Swadesh Darshan: ಸ್ವದೇಶ್ ದರ್ಶನ್ ಯೋಜನೆಗೆ ಕರ್ನಾಟಕದಿಂದ ಹಂಪಿ, ಮೈಸೂರು ಆಯ್ಕೆ

| Updated By: ರಮೇಶ್ ಬಿ. ಜವಳಗೇರಾ

Updated on: Jan 05, 2023 | 5:41 PM

ಸ್ವದೇಶ್ ದರ್ಶನ್ ಯೋಜನೆಯು ದೇಶದ ಪ್ರವಾಸೋದ್ಯಮ ಅಭಿವೃದ್ಧಿ ಪಥದಲ್ಲಿ ಹೊಸ ಮೈಲಿಗಲ್ಲಾಗಿದೆ. ಇದೀಗ ಈ ಯೋಜನೆಗೆ ಕರ್ನಾಟಕ ಹಂಪಿ ಹಾಗೂ ಮೈಸೂರು ಆಯ್ಕೆಯಾಗಿದೆ.

Swadesh Darshan: ಸ್ವದೇಶ್ ದರ್ಶನ್ ಯೋಜನೆಗೆ ಕರ್ನಾಟಕದಿಂದ ಹಂಪಿ, ಮೈಸೂರು ಆಯ್ಕೆ
ಸ್ವದೇಶ್ ದರ್ಶನ್ ಯೋಜನೆ
Follow us on

ಬೆಂಗಳೂರು: ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಸ್ವದೇಶ್ ದರ್ಶನ್ ಯೋಜನೆ ಮಹತ್ವದ ಯೋಜನೆ ಆರಂಭಿಸಿದ್ದು, ಇದೀಗ ಈ ಸ್ವದೇಶ್ ದರ್ಶನ್ 2.0 ಯೋಜನೆಗೆ (Swadesh Darshan 2.0 Scheme,) ಹಂಪಿ ಹಾಗೂ ಮೈಸೂರು(Hampi And Mysuru) ಆಯ್ಕೆಯಾಗಿವೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಸ್ವದೇಶ್ ದರ್ಶನ್ 2.0 ಯೋಜನೆಗೆ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ್, ಚಂಡೀಗಢ, ಗೋವಾ, ಗುಜರಾತ್, ಕೇರಳ ರಾಜ್ಯಗಳ ತಲಾ ಎರಡು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಕರ್ನಾಟಕದ ಹಂಪಿ ಹಾಗೂ ಮೈಸೂರು ಆಯ್ಕೆಯಾಗಿದೆ. ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯವು 2014-15 ರಲ್ಲಿ ಪ್ರಾರಂಭಿಸಿದ ಸ್ವದೇಶ್ ದರ್ಶನ್ 2.0 ಯೋಜನೆಯಲ್ಲಿ ಹಂಪಿ ಮತ್ತು ಮೈಸೂರು ಇರುವುದು ಕರ್ನಾಟಕಕ್ಕೆ ಹೆಮ್ಮೆಯ ಕ್ಷಣವಾಗಿದೆ ಸಂತಸ ವ್ಯಕ್ತಪಡಿಸಿದ್ದಾರೆ.


ಸ್ವದೇಶ್ ದರ್ಶನ್ ಯೋಜನೆಯು ದೇಶದ ಪ್ರವಾಸೋದ್ಯಮ ಅಭಿವೃದ್ಧಿ ಪಥದಲ್ಲಿ ಹೊಸ ಮೈಲಿಗಲ್ಲಾಗಿದೆ. ಭಾರತದಲ್ಲಿ ಪ್ರೇಕ್ಷಣೀಯ ಸ್ಥಳಗಳ ಸಂಖ್ಯೆಗೆ ಕೊರತೆಯಿಲ್ಲ. ಹೀಗಾಗಿ ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ್ ದರ್ಶನ್ ಯೋಜನೆ ಮಹತ್ವದ ಯೋಜನೆಗಳಲ್ಲಿ ಒಂದೆನಿಸಿದೆ. ವಿಭಿನ್ನ ವಿಷಯದ ಪ್ರವಾಸಿ ಸರ್ಕ್ಯೂಟ್‌ಗಳನ್ನು ಸಂಯೋಜಿಸುವ ಮೂಲಕ ಒಟ್ಟಾರೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕೇಂದ್ರ ಸರ್ಕಾರವು ಈ ಯೋಜನೆಯನ್ನು 2015 ರಲ್ಲಿ ಆರಂಭಿಸಿತು.

ಸ್ವದೇಶ್ ದರ್ಶನ್ ಯೋಜನೆಯು ಪ್ರವಾಸೋದ್ಯಮದ ಅಭಿವೃದ್ಧಿಯ ಜೊತೆಗೆ ಪಾರದರ್ಶಕ ಭಾರತ ಅಭಿಯಾನ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮೊದಲಾದ ಯೋಜನೆಗಳನ್ನು ಸಂಯೋಜಿಸುತ್ತದೆ. ಪ್ರವಾಸೋದ್ಯಮದ ಜೊತೆಗೆ ಈ ಎಲ್ಲಾ ಯೋಜನೆಗಳ ಸಮಗ್ರ ಅಭಿವೃದ್ಧಿ ಸಾಧಿಸುವುದು ಕೇಂದ್ರದ ಗುರಿಯಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ