ಬೆಂಗಳೂರಿನಲ್ಲಿ ಕಂಪನಿ ನೋಂದಣಿಗೆ ಪರದಾಡಿದ ಎನ್​ಆರ್​​ಐ ಕ್ಷಮೆ ಕೇಳಿದ ಎಂಬಿ ಪಾಟೀಲ್; ಆಮೇಲೇನಾಯ್ತು?

|

Updated on: Jul 31, 2023 | 4:06 PM

ಕಂಪನಿ ನೋಂದಣಿ ವಿಚಾರವಾಗಿ ಎನ್​ಆರ್​​ಐ ವ್ಯಕ್ತಿಯೊಬ್ಬರ ಟ್ವೀಟ್​ಗೆ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಕ್ಷಣ ಪ್ರತಿಕ್ರಿಯಿಸಿ ನೆರವಿನ ಭರವಸೆ ನೀಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ಕಂಪನಿ ನೋಂದಣಿಗೆ ಪರದಾಡಿದ ಎನ್​ಆರ್​​ಐ ಕ್ಷಮೆ ಕೇಳಿದ ಎಂಬಿ ಪಾಟೀಲ್; ಆಮೇಲೇನಾಯ್ತು?
ಎಂಬಿ ಪಾಟೀಲ್
Follow us on

ಬೆಂಗಳೂರು: ಬೆಂಗಳೂರಿನಲ್ಲಿ ಕಂಪನಿ ನೋಂದಣಿ ಮಾಡಲು ಕಷ್ಟಪಡುತ್ತಿರುವುದಾಗಿ ಟ್ವೀಟ್ ಮೂಲಕ ಅಳಲು ತೋಡಿಕೊಂಡಿದ್ದ ಅನಿವಾಸಿ ಭಾರತೀಯರೊಬ್ಬರ (NRI) ಕ್ಷಮೆ ಕೇಳಿರುವ ಕೈಗಾರಿಕಾ ಸಚಿವ ಎಂಬಿ ಪಾಟೀಲ್ (MB Patil), ಖುದ್ದು ನೆರವು ನೀಡುವುದಾಗಿ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಎಐ (AI) ಉದ್ಯಮಕ್ಕೆ ಸಂಬಂಧಿಸಿ ಕಂಪನಿ ನೋಂದಣಿ ಮಾಡುವಲ್ಲಿ ಬಹಳಷ್ಟು ವಿಳಂಬವಾಗುತ್ತಿದೆ ಎಂದು ಅನಿವಾಸಿ ಭಾರತೀಯ ಬ್ರಿಜ್ ಸಿಂಗ್ ಟ್ವೀಟ್ ಮಾಡಿದ್ದರು. ಇದಕ್ಕೆ ಸಚಿವ ಎಂಬಿ ಪಾಟೀಲ್ ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು ಮತ್ತು ಭಾರತವನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ. ಎರಡು ತಿಂಗಳುಗಳು ಭಾರತದಲ್ಲಿ ಕಳೆದರೂ ಕಂಪನಿ ನೋಂದಾವಣೆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಸಂಭಾವ್ಯ ಗ್ರಾಹಕರು, ಹೂಡಿಕೆದಾರರು ಮತ್ತು ಸಹ ಸಂಸ್ಥಾಪಕರಿಂದ ವಿವಿಧ ಹಂತಗಳಲ್ಲಿ ಸಮಸ್ಯೆ ಎದುರಾಯಿತು. ಇನ್ನು ನಾನು ಅಮೆರಿಕಕ್ಕೆ ಹಿಂತಿರುಗಬೇಕಾಗಬಹುದು. ಇದನ್ನು ಭಾರವಾದ ಹೃದಯದಿಂದ ಹೇಳುತ್ತೇನೆ ಎಂದು ಬ್ರಿಜ್ ಸಿಂಗ್ ಟ್ವೀಟ್​​ನಲ್ಲಿ ಉಲ್ಲೇಖಿಸಿದ್ದರು.

ಟ್ವೀಟ್​​ಗೆ ತಕ್ಷಣ ಪ್ರತಿಕ್ರಿಯಿಸಿದ್ದ ಸಚಿವ ಪಾಟೀಲ್, ಸಿಂಗ್ ಅವರ ಕ್ಷಮೆ ಕೋರಿದ್ದಾರೆ. ನಂತರ, ಕಂಪನಿ ನೋಂದಾವಣೆಯನ್ನು ಸಾಮಾನ್ಯವಾಗಿ ಸಿಎಗಳು ಮಾಡುತ್ತಾರೆ ಮತ್ತು ಅದಕ್ಕೆ ಅನುಮೋದನೆ ನೀಡಲು ರಿಜಿಸ್ಟ್ರಾರ್​ ಆಫ್ ಕಂಪನೀಸ್​​​ (RoC / (ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ ಮತ್ತು ಎಲ್ಲಾ ರಾಜ್ಯಗಳಿಗೂ ಒಂದೇ ಆಗಿರುತ್ತದೆ) 15-20 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು. ನಿಮಗೆ ಯಾವುದೇ ಸಮಸ್ಯೆಗಳಿದ್ದರೆ ನಾನು ಖುದ್ದಾಗಿ ಭೇಟಿಯಾಗಿ ಅದನ್ನು ಪರಿಹರಿಸಲು ಸಂತೋಷಪಡುತ್ತೇನೆ ಎಂದು ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ: ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾಗಿದ್ಯಾಕೆ? ಕೊನೆಗೂ ಕಾರಣ ಕೊಟ್ಟ ಸಚಿವ ಎಂಬಿ ಪಾಟೀಲ್​

ಸಚಿವರ ಪ್ರತಿಕ್ರಿಯೆಯಿಂದ ಹರ್ಷಗೊಂಡಿರುವ ಸಿಂಗ್, ಸಮಸ್ಯೆ ಬಗ್ಗೆ ಗಮನಹರಿಸಿದ್ದಕ್ಕೆ ನಿಮ್ಮನ್ನು ಪ್ರಶಂಸಿಸುತ್ತೇವೆ ಸರ್. ನಿಮ್ಮ ಪ್ರತಿಕ್ರಿಯೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡಿದೆ. ಈಗ ಪ್ರಕ್ರಿಯೆ ಮುಂದುವರಿಯುತ್ತಿದೆ. ಅಗತ್ಯವಿದ್ದಲ್ಲಿ ನಾನು ನಿಮ್ಮ ತಂಡವನ್ನು ತಲುಪುತ್ತೇನೆ. ನಿಮ್ಮ ಬೆಂಬಲಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದ್ದಾರೆ. ಉಭಯರ ಟ್ವೀಟ್​​ ಸಂಭಾಷಣೆಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ