AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸರು ನೀಡುತ್ತಿದ್ದ ಸಮನ್ಸ್ ಖಾಸಗೀಕರಣಕ್ಕೆ ಚಿಂತನೆ: ಆರಗ ಜ್ಞಾನೇಂದ್ರ

Araga Jnanendra: ಪೋಸ್ಟ್ ಆಫೀಸ್​ಗಳಿಗೆ ಹಣಕೊಟ್ಟು ಮಾಡಿಸಬೇಕು ಎಂದಿದೆ. ಪೊಲೀಸರಿಗೆ ಎಲ್ಲಾ ರೀತಿಯ ಟ್ರೇನಿಂಗ್ ಕೊಟ್ಟಿರುತ್ತೇವೆ. ಅವರನ್ನ ಪೋಸ್ಟ್​​ಮ್ಯಾನ್ ಕೆಲಸಕ್ಕೆ ಹಚ್ಚೋದು ಸರಿಯಲ್ಲ ಎಂದು ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಪೊಲೀಸರು ನೀಡುತ್ತಿದ್ದ ಸಮನ್ಸ್ ಖಾಸಗೀಕರಣಕ್ಕೆ ಚಿಂತನೆ: ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ (ಸಂಗ್ರಹ ಚಿತ್ರ)
TV9 Web
| Edited By: |

Updated on: Sep 08, 2021 | 6:00 PM

Share

ಬೆಳಗಾವಿ: ಪೊಲೀಸರು ನೀಡುತ್ತಿದ್ದ ಸಮನ್ಸ್ ಖಾಸಗೀಕರಣಕ್ಕೆ ಚಿಂತನೆ ನಡೆಸಲಾಗಿರುವ ಬಗ್ಗೆ ಸುಳಿವು ಲಭ್ಯವಾಗಿದೆ. ಈ ಬಗ್ಗೆ, ಬೆಳಗಾವಿ ಜಿಲ್ಲೆ ಕಿತ್ತೂರಲ್ಲಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಬೇರೆ ಏಜೆನ್ಸಿ ಮೂಲಕ ಸಮನ್ಸ್ ಕೊಡಿಸುವ ಚಿಂತನೆ ಇದೆ. ಇದರಿಂದ ಇಲಾಖೆಯಲ್ಲಿ ಮ್ಯಾನ್ ಪವರ್ ಉಳಿಯುತ್ತದೆ. ಇಲ್ಲದಿದ್ರೆ ಪೋಸ್ಟ್ ಆಫೀಸ್ ಮೂಲಕ ಮಾಡುವ ಚಿಂತನೆ ಇದೆ. ಪೋಸ್ಟ್ ಆಫೀಸ್​ಗಳಿಗೆ ಹಣಕೊಟ್ಟು ಮಾಡಿಸಬೇಕು ಎಂದಿದೆ. ಪೊಲೀಸರಿಗೆ ಎಲ್ಲಾ ರೀತಿಯ ಟ್ರೇನಿಂಗ್ ಕೊಟ್ಟಿರುತ್ತೇವೆ. ಅವರನ್ನ ಪೋಸ್ಟ್​​ಮ್ಯಾನ್ ಕೆಲಸಕ್ಕೆ ಹಚ್ಚೋದು ಸರಿಯಲ್ಲ ಎಂದು ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ನಟಿ, ಸ್ಟಾರ್ ನಿರೂಪಕಿ​ ಅನುಶ್ರೀ ಡ್ರಗ್ಸ್​ ಕೇಸ್​ ವಿಚಾರವಾಗಿ ಆರಗ ಜ್ಞಾನೇಂದ್ರ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆ ಬಗ್ಗೆ ಈಗಾಗಲೇ ವಿಚಾರಣೆ ಆಗಿದೆ, ಚಾರ್ಜ್​​ಶೀಟ್ ಸಹ​ ಸಲ್ಲಿಕೆ ಆಗಿದೆ. ಮತ್ತೇನಾದರೂ ಇದ್ದರೆ ಪುನಃ ಕೇಸ್​​ನ ವಿಚಾರಣೆ ಆಗುತ್ತೆ. ಕೋರ್ಟ್ ಹಾಗೂ ಪೊಲೀಸರು ಹೆಸರು ಪ್ರಸ್ತಾಪಿಸಿಲ್ಲ. ಮಧ್ಯದಲ್ಲಿ ಯಾರೋ ಹೆಸರು ಪ್ರಸ್ತಾಪ ಮಾಡುತ್ತಿದ್ದಾರೆ. ಅದನ್ನು ತೆಗೆದುಕೊಂಡು ನಾವೇನು ಮಾಡಬೇಕು? ಆ ಬಗ್ಗೆ ನಾನು ಪ್ರತಿಕ್ರಿಯಿಸಲು ಆಗುತ್ತಾ ಎಂದು ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.

ಕರಾವಳಿ ಪ್ರದೇಶದಲ್ಲಿ ತುಂಬಾ ವಿಚಿತ್ರ ಶಕ್ತಿಗಳು ತಲೆ ಎತ್ತುವ ಸ್ಥಿತಿಯಿದೆ. ಗೋವಾದಿಂದ ಕೇರಳದ ಗಡಿಯವರೆಗೆ ಕಟ್ಟೆಚ್ಚರ ವಹಿಸಬೇಕಿದೆ. ಮೀನುಗಾರರ ವೇಷದಲ್ಲಿ ಬಂದು ಮುಂಬೈನಲ್ಲಿ ನಡೆಸಿದ ಕೃತ್ಯ ಎಲ್ಲರಿಗೂ ಗೊತ್ತಿದೆ. ಹೀಗಾಗಿ ಕರಾವಳಿ ಕಾವಲು ಪಡೆ ಇನ್ನಷ್ಡು ಬಲಗೊಳ್ಳಬೇಕು. ಕರಾವಳಿ ಕಾವಲು ಪಡೆ ಸ್ಪೀಡ್ ಬೋಟ್​ಗಳನ್ನು ಇನ್ನಷ್ಟು ಒದಗಿಸಲು ಸಿದ್ದರಾಗಿದ್ದೇವೆ. ದೇಶ ವಿರೋಧಿ ಕೃತ್ಯ, ದಂದೆ ನಡೆಸುವವರ ಮೇಲೆ ಕಣ್ಗಾವಲು ಇಡಲು ಹೇಳಿದ್ದೇವೆ. ಪಟ್ಟಣ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥಿತ ಭಂಗ ಮಾಡುವ ರೌಡಿ ಪಡೆಗಳನ್ನು ಮೆಟ್ಟಿ ನಿಲ್ಲಬೇಕು ಎಂದು ತಿಳಿಸಿದ್ದೇನೆ. ಜನರ ನೆಮ್ಮದಿ ಬದುಕಿಗೆ ತೊಂದರೆ ಉಂಟುಮಾಡುವ ದುಷ್ಕರ್ಮಿಗಳನ್ನು ಮಟ್ಟ ಹಾಕಲು ಸೂಚಿಸಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಈ ಮೊದಲು ತಿಳಿಸಿದ್ದರು.

ಅನೇಕ ಮಾನದಂಡಗಳನ್ನು ಆಧರಿಸಿ ರೌಡಿ ಶೀಟರ್ ಪಟ್ಟಿಯನ್ನು ಪರಾಮರ್ಶೆ ಮಾಡುತ್ತೇವೆ. ರಾಜ್ಯದಾದ್ಯಂತ ಸಣ್ಣಪುಟ್ಟ ಚಳುವಳಿಗಾರರ ಮೇಲೆ ರೌಡಿಶಿಟ್ ಹಣೆ ಪಟ್ಟಿ ಕಟ್ಟಿದ್ದಾರೆ. ಇದರಲ್ಲಿ ಯಾವುದೇ ಬೇರೆ ಉದ್ದೇಶವಿಲ್ಲ. ಜತೆಗೆ ರಾಜಕೀಯ ಕಾರಣಕ್ಕೂ ನಾವು ಹೀಗೆ ಮಾಡಿಲ್ಲ. ರೌಡಿ ಶೀಟರ್ ಮಾನದಂಡದ ಆಧಾರದ ಮೇಲೆ ಪಟ್ಟಿಯನ್ನು ಪರಾಮರ್ಶನೆ ಮಾಡುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ಆರಗ ಜ್ಞಾನೇಂದ್ರ, ಸಿಟಿ ರವಿ ಡ್ರಗ್ಸ್ ತಗೊಂಡಂತೆ ಮಾತಾಡ್ತಾರೆ; ಅವರ ಕೂದಲನ್ನು ಪರೀಕ್ಷೆಗೆ ಕಳಿಸಬೇಕು: ಶಿವರಾಜ್ ತಂಗಡಗಿ

ಇದನ್ನೂ ಓದಿ: ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಆದಾಯ ಮಿತಿಗೆ ತಿದ್ದುಪಡಿ ತರಲು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ

ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್