ಬೆಂಗಳೂರು: ಕೊರೊನಾ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಸದ್ಯ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಸೋಂಕಿತರ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿದೆ. ಈಗಾಗಲೇ ‘Asymptomatic’ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಇಲ್ಲದಿದ್ರೂ ಸೋಂಕು ಪತ್ತೆಯಾಗುತ್ತಿದೆ.
ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಹೀಗಾಗಿ ಕೊರೊನಾ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲು ಚಿಂತನೆ ನಡೆಸಲಾಗುತ್ತಿದೆ. ಸದ್ಯ ಸೋಂಕಿತರಿಗೆ ಆಸ್ಪತ್ರೆ ಐಸೊಲೇಷನ್ ವಾರ್ಡ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾದರೆ ವಾರ್ಡ್ಗಳ ಅಭಾವ ಸೃಷ್ಟಿಯಾಗಲಿದೆ.
ರೋಗ ಲಕ್ಷಣವಿಲ್ಲದ ಕೊರೊನಾ ಸೋಂಕಿತರಿಗೆ ಅವರ ಮನೆಯಲ್ಲೇ ಐಸೋಲೇಷನ್ ಮಾಡಲಾಗುತ್ತೆ. ವೃದ್ಧರು, ಮಕ್ಕಳು, ಗರ್ಭಿಣಿಯರು, ಕಾಯಿಲೆಗಳಿದ್ದವರಿಗೆ ಕೊರೊನಾ ಸೋಂಕು ಪತ್ತೆಯಾದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತೆ ಎಂಬುವುದರ ಬಗ್ಗೆ ಅಧಿಕಾರಿಗಳು ಪ್ಲ್ಯಾನ್ ಮಾಡ್ತಿದ್ದಾರೆ.
ಕೊರೊನಾ ಸೋಂಕಿತರಿಗೆ ಮನೆಯಲ್ಲೇ ಹೇಗೆ ಚಿಕಿತ್ಸೆ ನೀಡಲಾಗುತ್ತೆ?
ರೋಗ ಲಕ್ಷಣವಿಲ್ಲದ ಸೋಂಕಿತರಿಗೆ ಮನೆಯಲ್ಲೇ ಐಸೋಲೇಷನ್ ಮಾಡಲು ಪ್ಲ್ಯಾನ್ ಮಾಡಲಾಗುತ್ತಿದೆ. ಮನೆಯಲ್ಲೇ ಪ್ರತ್ಯೇಕ ಕೊಠಡಿಯೊಂದರಲ್ಲಿ ಐಸೋಲೇಷನ್ ಮಾಡ್ತಾರೆ. ಈ ವೇಳೆ ಸೋಂಕಿತರ ಕುಟುಂಬಸ್ಥರು ಮನೆಯಿಂದ ಹೊರಬರುವಂತಿಲ್ಲ.
ಇಡೀ ಮನೆಯನ್ನು ಕಂಟೇನ್ಮೆಂಟ್ ಮಾಡಲಾಗುತ್ತೆ. ಮನೆ ಬಳಿ ಪೊಲೀಸ್ ಸಿಬ್ಬಂದಿ, ಬಿಬಿಎಂಪಿ ಸಿಬ್ಬಂದಿ ನೇಮಕ ಮಾಡಲಾಗುತ್ತೆ. ವೈದ್ಯರ ತಂಡ ಕೊರೊನಾ ಸೋಂಕಿತರ ಹಾಗೂ ಅವರ ಕುಟುಂಬಸ್ಥರಿಗೆ ಪ್ರತಿನಿತ್ಯ ಆರೋಗ್ಯ ತಪಾಸಣೆ ಮಾಡ್ತಾರೆ. ಪ್ರತಿನಿತ್ಯ ಒಂದು ಬಸ್ನಲ್ಲಿ ವೈದ್ಯರ ತಂಡ ಬಂದು ಚಿಕಿತ್ಸೆ ನೀಡಲಿದೆ. ಮನೆ ಚಿಕ್ಕದಾಗಿದ್ದರೆ, ಸೋಂಕಿತರು ಸ್ಲಂಗಳಲ್ಲಿ ವಾಸವಾಗಿದ್ದರೆ ಅಥವಾ ಮನೆಯಲ್ಲಿ ಐಸೋಲೇಷನ್ ಮಾಡಲು ವ್ಯವಸ್ಥೆ ಇಲ್ಲದಿದ್ದರೆ ಅಂತಹ ಸೋಂಕಿತರನ್ನಷ್ಟೇ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ.
Published On - 8:33 am, Wed, 10 June 20