ಕರ್ನಾಟಕ ಹೈಕೋರ್ಟ್ನ 10 ಹೆಚ್ಚುವರಿ ನ್ಯಾಯಾಧೀಶರ ಖಾಯಂ ನೇಮಕಾತಿಗೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು; ಇಲ್ಲಿದೆ ಪಟ್ಟಿ
ಕೇರಳ ಹೈಕೋರ್ಟ್ ಜಡ್ಜ್ಗಳ ಖಾಯಂಗಾಗಿ ಒಂದು ಮತ್ತು ಕರ್ನಾಟಕದ 10 ಹೆಚ್ಚುವರಿ ನ್ಯಾಯಾಧೀಶರ ಸಂಬಂಧ ಎರಡು ಪ್ರಕಟಣೆಯನ್ನು ಸುಪ್ರೀಂಕೋರ್ಟ್ ಕೊಲಿಜಿಯಂ ಬಿಡುಗಡೆ ಮಾಡಿದೆ.
ಕರ್ನಾಟಕ ಹೈಕೋರ್ಟ್ (Karnataka Highcourt)ನ 10 ನ್ಯಾಯಾಧೀಶರು ಮತ್ತು ಕೇರಳ ಹೈಕೋರ್ಟ್ (Kerala Highcourt)ನ ಇಬ್ಬರು ನ್ಯಾಯಾಧೀಶರನ್ನು ಆಯಾ ಹೈಕೋರ್ಟ್ನಲ್ಲಿ ಖಾಯಂ ಮಾಡುವಂತೆ ನಿನ್ನೆ (ಸೆಪ್ಟೆಂಬರ್ 8) ಸುಪ್ರೀಂಕೋರ್ಟ್(Supreme Court)ನ ಕೊಲಿಜಿಯಂ ಶಿಫಾರಸ್ಸು ಮಾಡಿ, ಈ ಸಂಬಂಧ ಮೂರು ಪ್ರಕಟಣೆ ಹೊರಡಿಸಿದೆ. ಕೇರಳ ಹೈಕೋರ್ಟ್ ಜಡ್ಜ್ಗಳ ಖಾಯಂಗಾಗಿ ಒಂದು ಮತ್ತು ಕರ್ನಾಟಕದ 10 ಹೆಚ್ಚುವರಿ ನ್ಯಾಯಾಧೀಶರ ಸಂಬಂಧ ಎರಡು ಪ್ರಕಟಣೆಯನ್ನು ಸುಪ್ರೀಂಕೋರ್ಟ್ ಕೊಲಿಜಿಯಂ ಬಿಡುಗಡೆ ಮಾಡಿದೆ.
ಇದೀಗ ಖಾಯಂ ನೇಮಕಾತಿಗಾಗಿ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿರುವ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಇವರು.. 1. ನ್ಯಾಯಾಧೀಶ ಶಿವಶಂಕರ್ ಅಮರಣ್ಣವರ್ 2. ನ್ಯಾ.ಎಂ.ಗಣೇಶಯ್ಯ ಉಮಾ 3. ಜಸ್ಟೀಸ್ ವೇದವ್ಯಾಸಾಚಾರ್ ಶ್ರೀಶಾನಂದಾ 4. ಜಸ್ಟೀಸ್ ಹಂಚಾಟೆ ಸಂಜೀವ್ಕುಮಾರ್ 5. ನ್ಯಾ.ಪದ್ಮರಾಜ್ ನೇಮಾಚಂದ್ರ ದೇಸಾಯಿ 6. ಜಸ್ಟೀಸ್ ಪಿ.ಕೃಷ್ಣ ಭಟ್ 7. ನ್ಯಾ.ಮರಲೂರ್ ಇಂದ್ರಕುಮಾರ್ ಅರುಣ್ 8. ಜಸ್ಟೀಸ್ ಎಂಗಲಗುಪ್ಪೆ ಸೀತಾರಾಮಯ್ಯ ಇಂದಿರೇಶ್ 9. ನ್ಯಾ.ರವಿ ವೆಂಕಪ್ಪ ಹೊಸ್ಮನಿ 10. ಸವಣೂರ್ ವಿಶ್ವಜಿತ್ ಶೆಟ್ಟಿ
ಹಾಗೇ, ಕೇರಳ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರ ಪಟ್ಟಿ ಹೀಗಿದೆ.. 1.ಎಂ.ಆರ್.ಅನಿತಾ 2.ಕೆ.ನಾಯರ್ ಹರಿಪಾಲ್
ಕೇರಳದ ಈ ಇಬ್ಬರಲ್ಲಿ ಎಂ.ಆರ್.ಅನಿತಾ 2020ರ ಮಾರ್ಚ್ನಲ್ಲಿ ಮತ್ತು ಕೆ.ನಾಯರ್ ಹರಿಪಾಲ್ ಮೇ ಅದೇ ವರ್ಷ ಮೇ ತಿಂಗಳಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರ ಪೈಕಿ, ನ್ಯಾ.ಇಂದ್ರಕುಮಾರ್ ಅರುಣ್ ಮತ್ತು ನ್ಯಾ.ರವಿ ವೆಂಕಪ್ಪ ಹೊಸ್ಮನಿ 2020ರ ಜನವರಿಯಲ್ಲಿ, ನ್ಯಾ. ವಿಶ್ವಜಿತ್ ಶೆಟ್ಟಿಯವರು 2020ರ ಏಪ್ರಿಲ್ನಲ್ಲಿ ಹೈಕೋರ್ಟ್ಗೆ ನೇಮಕಗೊಂಡಿದ್ದಾರೆ. ಉಳಿದ ಆರೂ ನ್ಯಾಯಾಧೀಶರು 2020ರ ಮೇ ತಿಂಗಳಲ್ಲಿ ನೇಮಕಗೊಂಡವರು.
ಇದನ್ನೂ ಓದಿ: ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ 100 ಪ್ರಯಾಣಿಕರಿದ್ದ ಬೋಟ್ಗಳು ಡಿಕ್ಕಿ; ದುರಂತದಲ್ಲಿ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ
ನವೆಂಬರ್ನಲ್ಲಿ ಇನ್ವೆಸ್ಟ್ ಕರ್ನಾಟಕ ಹೂಡಿಕೆ ಸಮಾವೇಶ: ಮುರುಗೇಶ್ ನಿರಾಣಿ