ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ವಿಧಿಸಿದ್ದ ನೈಟ್ ಕರ್ಫ್ಯೂ ಹಿಂಪಡೆದು ಸರ್ಕಾರ ಇಂದು (ನವೆಂಬರ್ 5) ಆದೇಶ ಹೊರಡಿಸಿದೆ. ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ವರೆಗೆ ವಿದಿಸಿದ್ದ ಆದೇಶ ವಾಪಸ್ ಪಡೆಯಲಾಗಿದೆ. ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಕರ್ನಾಟಕದಲ್ಲಿ ಹಾಗೂ ದೇಶಾದ್ಯಂತ ಇಳಿಮುಖವಾಗಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಆದೇಶ ವಾಪಸ್ ಪಡೆಯಲಾಗಿದೆ.
ಅದರಂತೆ ಕೊರೊನಾ ಹಿನ್ನೆಲೆ ಜಾರಿಯಲ್ಲಿದ್ದ ನೈಟ್ ಕರ್ಫ್ಯೂ ಇಂದಿನಿಂದ ಇರುವುದಿಲ್ಲ. ಕೊರೊನಾ ಕೇಸ್ ಇಳಿಮುಖ ಹಿನ್ನೆಲೆ ನೈಟ್ ಕರ್ಫ್ಯೂ ವಾಪಸ್ ಪಡೆಯಲಾಗಿದೆ. ನೈಟ್ ಕರ್ಫ್ಯೂ ಹಿಂಪಡೆದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾತ್ರಿ 10 ರಿಂದ ಮುಂಜಾನೆ 5 ರವರೆಗೂ ವಿಧಿಸಿದ್ದ ನೈಟ್ ಕರ್ಫ್ಯೂ ಇವತ್ತಿನಿಂದಲೇ ಇರುವುದಿಲ್ಲ. ನಿನ್ನೆ (ನವೆಂಬರ್ 4) ಎಲ್ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಭೌತಿಕವಾಗಿ ನಡೆಸುವುದಕ್ಕೆ ಕರ್ನಾಟಕ ಸರ್ಕಾರ ಅನುಮತಿ ನೀಡಿತ್ತು. ಅದರಂತೆ ನವೆಂಬರ್ 8 ರಿಂದ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳು ಆರಂಭವಾಗಲಿವೆ.
ಇದಕ್ಕೂ ಮೊದಲು ಅಕ್ಟೋಬರ್ 25 ರಂದು ಶಾಲೆ ಪುನಾರಂಭಿಸುವಂತೆ ಆದೇಶ ನೀಡಲಾಗಿತ್ತು. ಈಗಾಗಲೇ ಶಾಲೆ ಕಾಲೇಜುಗಳು ಆಫ್ಲೈನ್ ವಿಧಾನದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿವೆ. ಸಿನಿಮಾ ಹಾಲ್, ಈಜುಕೊಳಗಳಿಗೂ ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸಿದ್ದ ನೈಟ್ ಕರ್ಫ್ಯೂ ಆದೇಶವನ್ನು ಇಂದು ಹಿಂಪಡೆಯಲಾಗಿದೆ.
ಕುದುರೆ ರೇಸ್ಗೆ ಅನುಮತಿ ನೀಡಿ ಕರ್ನಾಟಕ ಸರ್ಕಾರದ ಆದೇಶ
ಕುದುರೆ ರೇಸ್ಗೆ ಅನುಮತಿ ನೀಡಿ ಕರ್ನಾಟಕ ಸರ್ಕಾರ ಇಂದು (ನವೆಂಬರ್ 5) ಆದೇಶ ಹೊರಡಿಸಿದೆ. ಕೊವಿಡ್ 19 ಕಾರ್ಯವಿಧಾನ ಪಾಲಿಸುವಂತೆ ಸರ್ಕಾರ ಷರತ್ತು ಹಾಕಿದೆ. ಕೊರೊನಾ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಚಟುವಟಿಕೆಗಳು ನಿಂತು ಹೋಗಿದ್ದವು. ಇದೀಗ, ಮತ್ತೆ ಜನಜೀವನ ಯಥಾಸ್ಥಿತಿಗೆ ಮರಳಲು ಆರಂಭಿಸಿದೆ. ಶಾಲಾ ಕಾಲೇಜುಗಳು ಆರಂಭವಾಗಿವೆ.
ಕುದುರೆ ಓಟದ ಸ್ಪರ್ಧೆಗಳನ್ನು ಮುಂದುವರಿಸುವುದಕ್ಕೆ ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ರೇಸ್ ಕೋರ್ಸ್ಗೆ ಪ್ರವೇಶಿಸುವವರು ಲಸಿಕೆ ಪಡೆದಿರಬೇಕು. ಕಡ್ಡಾಯವಾಗಿ ಲಸಿಕೆ ಪಡೆದಿರಬೇಕೆಂದು ಸರ್ಕಾರ ಷರತ್ತು ವಿಧಿಸಿದೆ. ಸ್ಥಳಾವಕಾಶದ ಸಾಮರ್ಥ್ಯ ಆಧರಿಸಿ ಜನರು ರೇಸ್ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: LKG, UKG ಆರಂಭಕ್ಕೆ ಕರ್ನಾಟಕ ಸರ್ಕಾರ ಗ್ರೀನ್ ಸಿಗ್ನಲ್; ನವೆಂಬರ್ 8ರಿಂದ ಭೌತಿಕ ತರಗತಿ ಶುರು
ಇದನ್ನೂ ಓದಿ: ಕೊರೊನಾ ಎರಡನೇ ಅಲೆ ಬಳಿಕ ಆರ್ಥಿಕ ಚೇತರಿಕೆಯತ್ತ ಅವಳಿ ನಗರದ ರಿಯಲ್ ಎಸ್ಟೇಟ್ ಉದ್ಯಮ
Published On - 2:10 pm, Fri, 5 November 21