ಗಣಿ ಕ್ಷೇತ್ರದಲ್ಲಿ ಹಲವು ಬದಲಾವಣೆಗೆ ಕೇಂದ್ರದ ಚಿಂತನೆ: ಸುಳಿವು ನೀಡಿದ ಸಚಿವ ಪ್ರಲ್ಹಾದ ಜೋಶಿ

ಗಣಿಗಾರಿಕೆ ನಿಯಮಗಳಲ್ಲಿ ಸೂಕ್ತ ಬದಲಾವಣೆಗಳನ್ನು ತರಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಗಣಿ ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಗಣಿ ಕ್ಷೇತ್ರದಲ್ಲಿ ಹಲವು ಬದಲಾವಣೆಗೆ ಕೇಂದ್ರದ ಚಿಂತನೆ: ಸುಳಿವು ನೀಡಿದ ಸಚಿವ ಪ್ರಲ್ಹಾದ ಜೋಶಿ
ಸಚಿವ ಪ್ರಹ್ಲಾದ್ ಜೋಶಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 08, 2021 | 9:37 PM

ದೆಹಲಿ: ಭಾರತದ ಸ್ವಾವಲಂಬನೆಗೆ ಮತ್ತು ಆರ್ಥಿಕ ಪ್ರಗತಿಗೆ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ ಅತ್ಯಗತ್ಯ. ಗಣಿಗಾರಿಕೆ ನಿಯಮಗಳಲ್ಲಿ ಸೂಕ್ತ ಬದಲಾವಣೆಗಳನ್ನು ತರಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಗಣಿ ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಭಾರತದ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆಯಿಂದ, ಹರಾಜಿಗೆ ಗುರುತಿಸಲ್ಪಟ್ಟ 100 ಜಿ4 ಸಾಮರ್ಥ್ಯ ಖನಿಜ ಬ್ಲಾಕ್​ಗಳನ್ನು ರಾಜ್ಯಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಗಾಧ ನೈಸರ್ಗಿಕ ಸಂಪನ್ಮೂಲಗಳಿದ್ದೂ ನಾವು ಕಲ್ಲಿದ್ದಲು ಸೇರಿದಂತೆ ಹಲವು ಖನಿಜಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಎಂದು ವಿಷಾದಿಸಿದರು.

ಇದೇ ವೇಳೆ 100ಕ್ಕೂ ಹೆಚ್ಚು ಜಿ4 ಗಣಿ ಘಟಕಗಳನ್ನು ಹರಾಜು ಪ್ರಕ್ರಿಯೆ ನಿರ್ವಹಿಸಲು ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಿ, ಶೀಘ್ರ ಹರಾಜು ಪ್ರಕ್ರಿಯೆ ಆರಂಭಿಸಬೇಕು. ವಿವಿಧ ಇಲಾಖೆಗಳ ನಡುವೆ ಮತ್ತು ಅಧಿಕಾರಿ-ಸಚಿವರ ನಡುವಣ ಸಮನ್ವಯ ಕೊರತೆಯಿಂದ ಗಣಿಗಾರಿಕೆಗೆ ಭೂಮಿ ನೀಡುವ ಪ್ರಕ್ರಿಯೆ ತಡವಾಗಬಾರದು ಎಂದು ತಾಕೀತು ಮಾಡಿದರು.

ದೇಶದ ಆರ್ಥಿಕ ಸುಭದ್ರತೆಗೆ ಗಣಿಯ ಅಗತ್ಯಗಳ ಬಗ್ಗೆ ನಾನು ಹೊಸದಾಗಿ ಹೇಳುವ ಅಗತ್ಯವಿಲ್ಲ. ನಾವು ಇಂದು ಏನಾಗಿದ್ದೇವೆ, ಮುಂದೆ ಏನಾಗಬೇಕು ಅದು ಸಾಧ್ಯವಾಗಲು ಸುಸ್ಥಿರ ಗಣಿಗಾರಿಕೆಯಿಂದ ಮಾತ್ರ ಸಾಧ್ಯ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ಭೌಗೋಳಿಕ ಸಂಪನ್ಮೂಲಗಳು ಕಡಿಮೆ ಎನಿಸುತ್ತದೆ. ಈವರೆಗೆ ಶೇ 1.5ರಷ್ಟನ್ನು ಮಾತ್ರ ನಾವು ಗುರುತಿಸಿದ್ದೇವೆ, ಅದರಲ್ಲಿ ಶೇ 10ರಷ್ಟು ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇದರರ್ಥ ನಮ್ಮ ಸಾಮರ್ಥ್ಯ ಕಡಿಮೆ ಎಂದಲ್ಲ. ಸಮಸ್ಯೆಯಿರುವುದು ನೀತಿಗಳ ವಿಚಾರದಲ್ಲಿ ಮತ್ತು ಮನಃಸ್ಥಿತಿಯ ವಿಚಾರದಲ್ಲಿ ಎಂದು ನುಡಿದರು.

ಗಣಿ ಹಂಚಿಕೆಯಲ್ಲಿ ವಿವೇಚನೆಗೆ ಅವಕಾಶವಿತ್ತು. ಅದೇ ದೊಡ್ಡ ಸಮಸ್ಯೆಯೂ ಆಯಿತು. ಮೊದಲು ಬಂದವರಿಗೆ ಆದ್ಯತೆ ರೀತಿಯಲ್ಲಿ ನಾವು ಹರಾಜು ಪ್ರಕ್ರಿಯೆ ಆರಂಬಿಸಿದೆವು. ನ್ಯಾಯಾಲಯದಲ್ಲಿ ಅಧಿಕಾರಿಗಳ ನಿರ್ಧಾರ ಪ್ರಶ್ನಿಸಿ ವರ್ಷಗಟ್ಟಲೆ ವಿಚಾರಣೆಗಳು ನಡೆದವು. ಸುಪ್ರೀಂಕೋರ್ಟ್​ನಲ್ಲಿ ಎಲ್ಲವನ್ನೂ ವಜಾ ಮಾಡಲಾಯಿತು ಎಂದು ನೆನಪಿಸಿಕೊಂಡರು. ನಮ್ಮ ಬಳಿ ಇರುವ ಸಂಪನ್ಮೂಲವನ್ನೂ ನಾವು ಆಮದು ಮಾಡಿಕೊಳ್ಳಬೇಕಿದೆ ಎಂದು ವಿಷಾದಿಸಿದರು.

ನಾವು ಗಣಿಗಾರಿಕೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇವೆ. ಕ್ಯಾಪ್ಟಿವ್-ನಾನ್ ಕ್ಯಾಪ್ಟಿವ್ ಪದ್ಧತಿ ನಿಲ್ಲಿಸಿದ್ದೇವೆ. ಹಿಂದೆ ಒಬ್ಬರು ನಿರ್ದಿಷ್ಟ ಭೂಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಪಡೆದುಕೊಂಡರೆ ಹೆಚ್ಚುವರಿಯಾಗಿ ಸಂಪನ್ಮೂಲ ಹೆಕ್ಕಿದರೂ ಮಾರಲು ಅವಕಾಶ ಇರಲಿಲ್ಲ. ಅದರ ಪರಿಣಾಮವಾಗಿ ಖನಿಜವು ಭೂಗರ್ಭದಲ್ಲಿಯೇ ಇರುತ್ತಿತ್ತು. ನಮ್ಮಲ್ಲಿ ಸಂಪನ್ಮೂಲ ಇದ್ದರೂ ನಾವು ಆಮದು ಮಾಡಿಕೊಳ್ಳುವ ಸ್ಥಿತಿಯಲ್ಲಿಯೇ ಇದ್ದೆವು. ಮೌಲ್ಯವರ್ಧನೆಯಲ್ಲಿಯೂ ಹಿಂದೆ ಬಿದ್ದಿದ್ದೆವು. ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ಬೇಡಿಕೆ ಬಂದ ನಂತರ ರಾಜ್ಯಗಳಿಗೂ ಅನ್ವೇಷಣೆ ಮತ್ತು ಹರಾಜಿಗೆ ನಾವು ಅನುದಾನ ಒದಗಿಸುತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯಗಳ ಸಚಿವರಾಗಲಿ, ಅಧಿಕಾರಿಗಳಾಗಲಿ ರಿಸ್ಕ್ ಏಕೆ ತೆಗೆದುಕೊಳ್ಳಬೇಕು ಎನ್ನುವಂತೆ ಕೆಲಸ ಮಾಡಿದರೆ ಪ್ರಯೋಜನವಿಲ್ಲ. ಪ್ರಧಾನಿ ನರೇಂದ್ರ ಮೋದಿ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ಕನಸು ಬಿತ್ತಿದ್ದಾರೆ. 21ನೇ ಶತಮಾನ ಭಾರತದ್ದು ಎಂದು ಸುಮ್ಮನೆ ಹೇಳಿದರೆ ಆಗದು. ಕೆಲವೊಮ್ಮೆ ರಾಜಕೀಯ ನಿರ್ಧಾರಗಳಲ್ಲಿಯೂ ತೊಂದರೆಯಿದೆ. ನಾನು ಒಪ್ಪಿಕೊಳ್ತೀನಿ. ಆದರೆ ಕಾರ್ಯಾಂಗದಲ್ಲಿಯೂ ಸಮಸ್ಯೆಗಳಿವೆ. ನಾವಿಬ್ಬರೂ (ಅಧಿಕಾರಿ-ರಾಜಕಾರಿಣಿ) ಕುಳಿತು ಯೋಚಿಸಿ ಮಾತನಾಡಿಕೊಳ್ಳಬೇಕು. ನಾನು ಯಾರನ್ನೂ ಗುರಿಯಾಗಿಸಿ ಹೇಳ್ತಿಲ್ಲ. ಅಧಿಕಾರಿಶಾಹಿ ಮತ್ತು ನಾವು ನಮ್ಮ ಕೆಲಸದ ವಿಧಾನಗಳನ್ನು ಬದಲಿಸಿಕೊಳ್ಳಬೇಕು ಎಂದು ಸಲಹೆ ಮಾಡಬೇಕು.

ಹಿಂದೆ ಇದ್ದ ಪರಿಸ್ಥಿತಿ ಈಗ ಇಲ್ಲ. ಹಲವು ವಿಚಾರಗಳಲ್ಲಿ ಬದಲಾವಣೆಗಳು ಕಂಡು ಬಂದಿವೆ. ನಮ್ಮ ಕಾರ್ಯದರ್ಶಿಗಳು ರಿಸ್ಕ್ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. 100 ಬ್ಲಾಕ್​​ಗಳ ಹಸ್ತಾಂತರ ನಿಮ್ಮ ಕಣ್ಣಿಗೆ ದೊಡ್ಡದು ಎನಿಸುತ್ತಿದೆ. ಜಗತ್ತಿನಲ್ಲಿ ಏನಾಗುತ್ತಿದೆಯೋ ಅದನ್ನು ನಾವು ಗಮನಿಸಬೇಕಾಗುತ್ತದೆ. ಇದೀಗ ನಾವು ಗಣಿಗಳ ಹರಾಜು ಹಂತಕ್ಕೆ ಬಂದಿದ್ದೇವೆ. ಇದನ್ನು ಎಷ್ಟರಮಟ್ಟಿಗೆ ಸರಳಗೊಳಿಸಲು ಆಗುತ್ತೆ ಎಂಬ ಬಗ್ಗೆ ಯೋಚಿಸಿ, ಪೂರಕ ಸಲಹೆ ಕೊಡಿ. ನಾನು ನಿಮ್ಮ ಕೆಲಸ ಮಾಡಿಕೊಡ್ತೀನಿ ಎಂದು ಭರವಸೆ ನೀಡಿದರು.

ವಿವಿಧ ರಾಜ್ಯ ಸರ್ಕಾರಗಳ ಗಣಿ ಸಚಿವರಾದ ಹಾಲಪ್ಪ ಆಚಾರ್ (ಕರ್ನಾಟಕ), ಬಿಜೇಂದ್ರ ಸಿಂಗ್ (ಮಧ್ಯ ಪ್ರದೇಶ), ಜಾನಕಿ ರಾಮ್ (ಬಿಹಾರ), ಗಣಿ ಇಲಾಖೆ ಕಾರ್ಯದರ್ಶಿ ಅಲೋಕ್ ತಂಡನ್, ಹೆಚ್ಚುವರಿ ಕಾರ್ಯದರ್ಶಿ ಸಂಜಯ್ ಲೋಹಿಯಾ, ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ಮಹಾ ನಿರ್ದೇಶಕ ಆರ್.ಎಸ್.ಗಡ್ಕರ್ ಪಾಲ್ಗೊಂಡಿದ್ದರು.

ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಇನ್ನಷ್ಟು ಪುಷ್ಟಿ ಕೊಡುವ ನಿಟ್ಟಿನಲ್ಲಿ ಮಾಡಲಾದ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ ತಿದ್ದುಪಡಿ ಅನ್ವಯ, ಭಾರತದ ಭೂವೈಜ್ಞಾನಿಕ ಸಮೀಕ್ಷೆ, ಭೌಗೋಳಿಕವಾಗಿ ಸಾಮರ್ಥ್ಯ ಹೊಂದಿರುವ 100 ಖನಿಜ ಬ್ಲಾಕ್​ (ಮಿನರಲ್​ ಬ್ಲಾಕ್​)ಗಳನ್ನು ಹರಾಜಿಗೆ ಇಡಬಹುದು ಎಂದು ವರದಿ ನೀಡಿದೆ. ಈ 100 ಮಿನರಲ್​ ಬ್ಲಾಕ್ಸ್​ಗಳಿಗೆ ಸಂಬಂಧಿತ ವರದಿಗಳನ್ನು ರಾಜ್ಯ ಸರ್ಕಾರಗಳಿಗೆ ಹಸ್ತಾಂತರ ಮಾಡುವುದರಿಂದ, ದೇಶದಲ್ಲಿ ಖನಿಜ ಸಂಪನ್ಮೂಲಗಳ ನಿರಂತರ ಪೂರೈಕೆ ಆಗಲಿದೆ. ಅಷ್ಟೇ ಅಲ್ಲ, ಹೆಚ್ಚೆಚ್ಚು ಖನಿಜ ಬ್ಲಾಕ್​ಗಳನ್ನು ಹರಾಜಿಗೆ ತರುವುದರಿಂದ ರಾಜ್ಯ ಸರ್ಕಾರಗಳ ಆದಾಯವೂ ಹೆಚ್ಚಲಿದೆ ಎಂಬುದು ಸರ್ಕಾರದ ಮುಂದಾಲೋಚನೆಯಾಗಿದೆ. ಇಂದು ರಾಜ್ಯಗಳಿಗೆ ಹಸ್ತಾಂತರ ಮಾಡಲಾಗುತ್ತಿರುವ 100 ಜಿ4 ಖನಿಜ ಬ್ಲಾಕ್​​ಗಳಿಂದ ವಿವಿಧ ಕೈಗಾರಿಕೆಗಳಿಗೆ ಸಹಾಯಕವಾಗಲಿದೆ. ಅವುಗಳ ಹರಾಜು ಪ್ರಕ್ರಿಯೆಯಿಂದ ಉದ್ಯೋಗಾವಕಾಶ ಹೆಚ್ಚುತ್ತದೆ. ಆದಾಯವೂ ಅಧಿಕವಾಗುತ್ತದೆ ಎಂದು ಕೇಂದ್ರ ಹೇಳಿದೆ.

(Govt of India mulls many important changes in mining sector minister Pralhad Joshi Gives hint)

ಇದನ್ನೂ ಓದಿ: ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡ ಅಮಿತಾಭ್​ ಬಚ್ಚನ್

ಇದನ್ನೂ ಓದಿ: ಸಮಾನ ಕೆಲಸಕ್ಕೆ ಸಮಾನ ವೇತನ ತತ್ವವನ್ನು ಹುದ್ದೆಯೊಂದನ್ನೇ ಅವಲಂಬಿಸಿ ಪರಿಗಣಿಸಲು ಆಗುವುದಿಲ್ಲ: ಸುಪ್ರೀಂಕೋರ್ಟ್​

Published On - 9:12 pm, Wed, 8 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ