ACB ಗೆ ಗುಡ್ ಬೈ! ಹೈಕೋರ್ಟ್ ಆದೇಶದಂತೆ ಎಸಿಬಿ ಸಂಸ್ಥೆಯನ್ನು ರದ್ದುಗೊಳಿಸಿದ ರಾಜ್ಯ ಸರ್ಕಾರ

| Updated By: ಸಾಧು ಶ್ರೀನಾಥ್​

Updated on: Sep 09, 2022 | 9:18 PM

ಹೈಕೋರ್ಟ್ ಆದೇಶದಂತೆ ಎಸಿಬಿ ಸಂಸ್ಥೆಯನ್ನು ರದ್ದುಗೊಳಿಸಿದ ರಾಜ್ಯ ಸರ್ಕಾರ

ACB ಗೆ ಗುಡ್ ಬೈ! ಹೈಕೋರ್ಟ್ ಆದೇಶದಂತೆ ಎಸಿಬಿ ಸಂಸ್ಥೆಯನ್ನು ರದ್ದುಗೊಳಿಸಿದ ರಾಜ್ಯ ಸರ್ಕಾರ
ಭ್ರಷ್ಟಾಚಾರ ನಿಗ್ರಹ ದಳ
Follow us on

ಬೆಂಗಳೂರು: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸಿಬಿ ಸಂಸ್ಥೆಯನ್ನು (ಭ್ರಷ್ಟಾಚಾರ ನಿಗ್ರಹ ದಳ –ACB) ರದ್ದುಗೊಳಿಸಿ, ಆದೇಶ ಹೊರಡಿಸಿದೆ. ಇದೇ ವೇಳೆ ಲೋಕಾಯುಕ್ಕೆ (Lokayukta) ಸಂಪೂರ್ಣ ಅಧಿಕಾರ ನೀಡಿದೆ.

ಉಚ್ಚ ನ್ಯಾಯಾಲಯ 11.08.2022 ರಂದು ನೀಡಿರುವ ತೀರ್ಪಿನಲ್ಲಿನ ಅಂಶಗಳನ್ನು ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

1. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರವನ್ನು ರದ್ದುಗೊಳಿಸಿದೆ.

2. ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಭ್ರಷ್ಟಾಚಾರ ತಡೆ ಅಧಿನಿಯಮ ಸಂಪೂರ್ಣ ಅಧಿಕಾರ ನೀಡಲಾಗಿದೆ.

3. ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಪೊಲೀಸ್ ಠಾಣಾಧಿಕಾರ ನೀಡಲಾಗಿದೆ.

4. ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಪುಸ್ತುತ ಬಾಕಿಯಿರುವ ತನಿಖೆಗಳು ವಿಚಾರಣೆಗಳು/ಇತರೆ ಶಿಸ್ತು ಪ್ರಕರಣಗಳು ಹಾಗೂ ಖಾಸಗಿ ದೂರುದಾರರ ಪ್ರಕರಣಗಳನ್ನು ಸಂಪೂರ್ಣವಾಗಿ ಲೋಕಾಯುಕ್ತ ಸಂಖ್ಯೆಗೆ ವರ್ಗಾಯಿಸುವುದು.

Published On - 9:11 pm, Fri, 9 September 22