ಕೊರೊನಾ ನಿಭಾಯಿಸಲು ದೇವರೇ ಮೋದಿಗೆ ಪ್ರಧಾನಿ ಪಟ್ಟ ನೀಡಿದ್ದಾನೆ, ಲಸಿಕೆ ವಿಳಂಬವಾಗಲು ವಿಪಕ್ಷದವರು ಕಾರಣ – ಡಾ.ಸುಧಾಕರ್

| Updated By: Skanda

Updated on: Jul 13, 2021 | 2:29 PM

ಕೊರೊನಾದಂತಹ ಸಂಕಷ್ಟದ ಸಂದರ್ಭ ನಿರ್ವಹಿಸಲೆಂದು ನರೇಂದ್ರ ಮೋದಿಯವರನ್ನು ಆ ದೇವರೇ ಕಳುಹಿಸಿಕೊಟ್ಟಿದ್ದಾನೆ. ಅವರನ್ನು ಭಾರತದ ಪ್ರಧಾನಿಯನ್ನಾಗಿಸಿದ್ದಾನೆ. ಮೋದಿ ಕೊರೊನಾ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ ಎನ್ನುವುದರಲ್ಲಿ ಸಂದೇಹವೇ ಇಲ್ಲ: ಡಾ.ಕೆ.ಸುಧಾಕರ್

ಕೊರೊನಾ ನಿಭಾಯಿಸಲು ದೇವರೇ ಮೋದಿಗೆ ಪ್ರಧಾನಿ ಪಟ್ಟ ನೀಡಿದ್ದಾನೆ, ಲಸಿಕೆ ವಿಳಂಬವಾಗಲು ವಿಪಕ್ಷದವರು ಕಾರಣ - ಡಾ.ಸುಧಾಕರ್
ಡಾ.ಕೆ.ಸುಧಾಕರ್, ನರೇಂದ್ರ ಮೋದಿ
Follow us on

ಚಿಕ್ಕಬಳ್ಳಾಪುರ: ಕೊರೊನಾ ನಿರ್ವಹಣೆ ಬಗ್ಗೆ ವಿಪಕ್ಷಗಳ ಟೀಕೆ ಹಾಗೂ ಮೂರನೇ ಅಲೆ ಬಗ್ಗೆ ಮಾತನಾಡಿರುವ ಕರ್ನಾಟಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Dr K.Sudhakar)​, ದೇಶದಲ್ಲಿ ಕೊರೊನಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಸಫಲರಾಗಿದ್ದಾರೆ. ಇಂಥದ್ದೊಂದು ಸನ್ನಿವೇಶವನ್ನು ನಿರ್ವಹಿಸಲೆಂದು ಸ್ವತಃ ದೇವರೇ ಮೋದಿಯನ್ನು ಭಾರತದ ಪ್ರಧಾನಿಯನ್ನಾಗಿ (Prime Minister of India) ಮಾಡಿದ್ದಾನೆ ಎಂದು ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮೋದಿಯವರ ಗಾಳಿ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಮತ್ತೆ ಪ್ರಧಾನಿ ಮೋದಿಯವರ ಹವಾ ತಂದುಕೊಳ್ಳಬೇಕಿದೆ ಎನ್ನುವ ಮೂಲಕ ಮೋದಿಯ ಕಾರ್ಯ ವೈಖರಿಯನ್ನು ಹಾಡಿಹೊಗಳಿದ್ದಾರೆ.

ದೇವರ ಕೃಪೆಯಿಂದ ಕೊವಿಡ್ ಹತೋಟಿಗೆ ಬಂದಿದೆ. ಆದರೆ, ಅದು ಸಂಪೂರ್ಣ ಕಡಿಮೆಯಾಗಿಲ್ಲ. ಹೀಗಾಗಿ ಎಲ್ಲರೂ ಜಾಗೃತೆಯಿಂದ ಇರಿ ಎಂದು ಹೇಳಿರುವ ಡಾ.ಸುಧಾಕರ್, ಲಸಿಕೆ ವಿತರಣೆಗೆ ವಿಪಕ್ಷಗಳೇ ಅಡ್ಡಿಯಾದವು ಎಂದು ದೂಷಿಸಿದ್ದಾರೆ. ಕೊರೊನಾ ಲಸಿಕೆಯ ಬಗ್ಗೆ ಮೊದಲು ವಿಪಕ್ಷಗಳು ಅಪಹಾಸ್ಯ ಮಾಡಿದ್ದವು. ಅದರಿಂದಾಗಿ ಲಸಿಕೆಯನ್ನು ವೇಗವಾಗಿ ವಿತರಿಸಬೇಕೆಂಬ ಕಾರ್ಯಕ್ಕೆ ತೊಡಕಾಯಿತು ಎಂದು ತಿಳಿಸಿದ್ದಾರೆ.

ಕೊರೊನಾದಂತಹ ಸಂಕಷ್ಟದ ಸಂದರ್ಭ ನಿರ್ವಹಿಸಲೆಂದು ನರೇಂದ್ರ ಮೋದಿಯವರನ್ನು ಆ ದೇವರೇ ಕಳುಹಿಸಿಕೊಟ್ಟಿದ್ದಾನೆ. ಅವರನ್ನು ಭಾರತದ ಪ್ರಧಾನಿಯನ್ನಾಗಿಸಿದ್ದಾನೆ. ಮೋದಿ ಕೊರೊನಾ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಹೀಗಾಗಿ ಮೋದಿಯವರ ಹವಾ ಮತ್ತಷ್ಟು ಹೆಚ್ಚಾಗಿದೆ ಎಂದು ಕೊರೊನಾಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ನಿಲುವುಗಳ ಬಗ್ಗೆ ಸುಧಾಕರ್​ ಹರ್ಷ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಸಂಪುಟ ಪುನಾರಚನೆ ಬಗ್ಗೆ ಮಾತನಾಡಿದ ಅವರು, ಇದೊಂದು ಇತಿಹಾಸವಾಗಿದೆ. ಎಲ್ಲಾ ಧರ್ಮ ಜಾತಿಗಳಿಗೆ ಸಮಾನವಾಗಿ ಮಂತ್ರಿಸ್ಥಾನ ಹಂಚಿದ್ದಾರೆ. ಬೇರೆ ಪಕ್ಷಗಳಿಗಿಂತ ಬಿಜೆಪಿ ಪಕ್ಷ ವಿಭಿನ್ನವಾಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರ ಕ್ಷಮತೆ ಬಗ್ಗೆ ಹೊಗಳಿದ ಸುಧಾಕರ್​, ಚುನಾವಣೆ ಬಂದಾಗ ಕಾಂಗ್ರೆಸ್ ಕಾರ್ಯಕರ್ತರು ಮುಂದೆ ಇರುತ್ತಾರೆ. ಆದರೆ, ಬಿಜೆಪಿ ಕಾರ್ಯಕರ್ತರು ಸಂದಿಗ್ಧ ಪರಿಸ್ಥಿತಿಯಲ್ಲೂ ಮುಂದೆ ನಿಲ್ಲುತ್ತಾರೆ ಎನ್ನುವ ಮೂಲಕ ಬಿಜೆಪಿಯ ಕಾರ್ಯಕರ್ತರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 
Modi 2.0 Cabinet: ಪ್ರಧಾನಿ ಮೋದಿ ಸಂಪುಟದಲ್ಲಿ ಶೇ 42 ರಷ್ಟು ಸಚಿವರಿಗೆ ಕ್ರಿಮಿನಲ್ ಹಿನ್ನೆಲೆ, 70 ಸಚಿವರು ಕೋಟ್ಯಾಧಿಪತಿಗಳು -ಎಡಿಆರ್​ ವರದಿ 

ಗಂಡ, ಹೆಂಡತಿ ನಡುವೆ ಅಸಮಾಧಾನ ಇರುತ್ತದೆ, ಅಂಥಾದ್ರಲ್ಲಿ ದೊಡ್ಡ ಪಕ್ಷದಲ್ಲಿ ಅಸಮಾಧಾನ ಇರೋದಿಲ್ವಾ? – ಡಾ.ಕೆ.ಸುಧಾಕರ್