ಟಿ, ಬಿಎಂಟಿಸಿ ನೌಕರರ ಮೇಲೆ ದಾಖಲಿಸಿದ್ದ ಎಲ್ಲ ಪ್ರಕರಣಗಳನ್ನು ಕೈಬಿಡಲು ಬಹುತೇಕ ನಿರ್ಧಾರ

| Updated By: guruganesh bhat

Updated on: Sep 20, 2021 | 10:47 AM

ಎರಡು ಹಂತದಲ್ಲಿ ನೌಕರರ ಮೇಲಿನ ಪ್ರಕರಣಗಳ ವಾಪಸ್ಸಿಗೆ ಸರ್ಕಾರ ಯೋಜಿಸಿದೆ.

ಪ್ರತಿಭಟನೆ ವೇಳೆ ಕೆಎಸ್​ಆರ್​ಟಿ, ಬಿಎಂಟಿಸಿ ನೌಕರರ ಮೇಲೆ ದಾಖಲಿಸಿದ್ದ ಎಲ್ಲ ಪ್ರಕರಣಗಳನ್ನು ಕೈಬಿಡಲು ಬಹುತೇಕ ನಿರ್ಧಾರ
ಕೆಎಸ್​ಆರ್​ಟಿಸಿ ನೌಕರರ ಪ್ರತಿಭಟನೆ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಇತ್ತೀಚೆಗೆ ನಡೆದ ಕೆಎಸ್ಆರ್​ಟಿಸಿ ಮತ್ತು ಬಿಎಂಟಿಸಿ ಪ್ರತಿಭಟನೆ ವೇಳೆ ನೌಕರರ ಮೇಲೆ ದಾಖಲಾಗಿದ್ದ ಎಲ್ಲಾ ಪ್ರಕರಣಗಳನ್ನು ಬಹುತೇಕ ವಾಪಸ್ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. ಅಮಾನತು, ವಜಾ, ವರ್ಗಾವಣೆ ಸೇರಿದಂತೆ ಬಹುತೇಕ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಲು ತೀರ್ಮಾನ ತಿರ್ಮಾನಿಸಲಾಗಿದ್ದು, ಇಂದೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ವರದಿಯಾಗಿದೆ. ಎರಡು ಹಂತದಲ್ಲಿ ನೌಕರರ ಮೇಲಿನ ಪ್ರಕರಣಗಳ ವಾಪಸ್ಸಿಗೆ ಸರ್ಕಾರ ಯೋಜಿಸಿದೆ. ಸದ್ಯಕ್ಕೆ ಎಫ್ಐಆರ್ ದಾಖಲಾಗಿರುವ ಪ್ರಕರಣಗಳು ಹೊರತುಪಡಿಸಿ ಉಳಿದ ಎಲ್ಲಾ ಪ್ರಕರಣಗಳು ಹಿಂಪಡೆದು, ಎಫ್ಐರ್ ದಾಖಲಾಗಿರುವ ಪ್ರಕರಣಗಳು ಎರಡನೇ ಹಂತದಲ್ಲಿ ವಾಪಸ್ ಪಡೆಯಲು ಸರ್ಕಾರ ಯೋಜಿಸಿದೆ. ಈಕುರಿತು ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.

ಸಾರಿಗೆ ಅಧಿಕಾರಿಗಳ ಜೊತೆ ಸಚಿವ ಶ್ರೀರಾಮುಲು ಮಹತ್ವದ ಸಭೆ ನಡೆಸಿದ್ದರು. ವಿಧಾನಸೌಧದ ಕಚೇರಿಯಲ್ಲಿ ಇಂದು ಸಭೆ ನಡೆದಿತ್ತು. ನೌಕರರ ಅಮಾನತು ಬಗ್ಗೆ ಸಾರಿಗೆ ಸಚಿವ ಶ್ರೀರಾಮುಲು ಮಾಹಿತಿ ಪಡೆದಿದ್ದರು. 4 ನಿಗಮಗಳ ಸಾರಿಗೆ ಅಧಿಕಾರಿಗಳ ಜೊತೆ ಸಭೆ ನಡೆದಿತ್ತು. ಅಮಾನತುಗೊಂಡಿರುವ ನೌಕರರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿತ್ತು.

ಹಲವು ಕಾರಣಗಳಿಂದ ಕೆಲ ಸಾರಿಗೆ ನೌಕರರನ್ನು  ಅಮಾನತುಗೊಳಿಸಲಾಗಿತ್ತು. ಇತ್ತೀಚೆಗೆ ಕೊವಿಡ್ ಸಮಯದಲ್ಲಿ ಪ್ರತಿಭಟನೆ ನಡೆಸಿದ್ದ ಕೆಲ ನೌಕರರನ್ನ ಅಮಾನತುಗೊಳಿಸಲಾಗಿತ್ತು. ಅಮಾನತು ಹಿಂಪಡೆಯುವಂತೆ ಸಾಕಷ್ಟು ಮನವಿ ಬಂದಿತ್ತು. ಆ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಸಚಿವ ಶ್ರೀರಾಮುಲು ಸಭೆ ನಡೆಸಿದ್ದರು. ಸಭೆಯಲ್ಲಿ ಎಷ್ಟು ನೌಕರರು ಅಮಾನತು ಆಗಿದ್ದಾರೆ, ಎಷ್ಟು ನೌಕರರ ವಜಾ ಆಗಿದೆ ಹಾಗೂ ಎಷ್ಟು ನೌಕರರ ಮೇಲೆ ಮೇಲೆ ಎಫ್​ಐಆರ್ ದಾಖಲಾಗಿದೆ ಎನ್ನುವ ಮಾಹಿತಿ ಪಡೆದಿದ್ದರು. ಬಹುತೇಕ ಅಮಾನತು ಹಾಗೂ ವಜಾಗೊಂಡ ನೌಕರರನ್ನ ವಾಪಸ್ ಕೆಲಸಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: 

ಸಾರಿಗೆ ನೌಕರರ ಮುಷ್ಕರಕ್ಕೆ ಪ್ರಚೋದನೆ; ಬಿಎಂಟಿಸಿ ಸೇವೆಯಿಂದ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರು ವಜಾ

ಓಮ್ನಿ ಆ್ಯಂಬುಲೆನ್ಸ್ ಬಳಕೆ ರೋಗಿಗಳಿಗೆ ಸುರಕ್ಷಿತವಲ್ಲ; ತನ್ನದೇ ಆದೇಶ ಉಲ್ಲಂಘಿಸಿದ ಸಾರಿಗೆ ಇಲಾಖೆ

(Karnataka Government Decides to take back all the cases charged against KSRTC and BMTC workers for their strike)