ಬೆಂಗಳೂರು, ಸೆ.29: ರಾಜ್ಯ ಧಾರ್ಮಿಕ ಪರಿಷತ್ (Karnataka Religious Council) ರಚಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರ ಅಧ್ಯಕ್ಷತೆಯಲ್ಲಿ ಪರಿಷತ್ ರಚಿಸಲಾಗಿದ್ದು, ಇದಕ್ಕೆ ಎಂಟು ಮಂದಿ ಅಧಿಕಾರೇತರ ನಾಮ ನಿರ್ದೇಶಿತ ಸದಸ್ಯರನ್ನು ನೇಮಿಸಲಾಗಿದೆ.
ಉಪಾಧ್ಯಕ್ಷರನ್ನಾಗಿ ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರನ್ನು ನೇಮಿಸಲಾಗಿದ್ದು, ಪದನಿಮಿತ್ತ ಕಾರ್ಯದರ್ಶಿಯನ್ನಾಗಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರನ್ನು ನೇಮಿಸಲಾಗಿದೆ.
ನಿವೃತ್ತ ಜಿಲ್ಲಾ ನ್ಯಾಯಾಧೀಶ ಎನ್ ಶ್ರೀವತ್ಸ ಕೆದಿಲಾಯ (ನ್ಯಾಯಿಕ ಸದಸ್ಯ), ಸಾಗರ ತಾಲೂಕಿನ ವೀರಾಪುರ ಹಿರೇಮಠದ ಡಾ.ಮುರಳಸಿದ್ದ ಪಂಡಿತಾರಾದ್ಯ ಶಿವಾಚಾರ್ಯ (ಆಗಮ), ಬಿಎಸ್ ದ್ವರಕನಾಥ್ (ವೇದ), ಡಾ.ಎ.ರಾಧಕೃಷ್ಣರಾಜು (ಹಿಂದುಳಿದ ವರ್ಗ), ಕೆಎಂ ನಾಗರಾಜು (ಸಾಮಾನ್ಯ), ಬಸವನಗರದ ಆರಾದ್ರಿಮಠದ ಡಾ.ಮಹಂತೇಶ ಶಾಸ್ತ್ರಿ (ಸಾಮಾನ್ಯ), ಮಲ್ಲಿಕಾ ಪ್ರಶಾಂತ ಪಕ್ಕಲಾ ಅವರನ್ನು (ಮಹಿಳಾ ಸದಸ್ಯೆ) ಹಾಗೂ ಚಂದ್ರಶೇಖರ್ ಅವರನ್ನು (ಅನುಸೂಚಿತ ಜಾತಿ) ಅವರನ್ನು ಅಧಿಕಾರೇತರ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಿಸಲಾಗಿದೆ.
ಇದನ್ನೂ ಓದಿ: ಎಡಿಜಿಪಿ ಅಲೋಕ್ ಕುಮಾರ್ ಸೇರಿದಂತೆ ಇಬ್ಬರು ಐಪಿಎಸ್ ಅಧಿಕಾರಿಗಳು ವರ್ಗಾವಣೆ
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997ರ ಕಾಯ್ದೆಯ ಕಲಂ 20ರ ಅನ್ವಯ ಅಧಿಕಾರೇತರ ನಾಮ ನಿರ್ದೇಶಿತ ಸದಸ್ಯರಗಳನ್ನೊಳಗೊಂಡಂತೆ ಪೂರ್ಣ ಪ್ರಮಾಣದ ರಾಜ್ಯ ಧಾರ್ಮಿಕ ಪರಿಷತ್ತನ್ನು ನಾಲ್ಕು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ರಚಿಸಲು ಅವಕಾಶವಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:02 pm, Fri, 29 September 23