Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಠ, ಮಂದಿರಗಳು, ಸಂಘ ಸಂಸ್ಥೆಗಳಿಗೆ ಸರ್ಕಾರದಿಂದ 23 ಕೋಟಿ ಅನುದಾನ ಬಿಡುಗಡೆ

ರಾಜ್ಯದಲ್ಲಿರುವ ಮಠ, ಮಂದಿರಗಳು ಹಾಗೂ ಸಂಘ ಸಂಸ್ಥೆಗಳಿಗೆ ಕರ್ನಾಟಕ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಕೆಲವು ತಿಂಗಳ ಹಿಂದೆಯಷ್ಟೇ ಸ್ಥಾಪನೆಯಾಗಿದ್ದ ವೀರಶೈವ ಲಿಂಗಾಯತ ಪಂಚಮಸಾಲಿ ಮಠಕ್ಕೆ ಅನುದಾನ ಬಿಡುಗಡೆಯಾಗಿದೆ.

ಮಠ, ಮಂದಿರಗಳು, ಸಂಘ ಸಂಸ್ಥೆಗಳಿಗೆ ಸರ್ಕಾರದಿಂದ 23 ಕೋಟಿ ಅನುದಾನ ಬಿಡುಗಡೆ
ಮಠ, ಮಂದಿರಗಳು, ಸಂಘ ಸಂಸ್ಥೆಗಳಿಗೆ ಸರ್ಕಾರದಿಂದ 23 ಕೋಟಿ ಅನುದಾನ ಬಿಡುಗಡೆ
Follow us
TV9 Web
| Updated By: Rakesh Nayak Manchi

Updated on:Nov 25, 2022 | 11:10 AM

ಬಾಗಲಕೋಟೆ: ರಾಜ್ಯದಲ್ಲಿರುವ ಮಠ, ಮಂದಿರಗಳು ಹಾಗೂ ಸಂಘ ಸಂಸ್ಥೆಗಳಿಗೆ ಒಟ್ಟು 23.95 ಕೋಟಿ ರೂಪಾಯಿ ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ನೇತೃತ್ವದ ಕರ್ನಾಟಕ ಸರ್ಕಾರ (Karnataka Government) ಬಿಡುಗಡೆ ಮಾಡಿದೆ. ಒಟ್ಟು 55 ಮಠಗಳು, 81 ದೇಗುಲಗಳು, 25 ಸಂಘ ಸಂಸ್ಥೆಗಳಿಗೆ ಒಟ್ಟು 23.95 ಕೋಟಿ ಬಿಡುಗಡೆ ಮಾಡಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಜೀತ್ ಕೆ.ಎಂ. ನಂಬಿಯಾರ್ ಅವರು ಆದೇಶ ಹೊರಡಿಸಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೇ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದಲ್ಲಿ ಸ್ಥಾಪನೆಯಾಗಿದ್ದ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ 3ನೇ ಪೀಠಕ್ಕೂ ಅನುದಾನ ಬಿಡುಗಡೆಯಾಗಿದೆ.

ಇದನ್ನೂ ಓದಿ: “ಬುಟ್ಟಿಯಲ್ಲಿ ಹಣ್ಣು ಕೊಳೆತರೆ ಅದನ್ನು ತೆಗೆದು ಎಸೆಯಬೇಕು”; ಪೀಠದಿಂದ ಮುರುಘಾಶ್ರೀ ವಜಾಗೊಳಿಸುವ ಸುಳಿವು ನೀಡಿದ ಸಮುದಾಯದ ಮುಖಂಡರು

ವೀರಶೈವ ಲಿಂಗಾಯತ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟ ಹಾಗೂ ಒಕ್ಕೂಟದ ಸದಸ್ಯರಾಗಿರುವ ರಾಜ್ಯದ ಪಂಚಮಸಾಲಿ ಸ್ವಾಮೀಜಿಗಳ ಮಠಗಳ ಒಕ್ಕೂಟದ ಟ್ರಸ್ಟ್​ಗೆ 20 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ವೀರಶೈವ ಲಿಂಗಾಯತ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಟ್ರಸ್ಟ್ ಅಡಿಯಲ್ಲಿ ಸ್ಥಾಪನೆ ಆಗಿದ್ದ 3ನೇ ಪೀಠ ಇದಾಗಿದೆ. ಈ ಪೀಠವು ಕಳೆದ ಫೆಬ್ರುವರಿ ತಿಂಗಳಲ್ಲಿ ಸ್ಥಾಪನೆಯಾಗಿದೆ.

ಇದನ್ನೂ ಓದಿ: ಪಾಂಡವಪುರದಲ್ಲಿ ಇಂದಿನಿಂದ ಪುನೀತೋತ್ಸವ; ಸ್ಯಾಂಡಲ್​ವುಡ್ ನಟ-ನಟಿಯರು ಭಾಗಿ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:28 am, Fri, 25 November 22