ಹೈಕೋರ್ಟ್ ಸುದ್ದಿಗಳು: ಕೊವಿಡ್ ಚಿಕಿತ್ಸೆಗೆ ಶುಲ್ಕ ನಿಗದಿ ಬಗ್ಗೆ ಸೂಕ್ತ ಪ್ರಚಾರ ನೀಡಲು ಸರ್ಕಾರಕ್ಕೆ ಸೂಚನೆ

Karnataka High Court: ಜಾತಿ ಗಣತಿ ವರದಿ ಜಾರಿ ಕೋರಿ ಮುಖ್ಯಮಂತ್ರಿ ಚಂದ್ರು ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ಬುಧವಾರ ನಡೆಸಲಾಗಿದೆ. ಪಿಐಎಲ್​ಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ‌ ಕೋರಲಾಗಿದೆ.

ಹೈಕೋರ್ಟ್ ಸುದ್ದಿಗಳು: ಕೊವಿಡ್ ಚಿಕಿತ್ಸೆಗೆ ಶುಲ್ಕ ನಿಗದಿ ಬಗ್ಗೆ ಸೂಕ್ತ ಪ್ರಚಾರ ನೀಡಲು ಸರ್ಕಾರಕ್ಕೆ ಸೂಚನೆ
ಕರ್ನಾಟಕ ಹೈಕೋರ್ಟ್
Edited By:

Updated on: Sep 08, 2021 | 7:30 PM

ಬೆಂಗಳೂರು: ಕೊವಿಡ್ ಚಿಕಿತ್ಸೆಗೆ ಆಸ್ಪತ್ರೆಗಳಿಂದ ದುಬಾರಿ ಶುಲ್ಕ ವಿಚಾರವಾಗಿ ಹೈಕೋರ್ಟ್ ಸೂಚನೆ ನೀಡಿದೆ. ಸರ್ಕಾರದ ಶುಲ್ಕ‌ ನಿಗದಿ ಬಗ್ಗೆ ಪ್ರಚಾರ ನೀಡಲು‌ ಸೂಚನೆ ಕೊಟ್ಟಿದೆ. ಬಸ್​ಗಳಲ್ಲಿ ಜಾಹಿರಾತಿನ ಮೂಲಕ ಅರಿವು ಮೂಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ಕೊಟ್ಟಿದೆ. ಆಯುರ್ವೇದ ಕಾಲೇಜಿನಲ್ಲಿ ಲಸಿಕೆ ಕಡ್ಡಾಯ ಪ್ರಶ್ನಿಸಿ ಪಿಐಎಲ್ ಸಲ್ಲಿಸಲಾಗಿತ್ತು. ಆಯುರ್ವೇದ ‌ವೈದ್ಯರ ಪಿಐಎಲ್​ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಲಸಿಕೆ ಬೇಡವೆನ್ನುವವರು ಮನೆಯಲ್ಲಿರುವುದು ಉತ್ತಮ ಎಂದು ಹೈಕೋರ್ಟ್ ನ್ಯಾ. ಅರವಿಂದ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಂತ ವ್ಯಾಕ್ಸಿನೇಷನ್​ಗೆ ಅಗತ್ಯ ಕ್ರಮಕ್ಕೆ ಸೂಚನೆ ನೀಡಲಾಗಿದೆ.

ಜಾತಿ ಗಣತಿ ಪಿಐಎಲ್ ವಿಚಾರಣೆ
ಜಾತಿ ಗಣತಿ ವರದಿ ಜಾರಿ ಕೋರಿ ಮುಖ್ಯಮಂತ್ರಿ ಚಂದ್ರು ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ಬುಧವಾರ ನಡೆಸಲಾಗಿದೆ. ಪಿಐಎಲ್​ಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ‌ ಕೋರಲಾಗಿದೆ. ರಾಜ್ಯ ಸರ್ಕಾರ, ಹಿಂದುಳಿದ ವರ್ಗಗಳ ಆಯೋಗದಿಂದ‌‌ ಮನವಿ ಮಾಡಲಾಗಿದೆ. ವಿಚಾರಣೆ ನವೆಂಬರ್ 18ಕ್ಕೆ‌ ಮುಂದೂಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ಸಮೀಕ್ಷಾ ವರದಿ ಸರ್ಕಾರಕ್ಕೆ ಸಲ್ಲಿಸಲು, ಹಿಂದುಳಿದ ವರ್ಗಗಳ ಆಯೋಗಕ್ಕೆ ನಿರ್ದೇಶಿಸಲು ಕೋರಿದ್ದರು. ಈ ಸಂಬಂಧ ಇಂದು ವಿಚಾರಣೆ ನಡೆಸಲಾಗಿತ್ತು.

ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡಲು ಎಜಿ‌ ಮನವಿ
ಮೈಸೂರಿನ ಗನ್​ಹೌಸ್ ಸರ್ಕಲ್‌ನಲ್ಲಿ ಪ್ರತಿಮೆ ವಿವಾದ ವಿಚಾರವಾಗಿ ಹೈಕೋರ್ಟ್ ನೀಡಿದ್ದ ಆದೇಶ ಮರುಪರಿಶೀಲನೆಗೆ ಮನವಿ ಮಾಡಲಾಗಿದೆ. ಸರ್ಕಾರದ ಎಜಿ ಪ್ರಭುಲಿಂಗ್ ನಾವದಗಿ ಮನವಿ ಮಾಡಿದ್ದಾರೆ. ಪ್ರತಿಮೆ ಸ್ಥಾಪನೆಯಿಂದ‌ ರಸ್ತೆ ಸಂಚಾರಕ್ಕೆ ಅಡ್ಡಿ ಆಗುವುದಿಲ್ಲ‌. ಮೈಸೂರಿನಲ್ಲಿ‌ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಕೊಡುಗೆಯಿದೆ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಕೊಡುಗೆಯಿದೆ. ಮುಂದಿನ‌ ಜನಾಂಗಕ್ಕೆ ಪ್ರೇರಣೆಯಾಗಲು ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡಲು ಎಜಿ‌ ಮನವಿ ಮಾಡಿದ್ದಾರೆ. ಹೀಗಾಗಿ, ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಕಾಯ್ದಿರಿಸಿದೆ.

ವಕ್ಫ್ ಆಸ್ತಿ ಒತ್ತುವರಿ ಪ್ರಕರಣ: ಪಿಐಎಲ್​ಗೆ ಆಕ್ಷೇಪಣೆ ಸಲ್ಲಿಸಲು‌ ಮತ್ತೆ ಕಾಲಾವಕಾಶ ಕೋರಿದ ಸರ್ಕಾರ
ರಾಜ್ಯಾದ್ಯಂತ ವಕ್ಫ್ ಆಸ್ತಿ ಒತ್ತುವರಿ ಪ್ರಕರಣ ಸಂಬಂಧಿಸಿ ಅಲ್ಪಸಂಖ್ಯಾತ ಆಯೋಗದ ವರದಿ ಮಂಡಿಸದ ಹಿನ್ನೆಲೆಯಲ್ಲಿ, ವಿಧಾನ‌ಮಂಡಲದಲ್ಲಿ ವರದಿ ಮಂಡನೆ‌ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಬುಧವಾರ ನಡೆಸಲಾಗಿದೆ. ಪಿಐಎಲ್​ಗೆ ಆಕ್ಷೇಪಣೆ ಸಲ್ಲಿಸಲು‌ ಮತ್ತೆ ಕಾಲಾವಕಾಶವನ್ನು ಸರ್ಕಾರ ಕೋರಿದೆ. ಆಕ್ಷೇಪಣೆ ಸಲ್ಲಿಕೆಗೆ ಹೈಕೋರ್ಟ್ 4 ವಾರಗಳ ಗಡುವು ನೀಡಿದೆ. ಆಕ್ಷೇಪಣೆ ಸಲ್ಲಿಸದಿದ್ದರೆ ಪ್ರಧಾನ ಕಾರ್ಯದರ್ಶಿ ಹಾಜರಾಗಬೇಕು. ಅಲ್ಪಸಂಖ್ಯಾತ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಜರಾಗಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ. ರಾಜ್ಯಾದ್ಯಂತ ವಕ್ಫ್ ಆಸ್ತಿ ಒತ್ತುವರಿ ಬಗ್ಗೆ ವರದಿ ಸಲ್ಲಿಕೆ ಮಾಡಲಾಗಿದೆ. ಅನ್ವರ್ ಮಾಣಿಪ್ಪಾಡಿ ಈ ಬಗ್ಗೆ ವರದಿ ಸಲ್ಲಿಸಿದ್ದರು. ವರದಿ ಜಾರಿ ಕೋರಿ ಎಸ್.ಕೆ.‌ ಕಾಂತಾ ಪಿಐಎಲ್ ಸಲ್ಲಿಸಿದ್ದರು.

ಇದನ್ನೂ ಓದಿ: ಕನ್ನಡವನ್ನು ಕುರೂಪಿ ಭಾಷೆ ಎಂದು ತೋರಿಸಿದ್ದಕ್ಕೆ ಕರ್ನಾಟಕ ಹೈಕೋರ್ಟ್ ಕ್ಷಮೆಯಾಚಿಸಿದ ಗೂಗಲ್

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್​ನ 10 ಹೆಚ್ಚುವರಿ ನ್ಯಾಯಾಧೀಶರ ಖಾಯಂ ನೇಮಕಾತಿಗೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು; ಇಲ್ಲಿದೆ ಪಟ್ಟಿ

Published On - 7:26 pm, Wed, 8 September 21