ಸರ್ಕಾರ, ಅಧೀನ ಸಂಸ್ಥೆಗಳ ನಡುವಿನ ವಿವಾದ ಕೋರ್ಟ್ ಮೆಟ್ಟಿಲೇರಬಾರದು: ಹೈಕೋರ್ಟ್ ಸೂಚನೆ

ಎಲ್ಲವನ್ನೂ ನ್ಯಾಯಾಲಯವೇ ತೀರ್ಮಾನಿಸಲಿ ಎಂಬ ನಿಲುವು ಸರಿಯಲ್ಲ. ಸರ್ಕಾರ ಮತ್ತು ಅಧೀನ ಸಂಸ್ಥೆಗಳ ನಡುವೆ ನಡೆಯುವ ವಿವಾದವನ್ನು ಪ್ರತ್ಯೇಕ ವೇದಿಕೆಯಲ್ಲಿ ಪರಿಹರಿಸಿಕೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.

ಸರ್ಕಾರ, ಅಧೀನ ಸಂಸ್ಥೆಗಳ ನಡುವಿನ ವಿವಾದ ಕೋರ್ಟ್ ಮೆಟ್ಟಿಲೇರಬಾರದು: ಹೈಕೋರ್ಟ್ ಸೂಚನೆ
ಕರ್ನಾಟಕ ಹೈಕೋರ್ಟ್
Edited By:

Updated on: Jul 27, 2023 | 9:02 PM

ಬೆಂಗಳೂರು, ಜುಲೈ 27: ಸರ್ಕಾರ ಮತ್ತು ಅಧೀನ ಸಂಸ್ಥೆಗಳ ನಡುವಿನ ವಿವಾದ ಕೋರ್ಟ್ ಮೆಟ್ಟಿಲೇರಬಾರದು. ತಮ್ಮ ನಡುವಿನ ವ್ಯಾಜ್ಯಗಳನ್ನು ಪ್ರತ್ಯೇಕ ವೇದಿಕೆಯಲ್ಲಿ ಪರಿಹರಿಸಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಸೂಚನೆ ನೀಡಿದೆ. ಸರ್ಕಾರದ ಸಂಸ್ಥೆಗಳು ವ್ಯಾಜ್ಯಗಳ ಪ್ರಮಾಣ ಹೆಚ್ಚಿಸಬಾರದು. ಎಲ್ಲವನ್ನೂ ನ್ಯಾಯಾಲಯವೇ ತೀರ್ಮಾನಿಸಲಿ ಎಂಬ ನಿಲುವು ಸರಿಯಲ್ಲ ಎಂದು ನ್ಯಾ.ಸುನಿಲ್ ದತ್ ಯಾದವ್‌ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ.

ಕೃಷಿ ಉತ್ಪನ್ನ ಸಮಿತಿಯ ಭೂಮಿ BMRCL ಸ್ವಾಧೀನಪಡಿಸಿಕೊಂಡಿತ್ತು. ಭೂಸ್ವಾಧೀನದ ಪರಿಹಾರ ಪ್ರಮಾಣ ಪ್ರಶ್ನಿಸಿ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ವಿವಾದ ಬಗೆಹರಿಸಲು ಹೈಕೋರ್ಟ್, ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ರಚಿಸಿದ್ದು, 6 ಅಧಿಕಾರಿಗಳ ಸಮಿತಿಯಿಂದಲೇ ಬಗೆಹರಿಸಲು ಸೂಚನೆ ನೀಡಿದೆ. ಒಂದೊಮ್ಮೆ ವಿವಾದ ಬಗೆಹರಿಯದಿದ್ದರೆ ಮಾತ್ರ ಕೋರ್ಟ್‌ಗೆ ವಹಿಸಲು ನಿರ್ದೇಶನ ನೀಡಿದೆ.

ಇದನ್ನೂ ಓದಿ: Karnataka High Court: ಕರ್ನಾಟಕ ಹೈಕೋರ್ಟ್​ನ 6 ಮಂದಿ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ; ಪಾಕಿಸ್ತಾನ ಕೈವಾಡವೇ?

ಖಾಸಗಿ ಕಂಪನಿಗಳ ವಾಹನ ನೋಂದಣಿಗೆ ನಿರ್ದೇಶನ‌ ನೀಡಿದ ಹೈಕೋರ್ಟ್

ಬಿಹೆಚ್ ಸರಣಿಯಲ್ಲಿ ಖಾಸಗಿ ಕಂಪನಿ ವಾಹನಗಳ ನೋಂದಣಿ ವಿಚಾರವಾಗಿ ಎರಡು ಖಾಸಗಿ ಕಂಪನಿಗಳ ವಾಹನ ನೋಂದಣಿಗೆ ಹೈಕೋರ್ಟ್ ನಿರ್ದೇಶನ‌ ನೀಡಿದೆ. ಕೇಂದ್ರ ಸರ್ಕಾರ ಬಿಹೆಚ್ ಸರಣಿಯ ವಾಹನ ನೋಂದಣಿ ಆರಂಭಿಸಿತ್ತು. ರಕ್ಷಣಾ ಸಿಬ್ಬಂದಿ, ಕೇಂದ್ರ, ರಾಜ್ಯ ಸರ್ಕಾರಿ ಉದ್ದಿಮೆಗಳು ನಾಲ್ಕಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕಚೇರಿಯಿರುವ ಖಾಸಗಿ ಕಂಪನಿಗಳಿಗೆ ಬಿಹೆಚ್ ಸರಣಿಯಲ್ಲಿ ವಾಹನ ನೋಂದಣಿಗೆ ಅವಕಾಶ ನೀಡಿತ್ತು.

ಆದರೆ, ರಾಜ್ಯ ಸರ್ಕಾರ ಖಾಸಗಿ ಕಂಪನಿಗಳಿಗೆ ಅವಕಾಶ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಎರಡು ಖಾಸಗಿ ಕಂಪನಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ವಿಚಾರಣೆ ನಡೆಸಿದ ಏಕಸದಸ್ಯ ಪೀಠ, ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಿತ್ತು. ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಸದ್ಯ ಸರ್ಕಾರದ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್, ಖಾಸಗಿ ಕಂಪನಿಗಳ ವಾಹನ ನೋಂದಣಿಗೆ ನಿರ್ದೇಶನ‌ ನೀಡಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ