Eggs and Bananas: ಸರ್ಕಾರಿ ಶಾಲೆ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಭಾಗ್ಯ; ಆಗಸ್ಟ್ 18ರಿಂದಲೇ ಜಾರಿ

| Updated By: Ganapathi Sharma

Updated on: Aug 16, 2023 | 4:23 PM

Eggs and bananas to be part of mid-day meals; ವಾರದಲ್ಲಿ ಎರಡು ಬಾರಿ ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ಮೊಟ್ಟೆ ವಿತರಿಸಲಾಗುವುದು. ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗಾಗಿ ಬಾಳೆಹಣ್ಣನ್ನು ನೀಡಲಾಗುವುದು ಎಂದು ಪ್ರಾಥಮಿಕ ಹಾಗೂ ಪೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

Eggs and Bananas: ಸರ್ಕಾರಿ ಶಾಲೆ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಭಾಗ್ಯ; ಆಗಸ್ಟ್ 18ರಿಂದಲೇ ಜಾರಿ
ಸಾಂದರ್ಭಿಕ ಚಿತ್ರ
Follow us on

ಶಿವಮೊಗ್ಗ, ಆಗಸ್ಟ್ 16: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ (Government Schools) ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ (Mid-Day Meals) ಜತೆಗೆ ವಾರದಲ್ಲಿ ಎರಡು ಬಾರಿ ಮೊಟ್ಟೆ (Egg) ಅಥವಾ ಬಾಳೆ ಹಣ್ಣು (Banana) ನೀಡುವ ಯೋಜನೆಯು ಆಗಸ್ಟ್ 18ರಿಂದ ಪ್ರಾರಂಭವಾಗಲಿದೆ. ಮಂಡ್ಯ ಜಿಲ್ಲೆಯಲ್ಲಿ ಈ ಯೋಜನೆಯು ಉದ್ಘಾಟನೆಗೊಳ್ಳಲಿದೆ ಎಂದು ಪ್ರಾಥಮಿಕ ಹಾಗೂ ಪೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಈ ಮೊದಲು 8 ನೇ ತರಗತಿಯವರೆಗೆ ಈ ಯೋಜನೆ ಜಾರಿಗೊಳಿಸಬೇಕು ಎಂದಾಗಿತ್ತು. ಆದರೆ ಈಗ ಹತ್ತನೇ ತರಗತಿವರೆಗೂ ವಿಸ್ತರಿಸಬೇಕು ಎಂಬ ನಿರ್ಧಾರ ಕೈಗೊಳ್ಳಲಾಗಿದೆ. ಪೌಷ್ಟಿಕಾಂಶಯುಕ್ತ ಆಹಾರ ನೀಡುವ ಹಿನ್ನಲೆಯಲ್ಲಿ ಈ ಯೋಜನೆಯು ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ವಾರದಲ್ಲಿ ಎರಡು ಬಾರಿ ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ಮೊಟ್ಟೆ ವಿತರಿಸಲಾಗುವುದು. ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗಾಗಿ ಬಾಳೆಹಣ್ಣನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ರಾಜ್ಯದ ವಿದ್ಯಾರ್ಥಿಗಳು ಅಪೌಷ್ಠಿಕತೆ ಹಾಗೂ ಅನೀಮಿಯಾದಿಂದ ಬಳಲುತ್ತಿರುವುದರಿಂದ ಮೊಟ್ಟೆ ಅಥವಾ ಬಾಳೆಹಣ್ಣು ವಿತರಣೆ ಅನಿವಾರ್ಯವಾಗಿದೆ ಎಂದು ಸರ್ಕಾರ ಪ್ರತಿಪಾದಿಸಿದೆ. ಆದರೆ ಮೊಟ್ಟೆ ವಿತರಣೆ ವಿಚಾರವಾಗಿ ಆಕ್ಷೇಪಗಳು ವ್ಯಕ್ತವಾಗಿದ್ದವು. ಮೊಟ್ಟೆ ವಿತರಣೆಯು ವಿದ್ಯಾರ್ಥಿಗಳಲ್ಲಿ ಅಸಮಾನತೆಗೆ ಕಾರಣವಾಗಲಿದೆ ಎಂದು ಹಲವರು ವಾದಿಸಿದ್ದರು. ಆದರೆ, ಮೊಟ್ಟೆಯು ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಅವಶ್ಯಕವಾಗಿದೆ. ಆರೋಗ್ಯಕರ ಆಹಾರ ಸೇವನೆಯಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಸಾಮರ್ಥ್ಯವೂ ಹೆಚ್ಚಳವಾಗುತ್ತದೆ ಎಂದು ಮೊಟ್ಟೆ ವಿತರಣೆಯ ಪರ ಹಲವರು ಪ್ರತಿಪಾದಿಸಿದ್ದರು.

ಇದನ್ನೂ ಓದಿ: ಮಂಗಳೂರಿನ ಹಲವೆಡೆ ಅಂಗನವಾಡಿಗಳಲ್ಲಿ ಮತ್ತೆ ಕೊಳೆತ ಮೊಟ್ಟೆ ಪೂರೈಕೆ; ಗರ್ಭಿಣಿ, ಮಕ್ಕಳು ಅಸ್ವಸ್ಥ

2007ರಲ್ಲಿಯೇ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಈ ಯೋಜನೆಯನ್ನು ಜಾರಿಗೊಳಿಸುವ ಕುರಿತು ಚಿಂತನೆ ನಡೆಸಿದ್ದರು. ಆದರೆ ಸಮಾಜದ ಕೆಲ ಗುಂಪುಗಳಿಂದ ಭಾರಿ ವಿರೋಧ ವ್ಯಕ್ತವಾಗಿದ್ದರಿಂದ ಅಲ್ಲಿಗೆ ಕೈಬಿಡಲಾಗಿತ್ತು. ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಅಥವಾ ಚಿಕ್ಕಿಯನ್ನು ವಿತರಿಸುವುದಾಗಿ ಸರ್ಕಾರ ಹೇಳಿತ್ತು. ಈಗ ಚಿಕ್ಕಿ ನೀಡುವ ಯೋಜನೆಯನ್ನು ಕೈಬಿಟ್ಟು ಬಾಳೆಹಣ್ಣನ್ನು ನೀಡುವುದಾಗಿ ಘೋಷಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ