TV9 ಇಂಪ್ಯಾಕ್ಟ್: ವಲಸೆ ಕಾರ್ಮಿಕರಿಗಾಗಿ ಬಸ್ ಪ್ರಯಾಣ ದರ ಬದಲಿಸಿದ KSRTC
ಬೆಂಗಳೂರು: ಗೊಂದಲಸ ಗೂಡಾಗಿದ್ದ ಕೆಎಸ್ಆರ್ಟಿಸಿ ಪ್ರಯಾಣ ದರ ನೀತಿಗೆ ಅಂಕುಶ ಬಿದ್ದಿದೆ. ಸಿಂಗಲ್ ಫೇರ್ ಪಡೆಯುವುದಕ್ಕೆ ಕೆಎಸ್ಆರ್ಟಿಸಿ ನಿರ್ಧಾರ ಮಾಡಿದೆ. ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಲು ಕೆಎಸ್ಆರ್ಟಿಸಿ ಇಂದು ಬೆಳಗ್ಗೆಯಿಂದ ಮೊದಲು ಡಬಲ್ ಫೇರ್ ಪಡೆಯುತ್ತಿತ್ತು. ಇದರ ವಿರುದ್ಧ ದನಿ ಎತ್ತಿದ್ದ ಟಿವಿ9ನಲ್ಲಿ ದುಪ್ಪಟ್ಟು ದರ ವಸೂಲಿ ಬಗ್ಗೆ ವರದಿ ಪ್ರಸಾರವಾಗುತ್ತಿದ್ದಂತೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಪ್ರವೇಶಿಸಿದ ಮೇಲೆ ಸಿಂಗಲ್ ಫೇರ್ ಪಡೆಯುವುದಕ್ಕೆ ಕೆಎಸ್ಆರ್ಟಿಸಿ ನಿರ್ಧರಿಸಿದೆ. ಕಾರ್ಮಿಕ ಇಲಾಖೆ ಭರಿಸಲಿದೆ ಮತ್ತೊಂದು ದರ: ಕಾರ್ಮಿಕರಿಂದ ದುಪ್ಪಟ್ಟು ದರ […]
ಬೆಂಗಳೂರು: ಗೊಂದಲಸ ಗೂಡಾಗಿದ್ದ ಕೆಎಸ್ಆರ್ಟಿಸಿ ಪ್ರಯಾಣ ದರ ನೀತಿಗೆ ಅಂಕುಶ ಬಿದ್ದಿದೆ. ಸಿಂಗಲ್ ಫೇರ್ ಪಡೆಯುವುದಕ್ಕೆ ಕೆಎಸ್ಆರ್ಟಿಸಿ ನಿರ್ಧಾರ ಮಾಡಿದೆ.
ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಲು ಕೆಎಸ್ಆರ್ಟಿಸಿ ಇಂದು ಬೆಳಗ್ಗೆಯಿಂದ ಮೊದಲು ಡಬಲ್ ಫೇರ್ ಪಡೆಯುತ್ತಿತ್ತು. ಇದರ ವಿರುದ್ಧ ದನಿ ಎತ್ತಿದ್ದ ಟಿವಿ9ನಲ್ಲಿ ದುಪ್ಪಟ್ಟು ದರ ವಸೂಲಿ ಬಗ್ಗೆ ವರದಿ ಪ್ರಸಾರವಾಗುತ್ತಿದ್ದಂತೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಪ್ರವೇಶಿಸಿದ ಮೇಲೆ ಸಿಂಗಲ್ ಫೇರ್ ಪಡೆಯುವುದಕ್ಕೆ ಕೆಎಸ್ಆರ್ಟಿಸಿ ನಿರ್ಧರಿಸಿದೆ.
ಕಾರ್ಮಿಕ ಇಲಾಖೆ ಭರಿಸಲಿದೆ ಮತ್ತೊಂದು ದರ: ಕಾರ್ಮಿಕರಿಂದ ದುಪ್ಪಟ್ಟು ದರ ಪಡೆಯುತ್ತಿದ್ದ ಬಗ್ಗೆ ವರದಿ ಪ್ರಸಾರವಾಗುತ್ತಿದ್ದಂತೆ ಸಿಎಂ ಯಡಿಯೂರಪ್ಪ ಮತ್ತು ಸಾರಿಗೆ ಸಚಿವ ಸವದಿ ಮಾತುಕತೆ ನಡೆಸಿದ್ದಾರೆ. ಸಿಂಗಲ್ ಫೇರ್ ಪಡೆಯುವುದಕ್ಕೆ ನಿರ್ಧಾರ ಮಾಡಿ, ಮತ್ತೊಂದು ದರವನ್ನು ಕಾರ್ಮಿಕ ಇಲಾಖೆ ಭರಿಸಲಿದೆ ಎಂದು ಸರ್ಕಾರ ಅಧಿಕೃತವಾಗಿ ತಿಳಿಸಿದೆ.
Published On - 1:16 pm, Sat, 2 May 20