ಬೆಂಗಳೂರು: ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ(MP Kumaraswamy) ಪತ್ನಿ ಸವಿತಾ ವಿರುದ್ಧ ಪಡೆದಿದ್ದ ವಿಚ್ಛೇದನಕ್ಕೆ (divorce) ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮೈಸೂರಿನ ಕೋರ್ಟ್(Mysuru Court) ಎಂ.ಪಿ.ಕುಮಾರಸ್ವಾಮಿ ದಂಪತಿಗೆ ವಿಚ್ಛೇದನ ನೀಡಿತ್ತು. ಆದ್ರೆ ಇದನ್ನು ಪ್ರಶ್ನಿಸಿ ಪತ್ನಿ ಸವಿತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕೋರ್ಟ್, ವಿಚ್ಛೇದನ ತಡೆಯಾಜ್ಞೆ ನೀಡಿ ಇಂದು(ಜನವರಿ 06) ಆದೇಶ ಹೊರಡಿಸಿದೆ. ಇದರಿಂದ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಹೈಕೋರ್ಟ್ ಶಾಕ್ ಕೊಟ್ಟಿದೆ.
ಪತಿಯಿಂದ ವಿಚ್ಛೇದನ ಪಡೆಯುವ ಇಚ್ಛೆ ಪತ್ನಿಗೆ ಇಲ್ಲ. ಶಾಸಕ ಎಂ.ಪಿ.ಕುಮಾರಸ್ವಾಮಿ 2ನೇ ಮದುವೆಯಾಗುವ ಸಾಧ್ಯತೆ ಇದೆ. ಹೀಗಾಗಿ ವಿಚ್ಛೇದನ ಆದೇಶಕ್ಕೆ ತಡೆ ನೀಡುವಂತೆ ಸವಿತಾ ಪರ ವಕೀಲ ಕೆ.ಎ.ಚಂದ್ರಶೇಖರ್ ಅವರು ಹೈಕೋರ್ಟ್ನಲ್ಲಿ ವಾದ ಮಂಡಿಸಿದರು. ಇದನ್ನು ಆಲಿಸಿದ ಹೈಕೋರ್ಟ್, ಮೈಸೂರು ಕೋರ್ಟ್‌ನ ವಿಚ್ಛೇದನ ಆದೇಶಕ್ಕೆ ತಡೆ ನೀಡಿದೆ.
ಅಕ್ರಮ ಸಂಬಂಧ ಹೊಂದಿದ್ದನ್ನು ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ 2016ರಲ್ಲಿ ಸಾರ್ವಜನಿಕರ ಎದುರೇ ಕುಮಾರಸ್ವಾಮಿಯವರು ಪತ್ನಿಗೆ ಹೊಡೆದಿದ್ದರು. ನಂತರ 2017ರಲ್ಲಿ ಪತ್ನಿ ಸವಿತಾ ಮೈಸೂರಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚ್ಛೇದನ ಹಾಗೂ ಜೀವನಾಂಶ ಕೊಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಮನೆ ನಿರ್ಮಾಣಕ್ಕೆ ಅಕ್ರಮ ಮರಳು ಸಾಗಾಟ; ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ
ಗಂಡನಿಗೆ (ಎಂ.ಪಿ.ಕುಮಾರಸ್ವಾಮಿ) ಇನ್ನೊಂದು ಹೆಣ್ಣಿನೊಂದಿಗೆ ಅಕ್ರಮ ಸಂಬಂಧ ಇದ್ದು, ಅವರ ಹೆಂಡತಿಯಾದ ನನಗೆ ಕೊಡಬೇಕಾದ ಸ್ಥಾನಮಾನಗಳನ್ನು ಕೊಡುತ್ತಿಲ್ಲ. ಇದ್ದರಿಂದ ನಾನು ಬೇಸತ್ತಿದ್ದು, ನನ್ನ ಗಂಡನಿಂದ ವಿವಾಹ ವಿಚ್ಛೇದನ ಕೊಡಿಸಿ ಜೀವನಾಂಶಕ್ಕೆ ಪ್ರತಿ ತಿಂಗಳೂ 1.5 ಲಕ್ಷ ಹಣ ಹಾಗೂ 2.50 ಕೋಟಿ ರೂ ಆಸ್ತಿಯನ್ನು ಕೊಡಿಸಬೇಕು. ಜೊತೆಗೆ ನ್ಯಾಯಾಲಯದ ವೆಚ್ಚಕ್ಕಾಗಿ 5 ಲಕ್ಷ ರೂ ಕೊಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ