ಬಿಲ್ಡಪ್​ ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ 7 ಪ್ರಕರಣ! ಫಿಕ್ಸ್​ ಆಗುತ್ತಾ ಜೈಲೂಟ..

ಬೆಂಗಳೂರು: ಏನ್​ ಪಾಳೇಗಾರನಂತೆ ಪೋಸು.. ಜಗತ್ತೇ ಗೆದ್ದು ಬಂದೋರಂತೆ ಶೋ ಆಫ್. ತಲೆಯಲ್ಲಿ ಬುದ್ಧಿ ಇದ್ದು ಹೀಗ್ ಮಾಡಿದ್ರೋ. ಇದ್ದೂ ಇಲ್ಲದಂತೆ ಆಟ ಆಡಿದ್ರೋ ಗೊತ್ತೇ ಇಲ್ಲ. ಇಂತಹ ಭಂಡರು.. ಜಗಮೊಂಡರೂ ಯಾರೊಬ್ಬರೂ ಇರಲ್ಲ. ಪಾದರಾಯನಪುರದ ಪುಂಡರು. ಅವರ ಬೆನ್ನಿಗೆ ನಿಂತಿದ್ದ ಕಾರ್ಪೊರೇಟರ್ ಇಮ್ರಾನ್ ಪಾಷಾ ಆಟ ಇದು. ಯುದ್ಧಕ್ಕೆ ಹೊರಡೋ ರೇಂಜ್​​ಗೆ ಇಮ್ರಾನ್​​​​​​ ಅಂದು ಆ್ಯಂಬುಲೆನ್ಸ್​​ ಹತ್ತಿದ್ರು. ಸಾಲದೂ ಅಂತ ದಂಡು ದಾಳಿ ಕಟ್ಕೊಂಡು ಮೆರವಣಿಗೆ ಮಾಡಿದ್ರು. ಕೊರೊನಾ ಕೇಕೆ ನಡುವೆ ಏರಿಯಾದಲ್ಲಿ ದರ್ಬಾರ್​​​​​​​​ ಮಾಡಿದ್ದ […]

ಬಿಲ್ಡಪ್​ ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ 7 ಪ್ರಕರಣ! ಫಿಕ್ಸ್​ ಆಗುತ್ತಾ ಜೈಲೂಟ..
Follow us
ಆಯೇಷಾ ಬಾನು
|

Updated on:Jun 10, 2020 | 2:16 PM

ಬೆಂಗಳೂರು: ಏನ್​ ಪಾಳೇಗಾರನಂತೆ ಪೋಸು.. ಜಗತ್ತೇ ಗೆದ್ದು ಬಂದೋರಂತೆ ಶೋ ಆಫ್. ತಲೆಯಲ್ಲಿ ಬುದ್ಧಿ ಇದ್ದು ಹೀಗ್ ಮಾಡಿದ್ರೋ. ಇದ್ದೂ ಇಲ್ಲದಂತೆ ಆಟ ಆಡಿದ್ರೋ ಗೊತ್ತೇ ಇಲ್ಲ. ಇಂತಹ ಭಂಡರು.. ಜಗಮೊಂಡರೂ ಯಾರೊಬ್ಬರೂ ಇರಲ್ಲ. ಪಾದರಾಯನಪುರದ ಪುಂಡರು. ಅವರ ಬೆನ್ನಿಗೆ ನಿಂತಿದ್ದ ಕಾರ್ಪೊರೇಟರ್ ಇಮ್ರಾನ್ ಪಾಷಾ ಆಟ ಇದು. ಯುದ್ಧಕ್ಕೆ ಹೊರಡೋ ರೇಂಜ್​​ಗೆ ಇಮ್ರಾನ್​​​​​​ ಅಂದು ಆ್ಯಂಬುಲೆನ್ಸ್​​ ಹತ್ತಿದ್ರು. ಸಾಲದೂ ಅಂತ ದಂಡು ದಾಳಿ ಕಟ್ಕೊಂಡು ಮೆರವಣಿಗೆ ಮಾಡಿದ್ರು. ಕೊರೊನಾ ಕೇಕೆ ನಡುವೆ ಏರಿಯಾದಲ್ಲಿ ದರ್ಬಾರ್​​​​​​​​ ಮಾಡಿದ್ದ ಇಮ್ರಾನ್ ಪಾಷಾಗೆ ದೊಡ್ಡ ಸಂಕಷ್ಟವೇ ಎದುರಾಗಿದೆ.

ಏರಿಯಾದಲ್ಲಿ ಶೋ ಮಾಡಿದ್ದಕ್ಕೆ ಜೈಲೂಟ ಆಗುತ್ತಾ ಫಿಕ್ಸ್!? ಯೆಸ್.. ಬೆಂಗಳೂರಿನ ಪಾದರಾಯನಪುರ. ಇಲ್ಲಿಗೆ ಹೆಜ್ಜೆ ಇಡೋದಿರ್ಲಿ, ಹೆಸರು ಕೇಳಿದ್ರೆ ಜನರ ಎದೆ ನಡುಗುತ್ತೆ. ಇಂತಾ ಹಾಟ್​​ಸ್ಪಾಟ್​ಜಾಗ ಆದು. ಆದ್ರೆ, ಇದೇ ಏರಿಯಾದ ಕಾರ್ಪೊರೇಟರ್ ಇಮ್ರಾನ್ ಪಾಷಾ ಕ್ವಾರಂಟೈನ್​ಗೆ ಹೋಗೋವಾಗ್ಲೂ ಕ್ವಾಟ್ಲೆ. ಅಲ್ಲಿಂದ ಬಂದ್ಮೇಲೆ ಕೀಟ್ಲೇ ಮಾಡಿ ಖಾಕಿ ಕೈಗೆ ಮತ್ತೆ ಲಾಕ್ ಆದ್ರೂ. ಆದ್ರೀಗ ಏನ್ ದೊಡ್ಡು ವಾರ್ ಗೆದ್ದು ಬಂದಂಗೆ ಹಾಟ್​ಸ್ಪಾಟ್ ಜಾಗದಲ್ಲಿ ಬಿಲ್ಡಪ್ ಕೊಟ್ಟಿದ್ದ ಇಮ್ರಾನ್ ಪಾಷಾ ವಿರುದ್ಧ ಒಂದಲ್ಲ ಎರಡಲ್ಲ 7 ಕೇಸ್ ಜಡಿದಿದ್ದಾರೆ. ಮಾಡಿರೋ ಘನಂದಾರಿ ಕೆಲಸಕ್ಕೆ ಖಾಕಿ ಬಿಗ್ ಶಾಕ್ ಕೊಟ್ಟಿದೆ.

ಇಷ್ಟೇ ಅಲ್ಲ, ಕಂಟೇನ್ಮೆಂಟ್ ಏರಿಯಾದಲ್ಲಿ ಶೋ ಆಫ್ ಮಾಡಿದ್ದ 126 ಮಂದಿಯನ್ನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಜೊತೆಗೆ ಅರೋಗ್ಯ ಇಲಾಖೆ, ಪೊಲೀಸರಿಗೆ ಸಹಕಾರ ನೀಡದ ಇಮ್ರಾನ್ ಪಾಷಾರನ್ನ ಪ್ರಕರಣದ ಎ1 ಅರೋಪಿಯಾಗಿಸಲಾಗಿದೆ. ಅಲ್ದೇ, ಕಂಟೇನ್ಮೆಂಟ್ ಜೋನ್​ನಲ್ಲಿ ಗುಂಪಾಗಿ ಸೇರಿದ್ದು.

ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಸೇರಿ ಐಪಿಸಿ ಸೆಕ್ಷನ್ 143, 145, 149, 152, 270, 290, 353 ರ ಅಡಿಯಲ್ಲಿ ಕೇಸ್ ಜಡಿಯಲಾಗಿದೆ. ಪಾದರಾಯನಪುರದಲ್ಲಿ ಗಲಭೆಗೆ ಸಂಬಂಧಿಸಿದ 5 ಕೇಸ್​ಗಳೂ ಹಾಗೂ ಕ್ವಾರಂಟೈನ್​ಗೆ ಸಂಬಂಧಿಸಿದ 2 ಕೇಸ್​ ಸೇರಿ ಒಟ್ಟು 7 ಕೇಸ್​ಗಳು ಇಮ್ರಾನ್ ಪಾಶಾ ಹೆಗಲೇರಿದೆ. ಅಲ್ದೇ, ಹೊರ ಬಿಟ್ರೆ ಮತ್ತೆ ಏರಿಯಾದಲ್ಲಿ ಗಲಾಟೆ, ಗಲಭೆ ಆಗ್ಬೋದು, ಮತ್ತೆ ಏರಿಯಾದಲ್ಲಿ ಹಾವಳಿ ಮಾಡ್ಬೋದು ಅನ್ನೋ ಕಾರಣಕ್ಕೆ ಬೇಲ್ ನೀಡದಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಒಟ್ಟಾರೆ ಗಲಭೆಗೆ ಸಂಬಂಧಿಸಿದಂತೆ 5 ಕೇಸ್, ಕ್ವಾರಂಟೈನ್​ಗೆ ಸಂಬಂಧಿಸಿದಂತೆ 2 ಕೇಸ್ ಸೇರಿ ಒಟ್ಟು 7ಪ್ರಕರಣಗಳನ್ನ ಇಮ್ರಾನ್ ಪಾಷಾ ವಿರುದ್ಧ ಹಾಕಲಾಗಿದೆ. ಅದೇನೆ ಇರ್ಲಿ ಮಹಾನ್ ಸಾಧನೆ ಮಾಡಿದೋರಂಗೆ ಏರಿಯಾದಲ್ಲಿ ನಾಟಕ ಮಾಡಿದ್ದ ಪಾಷಾಗೆ ತಕ್ಕ ಶಾಸ್ತಿಯಾಗಿದೆ. ಇದ್ರ ಜೊತೆ ಜೊತೆಗೆ ಇ್ರಮಾನ್ ಪಾಷಾಗೆ ಮತ್ತಷ್ಟು ದಿನ ಜೈಲೂಟ ಖಾಯಂ ಆಗೋದ್ರಲ್ಲಿ ನೋ ಡೌನ್.

Published On - 6:36 am, Wed, 10 June 20

Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ