ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾಗಿದ್ಯಾಕೆ? ಕೊನೆಗೂ ಕಾರಣ ಕೊಟ್ಟ ಸಚಿವ ಎಂಬಿ ಪಾಟೀಲ್
ಜುಲೈ 27 ರಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿದ್ದು, ಆ ಸಭೆಗೆ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಗೈರಾಗಿದ್ದು, ನಮ್ಮ ತಂದೆಯ ಕಾರ್ಯ ಇತ್ತು. ಹಾಗಾಗಿ ಸಿಎಲ್‌ಪಿ ಸಭೆಗೆ ಹೋಗಿರಲಿಲ್ಲ ಎಂದು ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು, ಜುಲೈ 30: ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಜುಲೈ 27 ರಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿದ್ದು, ಆ ಸಭೆಗೆ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ (MB Patil) ಗೈರಾಗಿದ್ದರು. ಆದರೆ ಇದೀಗ ಸಿಎಲ್‌ಪಿ ಸಭೆಗೆ ಹೋಗದಿದ್ದಕ್ಕೆ ಕೊನೆಗೂ ಕಾರಣ ಬಿಚ್ಚಿಟ್ಟಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆಯ ಕಾರ್ಯ ಇತ್ತು. ಹಾಗಾಗಿ ಸಿಎಲ್‌ಪಿ ಸಭೆಗೆ ಹೋಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
6% ಮಾತ್ರ ಶಾಸಕರ ವರ್ಗಾವಣೆ ಬೇಡಿಕೆ ಈಡೇರಿಸಬಹುದು: ಸಚಿವ ಎಂಬಿ ಪಾಟೀಲ್
ಸಿಎಲ್‌ಪಿ ಸಭೆಯಲ್ಲಿ ಬಿಆರ್ ಪಾಟೀಲ್ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, B.R.ಪಾಟೀಲ್ ಹಿರಿಯ ಶಾಸಕ, ಪ್ರಾಮಾಣಿಕ, ಕ್ರಿಯಾಶೀಲ ವ್ಯಕ್ತಿ. ಕೆಲಸ ಆಗದಿದ್ದಾಗ ನೋವು ಇರುತ್ತದೆ. B.R.ಪಾಟೀಲ್ ಹಿರಿಯರು, ಅವರೇ ಎಲ್ಲರನ್ನೂ ಸುಮ್ಮನಿರಿಸಬೇಕು. ಆದರೆ ಅವರಿಗೆ ನೋವಾಗಿದ್ದರೆ ಸರಿಪಡಿಸುವ ಕೆಲಸ ಮಾಡಬೇಕಿದೆ. ಶೇ.6ರಷ್ಟು ಮಾತ್ರ ಶಾಸಕರ ವರ್ಗಾವಣೆ ಬೇಡಿಕೆ ಈಡೇರಿಸಬಹುದು ಎಂದು ಹೇಳಿದರು.
ಇದನ್ನೂ ಓದಿ: ಡಿಜಿ, ಐಜಿಪಿ ಜೊತೆ ಅಜ್ಞಾತ ಸ್ಥಳಕ್ಕೆ ತೆರಳಿದ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್
ಐದು ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತರಬೇಕಿದೆ
ಏನೇ ಬೇಡಿಕೆ ಇದ್ದರೂ ಮುಖ್ಯಮಂತ್ರಿಗಳಿಗೆ ಬಂದು, ನಂತರ ಎಲ್ಲವೂ ಆಗಬೇಕಿದೆ. ಐದು ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತರಬೇಕಿದೆ ಎಂದರು. ಬಿಜೆಪಿ ಅವಧಿಯ ಭ್ರಷ್ಟಾಚಾರ ತನಿಖೆಗೆ ನಾಗಮೋಹನ್ ದಾಸ್ ಸಮಿತಿ ರಚನೆ ವಿಚಾರವಾಗಿ ಮಾತನಾಡಿದ ಅವರು, ಹಿಂದಿನ ಸರ್ಕಾರದ 40% ಕಮಿಷನ್, ಪಿಎಸ್ಐ, ಕೊರೋನಾ ಸಂದರ್ಭದ ಅವ್ಯವಹಾರ ಎಲ್ಲವನ್ನೂ ತನಿಖೆ ಮಾಡಬೇಕಿದೆ ಎಂದು ತಿಳಿಸಿದರು.
ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಯಾವುದೇ ಕ್ಷಮೆ ಕೇಳಿಲ್ಲ: ಶಾಸಕ ಬಿಆರ್ ಪಾಟೀಲ್
ಕಲಬುರಗಿಯಲ್ಲಿ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಯಾವುದೇ ಕ್ಷಮೆ ಕೇಳಿಲ್ಲ. ಯಾರು ಕ್ಷಮೆ ಕೇಳಿದ್ದಾರೋ ಗೊತ್ತಿಲ್ಲ. ಕ್ಷಮೆ ಕೇಳುವ ಹೇಡಿತನ, ಜಾಯಮಾನವೂ ಕೂಡ ನನ್ನದಲ್ಲ. ಕ್ಷಮೆ ಕೇಳುವ ತಪ್ಪು ಕೂಡ ನಾನು ಮಾಡಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ವರ್ಗಾವಣೆ ಪೈಪೋಟಿ, ಭ್ರಷ್ಟಾಚಾರದ ಪೈಪೋಟಿ ಇದ್ದಿದ್ದರಿಂದ ಸಿಪಿಎಲ್ ಸಭೆ ನಡೆಸಿದರು: ಬೊಮ್ಮಾಯಿ
ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಕೇಳೋದು ನಮ್ಮ ಹಕ್ಕು. ಶಾಸಕಾಂಗ ಪಕ್ಷದ ಸಭೆಯಿಂದ ನಾವು ಸಮಾಧಾನಗೊಂಡಿದ್ದೇವೆ. ಕೆಲವು ಸಚಿವರ ವರ್ತನೆ ಬಗ್ಗೆ ಅನೇಕರಿಗೆ ಅಸಮಾಧಾನ ಇತ್ತು. ಸಚಿವರಿಗೆ ಸಂಪುಟ ಸಭೆಯಲ್ಲಿ ಸಿಎಂ ಏನು ಹೇಳಿದ್ದಾರೋ ಗೊತ್ತಿಲ್ಲ. ಆತ್ಮಗೌರವಕ್ಕೆ ಧಕ್ಕೆ ಬಂದರೆ ರಾಜೀನಾಮೆ ನೀಡ್ತೇನೆ ಎಂದಿದ್ದು ನಿಜ. ನಿನ್ನೆ ಮತ್ತೆ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡಿದ್ದೇನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.