ಕರ್ನಾಟಕ ಸೂಕ್ತ ಆಯ್ಕೆ; ಟೆಸ್ಲಾ ಘಟಕ ಸ್ಥಾಪಿಸುವಂತೆ ಎಲಾನ್​ ಮಸ್ಕ್​ಗೆ ಎಂಬಿ ಪಾಟೀಲ್ ಮನವಿ

|

Updated on: Jun 23, 2023 | 3:31 PM

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರು ರಾಜ್ಯದಲ್ಲಿ ಟೆಸ್ಲಾ ಮತ್ತು ಸ್ಟಾರ್‌ಲಿಂಕ್ ಘಟಕಗಳನ್ನು ಸ್ಥಾಪಿಸುವಂತೆ ಉದ್ಯಮಿ ಎಲಾನ್ ಮಸ್ಕ್ ಅವರಿಗೆ ಮನವಿ ಮಾಡಿದ್ದಾರೆ.

ಕರ್ನಾಟಕ ಸೂಕ್ತ ಆಯ್ಕೆ; ಟೆಸ್ಲಾ ಘಟಕ ಸ್ಥಾಪಿಸುವಂತೆ ಎಲಾನ್​ ಮಸ್ಕ್​ಗೆ ಎಂಬಿ ಪಾಟೀಲ್ ಮನವಿ
ಎಂಬಿ ಪಾಟೀಲ್
Follow us on

ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಎಂಬಿ ಪಾಟೀಲ್ (MB Patil) ಅವರು ರಾಜ್ಯದಲ್ಲಿ ಟೆಸ್ಲಾ (Tesla) ಮತ್ತು ಸ್ಟಾರ್‌ಲಿಂಕ್ ಘಟಕಗಳನ್ನು ಸ್ಥಾಪಿಸುವಂತೆ ಉದ್ಯಮಿ ಎಲಾನ್ ಮಸ್ಕ್ (Elon Musk) ಅವರಿಗೆ ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿ ಎಲಾನ್ ಮಸ್ಕ್ ಅವರೊಂದಿಗೆ ಸಭೆ ನಡೆಸಿದ ಎರಡು ದಿನಗಳ ನಂತರ ಪಾಟೀಲ್ ಅವರು ಈ ಟ್ವೀಟ್ ಮಾಡಿದ್ದಾರೆ.

ಮೋದಿ ಜತೆಗಿನ ಮಾತುಕತೆಯ ನಂತರ, ಮಸ್ಕ್ ಅವರು ಭಾರತದಲ್ಲಿ ಸ್ಪೇಸ್‌ಎಕ್ಸ್‌ನ ಇಂಟರ್ನೆಟ್ ಸೇವಾ ಪೂರೈಕೆದಾರ ಸ್ಟಾರ್‌ಲಿಂಕ್ ಘಟಕವನ್ನು ಪ್ರಾರಂಭಿಸುವ ಬಗ್ಗೆ ಸುಳಿವು ನೀಡಿದ್ದರು. ಇಂಟರ್ನೆಟ್ ಸಂಪರ್ಕವಿಲ್ಲದ ಹಳ್ಳಿಗಳ ಜನರಿಗೆ ಸ್ಟಾರ್‌ಲಿಂಕ್ ನೆರವಾಗಲಿದೆ ಎಂದು ಮಸ್ಕ್ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಟ್ವೀಟ್ ಮಾಡಿದ ಪಾಟೀಲ್, ಕರ್ನಾಟಕದಲ್ಲಿ ಟೆಸ್ಲಾ ಮತ್ತು ಸ್ಟಾರ್‌ಲಿಂಕ್ ಘಟಕಗಳನ್ನು ಸ್ಥಾಪಿಸಲು ಸ್ವಾಗತವಿದೆ ಎಂದು ಉಲ್ಲೇಖಿಸಿದ್ದಾರೆ. ಜತೆಗೆ, ಟೆಸ್ಲಾದ ಹೂಡಿಕೆಗೆ ಕರ್ನಾಟಕ ಪ್ರಶಸ್ತ ತಾಣವಾಗಿದೆ. ಅಭಿವೃದ್ಧಿಹೊಂದುತ್ತಿರುವ ರಾಜ್ಯವಾಗಿರುವ, ಅನ್ವೇಷಣೆ ಹಾಗೂ ತಂತ್ರಜ್ಞಾನದ ಹಬ್ ಆಗಿರುವ ಕರ್ನಾಟಕವು ಟೆಸ್ಲಾಗೆ ಮತ್ತು ಸ್ಟಾರ್​ಲಿಂಕ್​ಗೆ ಘಟಕಗಳನ್ನು ಸ್ಥಾಪಿಸಲು ಅಗತ್ಯ ಇರುವ ಎಲ್ಲ ರೀತಿಯ ನೆರವು ನೀಡಲು ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ಮುಂದಿನ 2 ದಶಕಗಳಲ್ಲಿ ತಂತ್ರಜ್ಞಾನ ಹಾಗೂ ಉತ್ಪಾದನೆ ಕ್ಷೇತ್ರದ ಹಬ್ ಆಗಲು ಕರ್ನಟಕ ಗುರಿ ಹಾಕಿಕೊಂಡಿದೆ. ಟೆಸ್ಲಾ ಕಂಪನಿಯು ಭಾರತದಲ್ಲಿ ಘಟಕ ಸ್ಥಾಪಿಸುವುದಾದರೆ ಅದಕ್ಕೆ ಕರ್ನಾಟಕ ಸೂಕ್ತ ಎಂದು ಹೇಳಬಯಸುತ್ತೇನೆ. ಟೆಸ್ಲಾಗೆ ಈ ಮೂಲಕ ಆಹ್ವಾನ ನೀಡುತ್ತಿದ್ದೇನೆ ಎಂದು ಮುಖ್ಯಮಂತ್ರಿಗಳನ್ನೂ ಟ್ಯಾಗ್ ಮಾಡಿ ಎಂಬಿ ಪಾಟೀಲ್ ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ: Elon Musk: ಪ್ರಧಾನಿ ಮೋದಿಗೆ ಭಾರತದ ಬಗ್ಗೆ ಎಷ್ಟೊಂದು ಕಾಳಜಿ ಇದೆ, ನಾನು ಅವರ ಅಭಿಮಾನಿ ಎಂದ ಎಲಾನ್ ಮಸ್ಕ್​

ಆದರೆ, ವಿದ್ಯುತ್ ಬೆಲೆ ಹೆಚ್ಚಳದಿಂದ ನಷ್ಟ ಅನುಭವಿಸುತ್ತಿರುವ ಕೈಗಾರಿಕೆಗಳ ಬಗ್ಗೆ ಗಮನಹರಿಸಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಎಂಬಿ ಪಾಟೀಲ್ ಅವರನ್ನು ಉದ್ದೇಶಿಸಿ ಹೇಳಿದ್ದಾರೆ. ಈಗಿರುವ ಕೈಗಾರಿಕೆಗಳತ್ತ ಗಮನ ಹರಿಸಿ ಎಂದು ಅವರು ಹೇಳಿದ್ದಾರೆ.

ವಿದ್ಯುತ್ ದರ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಗುರುವಾರ ಹಲವು ಕೈಗಾರಿಕಾ ಸಂಘಗಳು ಪ್ರತಿಭಟನೆ ನಡೆಸಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ