ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಕಳೆದ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆ ಬಳಿಕ, ಇಂದು (ಆಗಸ್ಟ್ 4) ಹೊಸ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಕರ್ನಾಟಕದ ಹೊಸ ಸಚಿವರಾಗಿ 29 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮಧ್ಯೆ ನೂತನ ಸಿಎಂಗೆ ಚುನಾವಣೆ ಸವಾಲು ಎದುರಾಗಲಿದೆ. ಬಾಕಿಯಿರುವ ಪಾಲಿಕೆ, ನಗರಸಭೆಗಳಿಗೆ ಚುನಾವಣೆ ಘೋಷಿಸಿ ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಚುನಾವಣಾ ವೇಳಾಪಟ್ಟಿ ಪ್ರಕಟಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ತರೀಕೆರೆ ಮುಂತಾದೆಡೆ ಅವಧಿಯೊಳಗೆ ಚುನಾವಣೆ ನಡೆದಿಲ್ಲ ಎಂದ ಹೈಕೋರ್ಟ್ ಚುನಾವಣೆ ಮುಂದೂಡುವ ಮನವಿ ಒಪ್ಪಿಲ್ಲ. ರಾಜ್ಯ ಸರ್ಕಾರದ ಮನವಿಗೆ ಹೈಕೋರ್ಟ್ ಒಪ್ಪಿಗೆ ಸೂಚಿಸಿಲ್ಲ.
ಡಿಸೆಂಬರ್ ಅಂತ್ಯದವರೆಗೂ ಚುನಾವಣೆ ನಡೆಸದಂತೆ ಕರ್ನಾಟಕ ಸರ್ಕಾರ ಮನವಿ ಮಾಡಿತ್ತು. ಕೊವಿಡ್ ಕಾರಣಕ್ಕೆ ಚುನಾವಣೆ ಮುಂದೂಡಲು ಮನವಿ ಮಾಡಿತ್ತು. ಆದರೆ, ರಾಜ್ಯ ಸರ್ಕಾರದ ಮನವಿಯನ್ನ ಆಯೋಗ ಪರಿಗಣಿಸಬೇಕಿಲ್ಲ ಎಂದು ಹೇಳಿದೆ. ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಪಶ್ಚಿಮ ಬಂಗಾಳ ರಾಜ್ಯದಲ್ಲಿ ಚುನಾವಣೆ ನಡೆದಿದೆ. ಕರ್ನಾಟಕದಲ್ಲಿ ಮಾತ್ರ ಚುನಾವಣೆ ಮುಂದೂಡಲಾಗುತ್ತಿದೆ. ಸಂವಿಧಾನದ ಆಶಯ ಪಾಲನೆಯಾಗುತ್ತಿಲ್ಲ ಎಂದು ಹೈಕೋರ್ಟ್ ಹೇಳಿದೆ. ಎಲ್ಲಾ ಧಾರ್ಮಿಕ ಕೇಂದ್ರಗಳನ್ನೂ ತೆರೆಯಲಾಗಿದೆ. ಜನ ಕ್ಯೂನಲ್ಲಿ ನಿಂತು ದೇವಾಲಯಕ್ಕೆ ಹೋಗಬಹುದು. ಹಾಗೆಯೇ ಚುನಾವಣೆ ಮಾಡಲು ಸಾಧ್ಯವಿಲ್ಲವೇ ಎಂದಿರುವ ಹೈಕೋರ್ಟ್ ಶೀಘ್ರವೇ ಚುನಾವಣಾ ವೇಳಾಪಟ್ಟಿ ನಿರ್ಧರಿಸಲು ಸೂಚನೆ ಕೊಟ್ಟಿದೆ.
ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಅಸ್ತಿತ್ವಕ್ಕೆ; ಸಚಿವರ ಜಾತಿವಾರು, ಪ್ರದೇಶವಾರು ಲೆಕ್ಕಾಚಾರ, ಸಮಗ್ರ ವರದಿ ಹೀಗಿದೆ
Karnataka Cabinet: ಬಸವರಾಜ ಬೊಮ್ಮಾಯಿ ಟೀಂನ ನೂತನ ಸಚಿವರಲ್ಲಿ ಯಾರಿಗೆ ಯಾವ ಖಾತೆ? ಸಂಭಾವ್ಯ ಪಟ್ಟಿ ಇಲ್ಲಿದೆ
(Karnataka High Court on Municipality Elections to Karnataka Govt Election Commission)