Karnataka Lockdown: ಪರಿಸ್ಥಿತಿ ಕೈಮೀರುತ್ತಿದೆ.. ಸರ್ವಪಕ್ಷ ಸಭೆ ಕರೆದು ಲಾಕ್​ಡೌನ್​ ಬಗ್ಗೆ ನಿರ್ಧಾರ: ಮುಖ್ಯಮಂತ್ರಿ ಯಡಿಯೂರಪ್ಪ

Karnataka Lockdown Latest Updates: ಲಾಕ್​ಡೌನ್ ಮಾಡಿದರೆ ಜನರಿಗೆ ತೊಂದರೆ ಆಗುತ್ತೆ. ಲಾಕ್​ಡೌನ್​ನಿಂದ ತೊಂದರೆ ಬಗ್ಗೆ ಸರ್ಕಾರಕ್ಕೂ ಗೊತ್ತಿದೆ. ಆದರೆ ಪರಿಸ್ಥಿತಿ ಕೈಮೀರುತ್ತಿದೆ. ಈ ಹಿನ್ನೆಲೆಯಲ್ಲಿ, ವಿಪಕ್ಷದವರು ಯಾವುದೇ ಸಲಹೆ ನೀಡಿದರೂ ಸ್ವೀಕರಿಸ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

Karnataka Lockdown: ಪರಿಸ್ಥಿತಿ ಕೈಮೀರುತ್ತಿದೆ.. ಸರ್ವಪಕ್ಷ ಸಭೆ ಕರೆದು ಲಾಕ್​ಡೌನ್​ ಬಗ್ಗೆ ನಿರ್ಧಾರ:  ಮುಖ್ಯಮಂತ್ರಿ ಯಡಿಯೂರಪ್ಪ
ಮುಖ್ಯಮಂತ್ರಿ ಯಡಿಯೂರಪ್ಪ
ಸಾಧು ಶ್ರೀನಾಥ್​

Updated on: Apr 12, 2021 | 12:53 PM

ಬೀದರ್: ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜನರು ಸಹಕರಿಸದಿದ್ದರೆ ಲಾಕ್​ಡೌನ್ ಅನಿವಾರ್ಯವಾಗುತ್ತೆ. ಲಾಕ್​ಡೌನ್ ಮಾಡುವ ಉದ್ದೇಶ ರಾಜ್ಯ ಸರ್ಕಾರಕ್ಕಿಲ್ಲ. ಹಾಗಾಗಿ ಸರ್ವಪಕ್ಷ ಸಭೆ ಕರೆದು ಲಾಕ್​ಡೌನ್​ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬೀದರ್​ನಲ್ಲಿ ಟಿವಿ9ಗೆ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಆದರೆ ಲಾಕ್​ಡೌನ್ ಮಾಡಿದರೆ ಜನರಿಗೆ ತೊಂದರೆ ಆಗುತ್ತೆ. ಲಾಕ್​ಡೌನ್​ನಿಂದ ತೊಂದರೆ ಬಗ್ಗೆ ಸರ್ಕಾರಕ್ಕೂ ಗೊತ್ತಿದೆ. ಆದರೆ ಪರಿಸ್ಥಿತಿ ಕೈಮೀರುತ್ತಿದೆ. ಈ ಹಿನ್ನೆಲೆಯಲ್ಲಿ, ವಿಪಕ್ಷದವರು ಯಾವುದೇ ಸಲಹೆ ನೀಡಿದರೂ ಸ್ವೀಕರಿಸ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಬಸವಕಲ್ಯಾಣ ಅಸೆಂಬ್ಲಿ ಉಪಚುನಾವಣೆ ಪ್ರಚಾರಕ್ಕಾಗಿ ಜಿಲ್ಲೆಗೆ ಆಗಮಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ಕಾರ್ಯಕರ್ತ ರಾಜುಮಂಟಳ್ ಅವರ ಮನೆಗೆ ಇದೀಗ ಭೇಟಿ ನೀಡಿದ್ದಾರೆ. ಬಸವಕಲ್ಯಾಣದ ಗಂಗಾ ಕಾಲೋನಿಯಲ್ಲಿ ಕಾರ್ಯಕರ್ತ ರಾಜುಮಂಟಳ್ ಮನೆಯಿದ್ದು, ಸಿಎಂ ಯಡಿಯೂರಪ್ಪ ಅವರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ವಿ ಸೋಮಣ್ಣ, ಪ್ರಭು ಚೌಹಾಣ್, ಸಂಸದ ಭಗವಂತ ಖೂಬಾ ಸೇರಿ‌ ಹಲವಾರು ನಾಯಕರು ಸಾಥ್ ನೀಡಿದ್ದಾರೆ.

ಲಾಕ್​ಡೌನ್​ ಬಗ್ಗೆ ನಾನಾಗಲಿ, ಸಿಎಂ ಆಗಲಿ ಹೇಳಿಲ್ಲ
ಇನ್ನು ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಅವರು ಬೆಂಗಳೂರಿನಲ್ಲಿ ಮಾತನಾಡಿದ್ದು “ಲಾಕ್​ಡೌನ್​ ಬಗ್ಗೆ ನಾನಾಗಲಿ, ಸಿಎಂ ಆಗಲಿ ಹೇಳಿಲ್ಲ. ಹಳ್ಳಿಗಳಲ್ಲಿರುವ ಜನರು ಎಚ್ಚರಿಕೆಯಿಂದ ಇರಬೇಕು. ಜನರು ಅನಗತ್ಯವಾಗಿ ಗುಂಪು ಸೇರೋದು ಬಿಡಬೇಕು. ನಾವೇ ನಿರ್ಬಂಧ ಹಾಕ್ಕೊಂಡ್ರೆ ಲಾಕ್​ಡೌನ್ ಅವಶ್ಯವಿಲ್ಲ. ಸರ್ಕಾರ ಪೂರ್ವಯೋಜಿತವಾಗಿ ಕ್ರಮ ಕೈಗೊಳ್ಳುತ್ತಿದೆ. ಲಾಕ್​ಡೌನ್ ಮಾಡೋದು ನಮಗೆ ಸುತರಾಂ ಇಷ್ಟವಿಲ್ಲ. ಲಾಕ್​ಡೌನ್‌ನಿಂದ ಎಷ್ಟು ಆರ್ಥಿಕ ಕಷ್ಟ ಎದುರಾಗಲಿದೆ ಎಂಬುದು ಗೊತ್ತಿದೆ. ಪ್ರತಿಯೊಬ್ಬರು ತಮಗೆ ತಾವೇ ನಿರ್ಬಂಧ ಹಾಕಿಕೊಳ್ಳಬೇಕು. ಈ ಯುಗಾದಿಯಲ್ಲಿ ಕೊವಿಡ್ ಬೇವು, ಲಸಿಕೆ ಬೆಲ್ಲ ಎಂಬಂತಾಗಿದೆ ಎಂದು ಹೇಳಿದ್ದಾರೆ.

ತಪ್ಪದೇ ಇದನ್ನೂ ಓದಿ:  2ನೇ ಅಲೆ ಸಿಕ್ಕಾಪಟ್ಟೆ ಡೇಂಜರಸ್: ಆರ್ಥಿಕ ಚಟುವಟಿಕೆಗೆ ಬ್ರೇಕ್ ಹಾಕದೇ ತಡೆಗಟ್ಟುವುದು ಅಸಾಧ್ಯ, ಲಾಕ್​ಡೌನ್​ ಮುನ್ಸೂಚನೆ?

YouTube video player

Published On - 10:45 am, Mon, 12 April 21

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us