ಮಾಲ್​ಗಳಲ್ಲೂ ಮಣ್ಣಿನ ಹಣತೆ ಮಾರಾಟಕ್ಕೆ ಅವಕಾಶ ನೀಡಲು ಸರ್ಕಾರ ಚಿಂತನೆ

| Updated By: ಸುಷ್ಮಾ ಚಕ್ರೆ

Updated on: Oct 14, 2021 | 5:15 PM

ಮಣ್ಣಿನ ಹಣತೆಗಳಿಗೆ ಮಾರುಕಟ್ಟೆ ಒದಗಿಸುವ ಬಗ್ಗೆ ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವಥ್​ ನಾರಾಯಣ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.

ಮಾಲ್​ಗಳಲ್ಲೂ ಮಣ್ಣಿನ ಹಣತೆ ಮಾರಾಟಕ್ಕೆ ಅವಕಾಶ ನೀಡಲು ಸರ್ಕಾರ ಚಿಂತನೆ
ದೀಪಾವಳಿ
Follow us on

ಬೆಂಗಳೂರು: ಇನ್ನೇನು ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ದೀಪಾವಳಿಯೆಂದರೆ ದೀಪಗಳ ಹಬ್ಬ. ದೀಪಾವಳಿ ಹಬ್ಬಕ್ಕೆ ಮಣ್ಣಿನ ಹಣತೆಗಳನ್ನು ಮಾರಾಟ ಮಾಡಲು ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯೆಯರು ತಯಾರಿ ನಡೆಸುತ್ತಿದ್ದಾರೆ. ಮಣ್ಣಿನ ಹಣತೆಗಳಿಗೆ ಮಾರುಕಟ್ಟೆ ಒದಗಿಸುವ ಬಗ್ಗೆ ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವಥ್​ ನಾರಾಯಣ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.

ಗ್ರಾಮೀಣ ಜೀವನೋಪಾಯ ಅಭಿಯಾನದ ಎಂಡಿ ಮಂಜುಶ್ರೀ ಮತ್ತು ಇತರೆ ಅಧಿಕಾರಿಗಳ ಜತೆ ಅಶ್ವಥ್​ ನಾರಾಯಣ ಸಭೆ ನಡೆಸಿದ್ದಾರೆ. ಮಾಲ್​ಗಳು ಸೇರಿದಂತೆ ಹಲವೆಡೆ ಹಣತೆ ಮಾರಾಟಕ್ಕೆ ವ್ಯವಸ್ಥೆ ಮಾಡಿ. ಬಿಬಿಎಂಪಿ ಮುಖ್ಯ ಆಯುಕ್ತರ ಜತೆ ಚರ್ಚಿಸಿ ಸೂಕ್ತ ವ್ಯವಸ್ಥೆ ಮಾಡಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನವೆಂಬರ್​ನಲ್ಲಿ ದೀಪಾವಳಿ ಹಬ್ಬ ಇರುವುದರಿಂದ ಇನ್ನೇನು ಬೀದಿ ಬದಿಗಳಲ್ಲಿ, ಅಂಗಡಿಗಳಲ್ಲಿ ಮಣ್ಣಿನ ಹಣತೆಗಳ ಮಾರಾಟ ಶುರುವಾಗುತ್ತಿದೆ. ಮಾಲ್​​ಗಳಲ್ಲಿ ಕೂಡ ಮಣ್ಣಿನ ಹಣತೆಗಳ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿದರೆ ಅನೇಕ ಸ್ವಸಹಾಯ ಗುಂಪುಗಳಿಗೆ, ಗ್ರಾಮೀಣ ಭಾಗದ ಕುಲುಮೆಗಾರರಿಗೆ ಹೆಚ್ಚು ಅವಕಾಶ ಸಿಕ್ಕಂತಾಗುತ್ತದೆ.

ಇದನ್ನೂ ಓದಿ: ದೀಪಾವಳಿ ಹಬ್ಬ ಸಂದರ್ಭದಲ್ಲಿ ಸಾಲು ಸಾಲು ಹೊಸ ದ್ವಿಚಕ್ರ ವಾಹನಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿವೆ

PF Balance Check: ದೀಪಾವಳಿಗೂ ಮುನ್ನ 6 ಕೋಟಿ ಖಾತೆಗಳಿಗೆ ಬರಲಿದೆ ಶೇ 8.5ರ ಪಿಎಫ್​ ಬಡ್ಡಿ; ಬ್ಯಾಲೆನ್ಸ್ ಚೆಕ್ ಹೇಗೆ?

Published On - 5:12 pm, Thu, 14 October 21