ಸಾರಿಗೆ ನೌಕರರ ಮುಷ್ಕರಕ್ಕೆ ಪ್ರಚೋದನೆ; ಬಿಎಂಟಿಸಿ ಸೇವೆಯಿಂದ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರು ವಜಾ
ಮುಷ್ಕರ ನಡೆದು 4 ತಿಂಗಳ ಬಳಿಕ ಬಿಎಂಟಿಸಿ ಕ್ರಮಕೈಗೊಂಡಿದೆ. ಒಂದು ವರ್ಷದಲ್ಲಿ 300 ಕ್ಕೂ ಹೆಚ್ಚು ದಿನ ರಜೆ ಪಡೆದ ಪ್ರಕರಣದ ವಿರುದ್ಧವೂ ಚಂದ್ರಶೇಖರ್ ವಿರುದ್ಧ ತನಿಖೆ ನಡೆಯುತ್ತಿದೆ.
ಬೆಂಗಳೂರು: ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರು ಅವರನ್ನು ಬಿಎಂಟಿಸಿ ಸೇವೆಯಿಂದ ವಜಾಗೊಳಿಸಿ, ದಕ್ಷಿಣ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಜಗದೀಶ್ ಆದೇಶ ಹೊರಡಿಸಿದ್ದಾರೆ. ಬಿಎಂಟಿಸಿ ಘಟಕ 33ರಲ್ಲಿ ಚಾಲಕರಾಗಿದ್ದ ಚಂದ್ರಶೇಖರ್, ಕಳೆದ ಏಪ್ರಿಲ್‌ನಲ್ಲಿ ಸಾರಿಗೆ ನೌಕರರ ಮುಷ್ಕರದಲ್ಲಿ ಭಾಗಿಯಾಗಿದ್ದರು. ಆ ಮೂಲಕ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರಾಗಿದ್ದರು. ಅಲ್ಲದೆ ಈ ಮುಷ್ಕರಕ್ಕೆ ಸಹ ನೌಕರರನ್ನು ಪ್ರಚೋದಿಸಿದ್ದರು. ಹೀಗಾಗಿ ಚಂದ್ರಶೇಖರ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಮುಷ್ಕರ ನಡೆದು 4 ತಿಂಗಳ ಬಳಿಕ ಬಿಎಂಟಿಸಿ ಕ್ರಮಕೈಗೊಂಡಿದೆ. ಒಂದು ವರ್ಷದಲ್ಲಿ 300 ಕ್ಕೂ ಹೆಚ್ಚು ದಿನ ರಜೆ ಪಡೆದ ಪ್ರಕರಣದ ವಿರುದ್ಧವೂ ಚಂದ್ರಶೇಖರ್ ವಿರುದ್ಧ ತನಿಖೆ ನಡೆಯುತ್ತಿದೆ.
ಲಸಿಕೆ ಹಾಕಿ ಹಣ ಮಾಡುತ್ತಿದ್ದ ಬಿಬಿಎಂಪಿ ಆರೋಗ್ಯ ಕೇಂದ್ರದ ವೈದ್ಯ ವಜಾ ಕಳೆದ ಕೆಲ ದಿನಗಳ ಹಿಂದೆ ಅರ್ಹರಿಗೆ ನೀಡಬೇಕಿದ್ದ ಕೊರೊನಾ ಲಸಿಕೆಯನ್ನು ಹಣ ಪಡೆದು ಅಕ್ರಮವಾಗಿ ನೀಡುತ್ತಿದ್ದ ಬಿಬಿಎಂಪಿ ಗುತ್ತಿಗೆ ವೈದ್ಯೆ ಸೇರಿ ಇಬ್ಬರನ್ನು ಬಂಧಿಸಲಾಗಿತ್ತು. ಸದ್ಯ ಈಗ ಇಂತಹದೆ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಎನ್.ಎಸ್ ಪಾಳ್ಯದ ಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ವ್ಯಾಕ್ಸಿನ್ ದಂಧೆ ಬಯಲಾಗಿದೆ.
ಹೆಚ್ಚುವರಿ ಹಣ ಪಡೆದು ಜನರಿಗೆ ಕೊವಿಡ್ ಲಸಿಕೆ ನೀಡಲಾಗುತ್ತಿದೆ ಎಂದು ಮೆಡಿಕಲ್ ಶಾಪ್ ಮಾಲೀಕ ಮತ್ತು ವೈದ್ಯ ವಿರುದ್ಧ ಆರೋಪ ಕೇಳಿ ಬಂದಿದೆ. ದಂಧೆ ನಡೆಯುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಆರೋಗ್ಯ ಕೇಂದ್ರದ ವೈದ್ಯನನ್ನು ವಜಾಗೊಳಿಸಲಾಗಿದೆ.
ಸಾರ್ವಜನಿಕರಿಂದ ಹಣ ಪಡೆದು ಫ್ರೆಂಟ್ ಲೈನ್ ವಾರಿಯರ್ ಎಂದು ಹೇಳಿ ವ್ಯಾಕ್ಸಿನ್ ನೀಡುತ್ತಿದ್ದರು. ಮೆಡಿಕಲ್ ಶಾಪ್ ಮಾಲೀಕ ಮತ್ತು ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಡಾಕ್ಟರ್ ಇಬ್ಬರೂ ಸೇರಿ ಸರ್ಕಾರದಿಂದ ಬರುವ ಲಸಿಕೆಯನ್ನು ಹೆಚ್ಚಿನ ಹಣಕ್ಕೆ ಮಾರುತ್ತಿದ್ದರು. ಮೊದಲಿಗೆ ಮೆಡಿಕಲ್ ಶಾಪ್ ಮಾಲೀಕ ತನ್ನ ಅಂಗಡಿಗೆ ಬರುವ ಜನರಿಗೆ ಲಸಿಕೆ ಹಾಕಿಸಿಕೊಳ್ಳಬೇಕೆ ಎಂದು ಹೇಳಿ ತಿಳಿದುಕೊಳ್ಳುತ್ತಿದ್ದ ಬಳಿಕ ಹೆಚ್ಚು ಹಣ ಪಡೆದು ಅವರನ್ನು ಆರೋಗ್ಯ ಕೇಂದ್ರಕ್ಕೆ ಕಳಿಸುತ್ತಿದ್ದ. ಅಲ್ಲಿ ಮೆಡಿಕಲ್ ಶಾಪ್ನಿಂದ ಬಂದವರಿಗೆ ಮೊದಲು ವಾಕ್ಸಿನ್ ಹಾಕಿಸಿ ಕಳಿಸಲಾಗುತ್ತಿತ್ತು.
ಇವರು ಯಾರೂ ಕ್ಯೂನಲ್ಲಿ ನಿಲ್ಲುವ ಅಗತ್ಯವೇ ಇರಲಿಲ್ಲ. ನೇರವಾಗಿ ಹೋಗಿ ಕೊವಿಡ್ ಲಸಿಕೆ ಪಡೆಯುತ್ತಿದ್ದರು. ಕ್ಯೂನಲ್ಲಿ ನಿಂತು ಲಸಿಕೆ ಪಡೆಯಲು ಬಂದ ಜನ ಇದನ್ನು ಗಮನಿಸಿ ಈ ಬಗ್ಗೆ ಬಿಬಿಎಂಪಿ ಹಾಗೂ ಶಾಸಕರ ಕಚೇರಿಗೆ ದೂರು ನೀಡಿದ್ದಾರೆ. ಹೀಗಾಗಿ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡ್ತಿದ್ದ ಡಾಕ್ಟರ್ ರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಇವರಿಬ್ಬರೂ ಸೇರಿ ನೂರಾರು ಜನರಿಗೆ ಲಸಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ; ಯುವತಿ ತಂದೆಯ ರಿಟ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು: ಲಸಿಕೆ ಹಾಕಿ ಹಣ ಮಾಡುತ್ತಿದ್ದ ಬಿಬಿಎಂಪಿ ಆರೋಗ್ಯ ಕೇಂದ್ರದ ವೈದ್ಯ ವಜಾ
Published On - 11:28 am, Tue, 24 August 21