Karnataka Unlock: ಉಪ ನೋಂದಣಿ ಕಚೇರಿಗಳನ್ನು ತೆರೆಯಲು ಆದೇಶಿಸಿದ ಸರ್ಕಾರ

| Updated By: guruganesh bhat

Updated on: Jun 06, 2021 | 11:21 PM

Covid Unlock: ನಿನ್ನೆಯಷ್ಟೇ (ಜೂನ್ 5) ಉಪ ನೋಂದಣಿ ಕಚೇರಿಗಳಲ್ಲಿ ನಗದು, ಡಿಡಿ ಸ್ವೀಕಾರವನ್ನು ನಿಷೇಧಿಸಿ ಕರ್ನಾಟಕ ಸರ್ಕಾರ  ಆದೇಶಿಸಿತ್ತು. ಹಣಕಾಸು ವ್ಯವಹಾರಗಳನ್ನು ಬ್ಯಾಂಕ್ ಮೂಲಕ ನಡೆಸಬೇಕು. ಅಥವಾ ಆನ್​​ಲೈನ್​ ಪಾವತಿ ಮೂಲಕ ನಡೆಸಬೇಕು ಎಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿತ್ತು

Karnataka Unlock: ಉಪ ನೋಂದಣಿ ಕಚೇರಿಗಳನ್ನು ತೆರೆಯಲು ಆದೇಶಿಸಿದ ಸರ್ಕಾರ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ರಾಜ್ಯಾದ್ಯಂತ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕೊವಿಡ್ ನಿಯಮ ಪಾಲಿಸಿ ಕಾರ್ಯಾರಂಭ ಮಾಡಲು ಕರ್ನಾಟಕ ಸರ್ಕಾರ ಆದೇಶಿಸಿದೆ. ಲಾಕ್​ಡೌನ್ ತೆರೆಯುವ ಮೊದಲ ಹಂತವಾಗಿ ಸರ್ಕಾರದ ಈ ಆದೇಶ ನೀಡಿದ್ದು, ಆರ್ಥಿಕ ಚಟುವಟಿಕೆ ಪುನಶ್ಚೇತನಕ್ಕೆ ಸರ್ಕಾರ ಯತ್ನಿಸುತ್ತಿದೆ ಎಂದು ಹೇಳಲಾಗಿದೆ.

ನಿನ್ನೆಯಷ್ಟೇ (ಜೂನ್ 5) ಉಪ ನೋಂದಣಿ ಕಚೇರಿಗಳಲ್ಲಿ ನಗದು, ಡಿಡಿ ಸ್ವೀಕಾರವನ್ನು ನಿಷೇಧಿಸಿ ಕರ್ನಾಟಕ ಸರ್ಕಾರ  ಆದೇಶಿಸಿತ್ತು. ಹಣಕಾಸು ವ್ಯವಹಾರಗಳನ್ನು ಬ್ಯಾಂಕ್ ಮೂಲಕ ನಡೆಸಬೇಕು. ಅಥವಾ ಆನ್​​ಲೈನ್​ ಪಾವತಿ ಮೂಲಕ ನಡೆಸಬೇಕು ಎಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿತ್ತು

ಉಪ ನೋಂದಣಿ ಕಚೇರಿಗಳಲ್ಲಿ ಸರ್ಕಾರದ ಹಣ ಖಾಸಗಿ ಖಾತೆಗೆ ವರ್ಗಾಯಿಸಲಾಗುತ್ತಿದೆ. ಹವಾಲಾ ವ್ಯವಹಾರಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದ ದೂರು ಕೇಳಿಬರುತ್ತಿರುವ ಕಾರಣಕ್ಕೆ ಸರ್ಕಾರ ಈ ನಿರ್ಣಯ ಕೈಗೊಂಡಿತ್ತು. ಹಣ ಪಾವತಿ ಬಗ್ಗೆ ಉಪ ನೋಂದಣಾಧಿಕಾರಿ ಪ್ರಮಾಣಿಕರಿಸಿದ ಬಳಿಕವೇ ನೋಂದಣಿ ಕೈಗೊಳ್ಳಬೇಕು. ಬೇರೆ ವಿಧಾನದಲ್ಲಿ ಅಥವಾ ನಗದು ರೂಪದಲ್ಲಿ ಹಣ ಸ್ವೀಕರಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಆದೇಶ ಪ್ರಕಟಿಸಿತ್ತು.

ಇದನ್ನೂ ಓದಿ: ಕೊರೊನಾದಿಂದ ಉಂಟಾದ ಹೆಚ್ಚಿನ ಸಾವುಗಳು ಸೋಂಕು ದೃಢಪಟ್ಟ 10 ದಿನಗಳ ಬಳಿಕ ಸಂಭವಿಸಿದೆ; ಕೊವಿಡ್ 2ನೇ ಅಲೆಯ ವಿಶೇಷ ವರದಿ ಇಲ್ಲಿದೆ

Noor Jahan Mango: ಒಂದು ಮಾವಿನ ಹಣ್ಣಿಗೆ 500ರಿಂದ ಸಾವಿರ ರೂಪಾಯಿ! ಅಬ್ಬಬ್ಬಾ, ಎಲ್ಲಿ ಸಿಗುತ್ತದೆ ಈ ಮಾವು?

(Karnataka Government ordered to open sub registrar offices in state)