ಮಕ್ಕಳ ಅಶ್ಲೀಲ ಚಿತ್ರ ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಅಪರಾಧವಲ್ಲ ಎಂಬ ಆದೇಶ ವಾಪಸ್ಸು ಪಡೆದ ಕರ್ನಾಟಕ ಹೈಕೋರ್ಟ್
ಮಕ್ಕಳ ಅಶ್ಲೀಲ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಅಪರಾಧವಲ್ಲ ಎಂಬ ಆದೇಶ ನೀಡಿದ ಹೈಕೋರ್ಟ್, ಇದೀಗ ಆ ಆದೇಶವನ್ನು ವಾಪಸ್ಸು ಪಡೆದಿದೆ. ಆನ್‌ಲೈನ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ವೀಕ್ಷಿಸುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ಬಿ ಅಡಿಯಲ್ಲಿ ಅಪರಾಧವಲ್ಲ ಎಂದು ಹೇಳಿತ್ತು. ಇದೀಗ ಈ ಆದೇಶದಲ್ಲಿ ತಪ್ಪಿದೆ ಎಂದು ಹೇಳಿದೆ.

ಮಕ್ಕಳ ಅಶ್ಲೀಲ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಅಪರಾಧವಲ್ಲ ಎಂದು ಕರ್ನಾಟಕ ಹೈಕೋರ್ಟ್ ಜುಲೈ 10ರಂದು ಆದೇಶವನ್ನು ನೀಡಿತ್ತು. ಇದೀಗ ಈ ಆದೇಶವನ್ನು ಹಿಂಪಡೆದಿದೆ. ಆನ್‌ಲೈನ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ವೀಕ್ಷಿಸುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ಬಿ ಅಡಿಯಲ್ಲಿ ಅಪರಾಧವಲ್ಲ ಎಂದು ಹೇಳಿತ್ತು. ಆದರೆ ಇದೀಗ ಈ ಆದೇಶವನ್ನು ಹಿಂಪಡೆದಿದೆ. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಸೆಕ್ಷನ್ 67 ಬಿ (ಬಿ)ಯನ್ನು ಗಮನಿಸಿದೆ ತಪ್ಪಾಗಿ ಈ ಆದೇಶವನ್ನು ನೀಡಿದೆ ಎಂದು ಹೇಳಿದೆ.
ರಾಜ್ಯ ಸರ್ಕಾರವು ಸಲ್ಲಿಸಿದ ಅರ್ಜಿ ಆಧಾರ ಮೇಲೆ ಈ ಆದೇಶವನ್ನು ಸೆಕ್ಷನ್ 67 ಬಿ (ಎ) ಆಧಾರದ ಮೇಲೆ ನೀಡಲಾಗಿದೆ. ಕಾಯಿದೆಯ 67B (b) ವಿಭಾಗವು ಪಠ್ಯ ಅಥವಾ ಡಿಜಿಟಲ್ ಚಿತ್ರಗಳನ್ನು ರಚಿಸುವುದು, ಸಂಗ್ರಹಿಸುವುದು, ಹುಡುಕುವುದು, ಬ್ರೌಸ್ ಮಾಡುವುದು, ಡೌನ್‌ಲೋಡ್ ಮಾಡುವುದು, ಜಾಹೀರಾತು ಮಾಡುವುದು, ಪ್ರಚಾರ ಮಾಡುವುದು, ವಿನಿಮಯ ಮಾಡುವುದು ಅಥವಾ ಮಕ್ಕಳನ್ನು ಅಶ್ಲೀಲ ಅಥವಾ ಅಸಭ್ಯ ಅಥವಾ ಲೈಂಗಿಕವಾಗಿ ಅಶ್ಲೀಲ ರೀತಿಯಲ್ಲಿ ಚಿತ್ರಿಸುವುದು ಸೆಕ್ಷನ್ 67B ಅಡಿಯಲ್ಲಿ ವಿಚಾರಣೆಗೆ ಮುಕ್ತವಾಗಿರುತ್ತದೆ ಎಂದು ಹೇಳಲಾಗಿದೆ.
ಈ ಅರ್ಜಿ ಬಗ್ಗೆ ವಿಚಾರಣೆಯನ್ನು ನಡೆಸಲು ಆವಕಾಶ ನೀಡದೇ, ತೀರ್ಪು ನೀಡಿರುವುದು ತಪ್ಪು ಎಂದು ಹೇಳಿದೆ. ಈ ಆದೇಶವನ್ನು ರದ್ದುಗೊಳಿಸುವ ಮೂಲಕ ಹೆಚ್ಚಿನ ವಿಚಾರಣೆ ಅಗತ್ಯ ಎಂದು ಹೇಳಿದೆ. ಇನ್ನು ಒಮ್ಮೆ ಆದೇಶ ಹೊರಡಿಸಿದ ನಂತರ ಈ ಆದೇಶವನ್ನು ಹಿಂಪಡೆಯಲು ಅಥವಾ ಆದೇಶವನ್ನು ಪರಿಶೀಲಿಸಲು ಈ ನ್ಯಾಯಾಲಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಅರ್ಜಿದಾರರು ಪರ ವಕೀಲರು ವಾದಿಸಿದ್ದಾರೆ. ಈ ಅರ್ಜಿದಾರರ ವಕೀಲರ ವಾದವನ್ನು ತಿರಸ್ಕರಿಸಿದ ನ್ಯಾಯಾಲಯವು ಸೆಕ್ಷನ್ 362 CrPC ಬಾರ್ ಮೂಲಕ ಸಮಿತಿಯನ್ನು ರಚನೆ ಮಾಡಲಾಗುವುದು ಎಂದು ಹೇಳಲಾಗಿದೆ.
ಇದನ್ನೂ ಓದಿ: ವಿಧಾನಸೌಧದ ಗುಮ್ಮಟದಲ್ಲಿ ಕಾಣಿಸಿಕೊಂಡ ಬಿರುಕು; ದಿಢೀರ್ ಪರಿಶೀಲನೆ ನಡೆಸಿದ ಸ್ಪೀಕರ್ ಯುಟಿ ಖಾದರ್
ಇದರ ಜತೆಗೆ ವಕೀಲರಿಗೆ ಉತ್ತರ ವಕೀಲರು ನಾವು ಕೂಡ ಮನುಷ್ಯರೇ ನಮ್ಮಿಂದಲ್ಲೂ ತಪ್ಪು ಆಗುತ್ತದೆ. ಅದನ್ನು ಸರಿ ಮಾಡಲು ಅವಕಾಶ ಇದೆ. ನಾವೂ ದೋಷರಹಿತರಲ್ಲ ಎಂದು ಹೇಳಿದೆ. ಇದೀಗ ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆದು, ಮುಂದಿನ ತೀರ್ಪು ನೀಡಲಾಗುವುದು. ಈ ಆದೇಶವನ್ನು ರದ್ದು ಮಾಡಲಾಗುವುದು ಎಂದು ಪೀಠ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:30 pm, Sat, 20 July 24