ಬೆಂಗಳೂರು, ಸೆಪ್ಟೆಂಬರ್ 14: ಚಿತ್ರದುರ್ಗ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಆರೋಪಿ ನಟ ದರ್ಶನಗೆ (Darshan) ಬೆಂಗಳೂರು ಕೇಂದ್ರ ಕಾರಾಗೃಹ (ಪರಪ್ಪನ ಅಗ್ರಹಾರ)ದಲ್ಲಿ ರಾಜಾತಿಥ್ಯ ನೀಡಿದ ಫೋಟೋ ಬಹಿರಂಗಗೊಂಡಿತ್ತು. ಇದು ರಾಜ್ಯ ಸರ್ಕಾರ ತಲೆ ತಗ್ಗಿಸುವಂತೆ ಮಾಡಿದ್ದು, ವಿವಾದಕ್ಕೆ ಕಾರಣವಾಗಿತ್ತು. ವಿವಾದ ಬೆನ್ನಲ್ಲೇ ಕಾರಾಗೃಹ ಇಲಾಖೆಗೆ (Prisons and Correctional Services) ಸರ್ಕಾರ ಮೇಜರ್ ಸರ್ಜರಿ ಮಾಡಿದೆ. ಜೈಲರ್ ಸೇರಿಂದತೆ 43 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ.
ವಿವಿಧ ಜೈಲ್ಗಳ ಜೈಲರ್ಗಳು, ಮುಖ್ಯ ವೀಕ್ಷಕರು, ವೀಕ್ಷಕರು, ವಾರ್ಡರ್ ಸೇರಿ 43 ಮಂದಿಯನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ಇದನ್ನೂ ಓದಿ: ಬೇರೆ ಜೈಲಿಗೆ ಶಿಫ್ಟ್ ಮಾಡಿ ಅಂತ ಮನವಿ ಸಲ್ಲಿಸ್ತಾರಾ ಕೊಲೆ ಆರೋಪಿ ದರ್ಶನ್?
ಕೊಲೆ ಆರೋಪಿ ದರ್ಶನ್ಗೆ ರಾಜಾತಿಥ್ಯ ನೀಡಿದಕ್ಕೆ ಪರಪ್ಪನ ಅಗ್ರಹಾರದ 9 ಮಂದಿ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ. ಬಳಿಕ, ಆರೋಪಿ ದರ್ಶನ್ನನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ಶೀಟ್ ಸಲ್ಲಿಕೆಯಾಗಿದ್ದು, ಆರೋಪಿ ದರ್ಶನ್ ಜಾಮೀನಿಗಾಗಿ ಕಾಯುತ್ತಿದ್ದಾರೆ. ಹಾಗೆ, ಬಳ್ಳಾರಿ ಜೈಲಿನಿಂದ ಬೆಳಗಾವಿ ಜೈಲಿಗೆ ಶಿಫ್ಟ್ ಮಾಡುವಂತೆ ದರ್ಶನ್ ಮನವಿ ಮಾಡಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ