ಬಾಗಕೋಟೆ: ನೆನೆಗುದಿಗೆ ಬಿದ್ದಿದ್ದ ಕ್ಷೀರಭಾಗ್ಯ ಹಾಲಿನ ಪೌಡರ್ ಪ್ಯಾಕೆಟ್ ದಂಧೆ ಪ್ರಕರಣದ ತನಿಖೆ ಮತ್ತೆ ಚುರುಕುಗೊಳ್ಳುವ ಲಕ್ಷಣ ಕಂಡುಬಂದಿದೆ. ಕ್ಷೀರಭಾಗ್ಯ ಹಾಲಿನ ಪ್ಯಾಕೆಟ್ ದಂಧೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ. ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರ ದೋಚಿದ್ದ ಈ ಕರ್ಮಕಾಂಡ 2020ರ ಅಕ್ಟೋಬರ್ 20ರಂದು ಬೆಳಕಿಗೆ ಬಂದಿತ್ತು.
ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ 14 ಟನ್ ಹಾಲಿನ ಪೌಡರ್ ಪ್ಯಾಕೆಟ್ ಜಪ್ತಿಮಾಡಿದ್ದರು. ಈ ಘಟನೆಗೆ ಸಂಬಂಧಿಸಿ ಪೊಲೀಸರು ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಯಮಕನಮರಡಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.
ಇದೀಗ ಗೋಲ್ಡ್ ಸ್ಮಗ್ಲಿಂಗ್ ಕೇಸ್ನ ಆರೋಪಿಗಳು ಈ ಪ್ರಕರಣದಲ್ಲಿ ಕೂಡ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಮಗ್ಲಿಂಗ್ ಕೇಸ್ನ ಪ್ರಮುಖ ಆರೋಪಿ ಮಧ್ಯಸ್ಥಿಕೆ ಸಾಧ್ಯತೆ ಕಂಡುಬಂದಿದೆ. ಕ್ಷೀರಭಾಗ್ಯ ಹಾಲಿನ ಪಾಕೆಟ್ ದಂಧೆಯಲ್ಲಿ ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂಬ ಅನುಮಾನ ಉಂಟಾಗಿದೆ. ಪ್ರಕರಣ ಸಿಐಡಿಗೆ ಹಸ್ತಾಂತರ ಆಗುತ್ತಿದ್ದಂತೆ ಕೆಲವರಿಗೆ ನಡುಕ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಲಾಕ್ಡೌನ್ ನಡುವೆ ಬಾಲ್ಯ ವಿವಾಹ; 28 ಬಾಲ್ಯ ವಿವಾಹಗಳನ್ನು ತಡೆದ ಅಧಿಕಾರಿಗಳು
ಎತ್ತುಗಳಿಗೆ ಮಾಸ್ಕ್ ಹಾಕಿ ಕೂರಿಗೆ ಪೂಜೆ ನಡೆಸಿದ ಬಾಗಲಕೋಟೆಯ ರೈತ ಕುಟುಂಬ
Published On - 10:17 pm, Wed, 26 May 21