ನನ್ನನ್ನು ತಮಿಳರು ಕೆಣಕಬಹುದು: ವಸಿಷ್ಠ ಸಿಂಹ
Kamal Haasan: ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ನೀಡಿರುವ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಕಲಾವಿದರೂ ಸಹ ಇದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟ ವಸಿಷ್ಠ ಸಿಂಹ, ನನ್ನ ತಮಿಳು ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಆಗ ಅವರು ನನ್ನನ್ನು ಕೆಣಕಬಹುದು ಎಂದಿದ್ದಾರೆ.
ಕಮಲ್ ಹಾಸನ್ (Kamal Haasan) ಅವರ ಹೇಳಿಕೆಯಿಂದ ಕಲಾವಿದರ ಮೇಲಾಗಬಹುದಾದ ಪರಿಣಾಮದ ಬಗ್ಗೆ ಮಾತನಾಡಿದ ನಟ ವಸಿಷ್ಠ ಸಿಂಹ, ‘ಶೀಘ್ರದಲ್ಲಿಯೇ ನನ್ನ ತಮಿಳು ಸಿನಿಮಾ ಬಿಡುಗಡೆ ಆಗುವುದಕ್ಕಿದೆ. ಆಗ ಅಲ್ಲಿನವರು ನನ್ನನ್ನು ಕೆಣಕಬಹುದು. ನನಗೆ ಮಾತ್ರ ಅಲ್ಲ, ಹಲವು ಕಲಾವಿದರು ಈ ಸಮಸ್ಯೆ ಎದುರಿಸಬೇಕಾಗುತ್ತದೆ. ಒಬ್ಬರ ವಿವೇಚನಾರಹಿತ ಹೇಳಿಕೆಯಿಂದಾಗಿ ಹಲವು ಕಲಾವಿದರಿಗೆ ಸಮಸ್ಯೆ ಉಂಟಾಗುತ್ತದೆ. ದೊಡ್ಡವರಾದಷ್ಟು ತಗ್ಗಿ ಬಗ್ಗಿ ನಡೆಯಬೇಕಿತ್ತು’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

