AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆ ದಾಳಿಗೆ ಮಹಿಳೆ ಬಲಿ: ಸಾಂತ್ವನ ಹೇಳಲು ಬಂದ ಬಿಜೆಪಿ ಶಾಸಕನ ಮೇಲೆ ಹಲ್ಲೆ, ಪೊಲೀಸರ ವೈಫಲ್ಯ ಎಂದ ಕುಮಾರಸ್ವಾಮಿ

ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲೆ ಪ್ರತಿಭಟನಾ ನಿರತರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಆನೆ ದಾಳಿಗೆ ಮಹಿಳೆ ಬಲಿ:  ಸಾಂತ್ವನ ಹೇಳಲು ಬಂದ ಬಿಜೆಪಿ ಶಾಸಕನ ಮೇಲೆ ಹಲ್ಲೆ, ಪೊಲೀಸರ ವೈಫಲ್ಯ ಎಂದ ಕುಮಾರಸ್ವಾಮಿ
ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲೆ ಹಲ್ಲೆ
TV9 Web
| Edited By: |

Updated on:Nov 20, 2022 | 11:02 PM

Share

ಚಿಕ್ಕಮಗಳೂರು: ಮೂಡಿಗೆರೆ ತಾಲೂಕು ಕುಂದೂರು ಸಮೀಪದ ಹುಲ್ಲೆಮನೆ ಗ್ರಾಮದ ಶೋಭಾ (45) ಕಾಡಾನೆ ದಾಳಿಯಿಂದ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದು, ಸ್ಥಳಕ್ಕೆ ತಡವಾಗಿ ಬಂದ ಶಾಸಕ ಎಂ.ಪಿ.ಕುಮಾರಸ್ವಾಮಿ (BJP MLA MP Kumaraswamy) ಅವರನ್ನು ಅಟ್ಟಾಡಿಸಿ ಹಲ್ಲೆ ಮಾಡಿರುವುದಲ್ಲದೇ ಬಟ್ಟೆಯನ್ನು ಹರಿದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಭಾನುವಾರ ಬೆಳಗ್ಗೆ ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದಾಗಿ ಶೋಭಾ ಮೃತಪಟ್ಟಿದ್ದರು. ಘಟನೆ ಬೆಳಗ್ಗೆ ನಡೆದಿದ್ದರೂ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಸಂಜೆ ಗ್ರಾಮಕ್ಕೆ ಬಂದಿದ್ದಾರೆ.  ಈ ವೇಳೆ ಗ್ರಾಮಸ್ಥರು ಆಕ್ರೋಶಗೊಂಡು ಶಾಸಕ ಕುಮಾರಸ್ವಾಮಿ ಅವರಿಗೆ ಘೇರಾವ್ ಹಾಕಿದಲ್ಲದೆ. ಗ್ರಾಮದ ಮುಖ್ಯರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಬಂದಿದ್ದಾರೆ. ತೀವ್ರ ಅಕ್ರೋಶಗೊಂಡಿದ್ದ ಕೆಲ ಗ್ರಾಮಸ್ಥರು ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೆ. ಶಾಸಕರನ್ನು ಹಿಡಿದು ಎಳೆದಾಡಿದ್ದಾರೆ.

ಈ ವೇಳೆ ಉದ್ರಿಕ್ತಗೊಂಡ ಗ್ರಾಮಸ್ಥರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದು, ಪರಿಸ್ಥಿತಿ ಕೈ ಮೀರಿದ ವೇಳೆ ಲಾಠಿ ಲಾಠಿ ಚಾರ್ಜ್ ಮಾಡಿ ಶಾಸಕರನ್ನು ಕರೆದುಕೊಂಡು ಬಂದ ಕಾರಿನಲ್ಲಿ ಕೂಡಿಸಿದ್ದಾರೆ. ಈ ಸಂದರ್ಭದಲ್ಲಿ ಎಂ.ಪಿ. ಕುಮಾರಸ್ವಾಮಿ ಅವರ ಶರ್ಟ್ ಹರಿದಿಲ್ಲ. ಆದ್ರೆ, ಕುಮಾರಸ್ವಾಮಿ ಅವರು ಈ ಘಟನೆ ಬಗ್ಗೆ ವಿಡಿಯೋ ಹೇಳಿಕೆಯೊಂದನ್ನು ನೀಡಿದ್ದು, ಆ ವಿಡಿಯೋದಲ್ಲಿ ಶಾಸಕರ ಶರ್ಟ್ ಹರಿದಿದೆ. ಅಲ್ಲದೇ ಇದೊಂದು ವ್ಯವಸ್ಥಿತ ಪಿತೂರಿ ಎಂದು ಸ್ವತಃ ಕುಮಾರಸ್ವಾಮಿ ಅವರೇ ವಿಡಿಯೋನಲ್ಲಿ ಆರೋಪಸಿದ್ದಾರೆ.

,ಆನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಮೃತದೇಹವನ್ನು ವೀಕ್ಷಿಸಲು ತೆರಳಿದ ವೇಳೆ ನನ್ನ ಮೇಲೆ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಪ್ರತಿಭಟನಾ ನಿರತರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಇದು ವ್ಯವಸ್ಥಿತ ಪಿತೂರಿತಯಾಗಿದೆ. ನಮ್ಮದೇ ಸರ್ಕಾರದ ಪೊಲೀಸ್ ಇಲಾಖೆ ನನಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂದು ವಿಡಿಯೋನಲ್ಲಿ ದೂರಿದ್ದಾರೆ. ಆದ್ರೆ, ಶಾಸಕರನ್ನು ಪೊಲೀಸರು ಕರೆದುಕೊಂಡು ಹೋಗುವಾಗ ಯಾವುದೇ ಬಟ್ಟೆ ಹರಿದಿಲ್ಲ. ಅದನ್ನು ಈ ಕೆಳಗಿರುವ ವಿಡಿಯೋನಲ್ಲಿ ನೋಡಬಹುದು. ಇತ್ತ ಕುಮಾರಸ್ವಾಮಿ ಅವರು ಹಲ್ಲೆ ಮಾಡಿ ಬಟ್ಟೆ ಹರಿದಿದ್ದಾರೆ ಎಂದು ಆರೋಪಿಸಿದ್ದು, ಹಲವು ಅನುಮಾಗಳು ವ್ಯಕ್ತವಾಗಿವೆ.

ನಿಜವಾಗಿಯೂ ಜನರು ಶಾಸಕರ ಮೇಲೆ ಹಲ್ಲೆ ನಡೆಸಿದ್ರಾ.?ಶರ್ಟ್ ಹರಿದು ಹಾಕಿ ನಡು ರೋಡಲ್ಲಿ ನಿಲ್ಲಿಸಿದ್ರಾ.? ಇಲ್ಲಾ ಅನುಕಂಪ ಗಿಟ್ಟಿಸಲು ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರಾ..? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:58 pm, Sun, 20 November 22

Follow Us
TV9 Web
TV9 Web

TV9 Kannada

Read More
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ