ಬೆಳಗಾವಿ : ಕೊರೊನಾ ಎರಡನೇ ಅಲೆ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ನೋಡಿಕೊಳ್ಳಲು ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಈ ನಿಯಮಗಳಲ್ಲಿ ಹೋಟೆಲ್ ಮೇಲಿನ ಕಠಿಣ ಕ್ರಮ ಸದ್ಯ ಮಾಲೀಕರಲ್ಲಿ ಬೇಸರ ಉಂಟು ಮಾಡಿದೆ. ಸರ್ಕಾರದ ನಿಯಮದಂತೆ ಹೋಟೆಲ್‌ಗಳಲ್ಲಿ ಕೇವಲ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ.
ಸದಾ ಗ್ರಾಹಕರಿಂದ ತುಂಬಿರುತ್ತಿದ್ದ ಹೋಟೆಲ್ ಈಗ ಖಾಲಿ ಖಾಲಿಯಾಗಿದೆ. ಹೋಟೆಲ್‌ನಲ್ಲಿ 120 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಮೊದಲೇ ಹೋಟೆಲ್ ಉದ್ಯಮ ಸಂಕಷ್ಟದಲ್ಲಿದೆ. ಪಾರ್ಸೆಲ್ ಸೇವೆ ಮಾತ್ರ ಇರುವುದರಿಂದ ಗ್ರಾಹಕರೂ ಬರುತ್ತಿಲ್ಲ. ಹೋಟೆಲ್‌ಗಳಲ್ಲಿ ಶೇಕಡ 50ರಷ್ಟು ಗ್ರಾಹಕರಿಗಾದರೂ ಸೇವೆ ಕಲ್ಪಿಸಲು ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೋಟೆಲ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೂರದ ಊರಿಂದ ಬರುವ ಪ್ರಯಾಣಿಕರು ಪಾರ್ಸೆಲ್ ತಗೆದುಕೊಂಡು ರಸ್ತೆ ಮೇಲೆ ನಿಂತು ತಿನ್ನುವ ಪರಿಸ್ಥಿತಿ ಇದೆ. ಕೊವಿಡ್ ನಿಯಮಾವಳಿ ಪ್ರಕಾರ ಸಾಮಾಜಿಕ ಅಂತರ ಕಾಯ್ದುಕೊಂಡು ಸೇವೆ ನೀಡಲು ಸಿದ್ಧರಿದ್ದೇವೆ. ಹೀಗಾಗಿ ಸರ್ಕಾರ ತನ್ನ ನಿರ್ಧಾರ ಮರುಪರಿಶೀಲಿಸಲಿ. ಶೇಕಡ 50ರಷ್ಟು ಗ್ರಾಹಕರಿಗಾದರೂ ಸೇವೆ ನೀಡಲು ಅವಕಾಶ ಕಲ್ಪಿಸಲಿ ಎಂದು ಹೋಟೆಲ್ ಮಾಲೀಕರು ಮನವಿ ಮಾಡಿದ್ದಾರೆ.
ಬೆಂಗಳೂರಿನ ಹೋಟೆಲ್‌ಗಳಲ್ಲಿ ಹೊಸ ನಿಯಮ ಪಾಲನೆ
ಬೆಂಗಳೂರು: ನಗರದ ಹೊಟೇಲ್ನಲ್ಲಿ ಗ್ರಾಹಕರಿಗೆ ಪಾರ್ಸೆಲ್ಗೆ ಮಾತ್ರ ಅವಕಾಶ ಮಾಡಿಕೊಡುತ್ತಿರುವ ಹೋಟೆಲ್ ಮಾಲಿಕರು ರಾಜ್ಯ ಸರ್ಕಾರದ ನಿಯಮವನ್ನು ಚಾಚುತಪ್ಪದೆ ಅನುಸರಿಸುತ್ತಿದ್ದಾರೆ. ಆದರೆ ಕೇವಲ ಪಾರ್ಸೆಲ್ಗೆ ಅವಕಾಶ ಇರುವ ಹಿನ್ನೆಲೆಯಲ್ಲಿ ಗ್ರಾಹಕರು ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ನಾನು ಅನಿವಾರ್ಯವಾಗಿ ಹೊಟೇಲ್ ಓಪನ್ ಮಾಡಬೇಕಾಗಿದೆ. ಪಾರ್ಸೆಲ್ನಿಂದ ಗ್ರಾಹಕರು ಹೆಚ್ಚಾಗಿ ಬರುತ್ತಿಲ್ಲ. ಇದರಿಂದ ಸಾಕಷ್ಟು ನಷ್ಟ ಆಗುತ್ತದೆ. ಕೇವಲ ಶೇಕಡಾ 20 ರಿಂದ 30 ರಷ್ಟು ಮಾತ್ರ ವ್ಯಾಪಾರ ಇದೆ. ಈ ವ್ಯಾಪಾರದಿಂದ ಹೇಗೆ ಬಾಡಿಗೆ ಕಟ್ಟುವುದು, ಸಂಬಳ ಹೇಗೆ ಕೊಡುವುದು ಎಂದು ಟಿವಿ9 ಡಿಜಿಟಲ್ನಲ್ಲಿ ಬಳಿ ಹೊಟೇಲ್ ಮಾಲೀಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಹೋಟೆಲ್ಗಳಿಗೆ ಪಾರ್ಸೆಲ್ ತೆಗೆದುಕೊಂಡುಹೋಗಲು ಬಾರದ ಗ್ರಾಹಕರು
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾದಿಂದಾಗಿ ಹೋಟೆಲ್ ಮಾಲೀಕರು ತತ್ತರಿಸಿದ್ದಾರೆ. ಒಂದು ಟೇಬಲ್‌ನಲ್ಲಿ ಇಬ್ಬರಿಗೆ ಮಾತ್ರ ಸೇವೆ ನೀಡುತ್ತಿದ್ದೆವು. ಸ್ಯಾನಿಟೈಸರ್ ಥರ್ಮಾಮೀಟರ್ ವ್ಯವಸ್ಥೆ ಮಾಡಲಾಗಿತ್ತು. ಆದರೂ ಈ ರೀತಿ ಟಫ್ ರೂಲ್ಸ್ ನಮಗೆ ಸಮಸ್ಯೆಯಾಗುತ್ತದೆ. ಮೊದಲಿನಂತೆಯೇ ಶೇಕಡಾ 50 ರಷ್ಟು ಗ್ರಾಹಕರು ಇರುವಂತೆ ಅವಕಾಶ ಕೊಡಿ ಎಂದು ಮಾಲೀಕರು ಮನವಿ ಮಾಡಿಕೊಂಡಿದ್ದಾರೆ.
ಗದಗದ ಹೋಟೆಲ್ನಲ್ಲೂ ಕಠಿಣ ಕ್ರಮ
ಗದಗ: ನಗರದಲ್ಲಿ ಪಾರ್ಸಲ್ಗೆ ಗ್ರಾಹಕರು ಬಾರದೇ ಮಾಲೀಕರು ಕಂಗಾಲಾಗಿದ್ದು, ಬೆಳಗ್ಗೆಯಿಂದಲೇ ಹೋಟೆಲ್ ಆರಂಭವಾದರೂ ಜನರು ಮಾತ್ರ ಬಂದಿಲ್ಲ. ಶೇಕಡಾ 50 ರಷ್ಟು ಅವಕಾಶ ನೀಡುವಂತೆ ಹೋಟೆಲ್ ಮಾಲೀಕರು ಒತ್ತಾಯಿಸಿದ್ದಾರೆ.
ಇದನ್ನು ಓದಿ:
ಕೊರೊನಾ ನಿಯಮ ಉಲ್ಲಂಘನೆ.. ಬೆಂಗಳೂರಿನ JW ಮ್ಯಾರಿಯೆಟ್ ಸೇರಿ 3 ಹೋಟೆಲ್ಗಳ ವಿರುದ್ಧ FIR
ಕೊರೊನಾ ಎಫೆಕ್ಟ್: ಗೊರವನಹಳ್ಳಿ ಲಕ್ಮೀ ದೇವಾಲಯ ಮತ್ತು ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯಕ್ಕೆ ಬೀಗ
(Karnataka Hotel owners association angry on Karnataka Government as strict guidelines announced to curb Covid 19)