ಮುಡಾ ಮಾಜಿ ಆಯುಕ್ತ ಅಮಾನತು ಬೆನ್ನಲ್ಲೇ ವಿಶೇಷ ಭೂಸ್ವಾಧೀನಾಧಿಕಾರಿ ವರ್ಗ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಆರ್. ಮಂಜುನಾಥ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಆರ್. ಮಂಜುನಾಥ್ ಸೇರಿದಂತೆ ಎಂಟು ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಮೈಸೂರು, ಸೆಪ್ಟೆಂಬರ್ 14: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (Muda) ಮಾಜಿ ಆಯುಕ್ತ ಜಿಟಿ ದಿನೇಶ್ ಕುಮಾರ್ (GT Dinesh) ಅಮಾನತು ಬೆನ್ನಲ್ಲೇ ಮುಡಾದ ವಿಶೇಷ ಭೂಸ್ವಾಧೀನಾಧಿಕಾರಿ ಆರ್. ಮಂಜುನಾಥ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಆರ್. ಮಂಜುನಾಥ್ ಸೇರಿದಂತೆ 8 ಜನ ಕೆಎಎಸ್ ಅಧಿಕಾರಿಗಳ ವರ್ಗ
- ವೀಣಾ ಆರ್ – ಮುಖ್ಯ ಆಡಳಿತಾಧಿಕಾರಿ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್, ಬೆಂಗಳೂರು
- ಗೀತಾ ಈ ಕೌಲಗಿ – ಕುಲಸಚಿವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ
- ಮಹೇಶ್ ಜೆ – ಮೈಸೂರು ಮಹಾನಗರ ಪಾಲಿಕೆ ಆಯುಕ್ತ
- ಮಂಜುನಾಥ್ ಆರ್ – ವಿಶೇಷ ಭೂಸ್ವಾಧೀನಾಧಿಕಾರಿ ಕಬಿನಿ ಜಲಾಶಯ ಯೋಜನೆ, ಮೈಸೂರು
- ಜಗನ್ನಾಥ ರೆಡ್ಡಿ – ಆಯುಕ್ತರು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ, ಬಸವಕಲ್ಯಾಣ
- ಅರುಣಕುಮಾರ್ ಕುಲಕರ್ಣಿ – ವಿಶೇಷ ಭೂಸ್ವಾಧಿನಾಧಿಕಾರಿ ಕಾರಂಜಾ ಯೋಜನೆ, ಬೀದರ್
- ಅನುರಾಧ ವಸ್ತ್ರ – ಕುಲಸಚಿವರು (ಆಡಳಿತ) ಬಾಗಲಕೋಟೆ ವಿಶ್ವವಿದ್ಯಾಲಯ, ಜಮಖಂಡಿ
- ಮೊಹಮ್ಮದ್ ಶಕೀಲ್ – ಉಪ ವಿಭಾಗಾಧಿಕಾರಿ, ಬಿದರ್ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಜಿಲ್ಲಾಧಿಕಾರಿ ವರ್ಗ
ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣವನ್ನು ಬೆಳಕಿಗೆ ತಂದಿದ್ದ ಮೈಸೂರು ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಮುಡಾದಲ್ಲಿ ನಡೆದ ಹಗರಣದ ಬಗ್ಗೆ ಕೆವಿ ರಾಜೇಂದ್ರ ಅವರು ಒಂದು ವರ್ಷದ ಹಿಂದೆಯೇ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದರು.
ಇದನ್ನೂ ಓದಿ: ಮುಡಾ ಹಗರಣದಲ್ಲಿ ಮೊದಲ ತಲೆದಂಡ: ರಾಜ್ಯಪಾಲರ ಆದೇಶಾನುಸಾರ ಹಿಂದಿನ ಆಯುಕ್ತ ಅಮಾನತು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:10 am, Sat, 14 September 24