
ಬೆಂಗಳೂರು, ಡಿಸೆಂಬರ್ 11: ಮಂಗಳವಾರ (ಡಿಸೆಂಬರ್ 10) ಬೆಳ್ಳಂಬೆಳಗ್ಗೆ ಲೋಕಾಯುಕ್ತ (Lokayukta) ಅಧಿಕಾರಿಗಳು ಕರ್ನಾಟಕದಾದ್ಯಂತ ಏಕಕಾಲಕ್ಕೆ ದಾಳಿ ಮಾಡಿದ್ದರು. ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಗದಗ, ಕಲಬುರುಗಿ, ರಾಯಚೂರು, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ 10 ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ್ದರು. ಈ ವೇಳೆ ಕೋಟ್ಯಾಂತರ ಮೌಲ್ಯದ ಆಸ್ತಿ, ಚಿನ್ನ ಪತ್ತೆಯಾಗಿದೆ. ಬೆಂಗಳೂರು ಒಂದರಲ್ಲೇ ಐದು ಕಡೆ ದಾಳಿ ಮಾಡಲಾಗಿತ್ತು.
ಈವರೆಗಿನ ಮಾಹಿತಿ ಪ್ರಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಹೆಚ್‌ಒ ಸುನಿಲ್ ಕುಮಾರ್ ಮತ್ತು ಡಿಎಸ್ಪಿ ನಂಜುಡಯ್ಯ ಹಣದ ತಿಮಿಂಗಿಲಗಳಾಗಿದ್ದಾರೆ. ರಾಜಾನುಕುಂಟೆ ಬಳಿ ಇರುವ ನಂಜುಂಡಯ್ಯ ಅವರ ನಿವಾಸ ಕಂಡು ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದರು. ಇದು ಮನೆಯೋ ಅಥವಾ ಅರಮನೆಯೋ ಎಂದು ಬೆರಗಾಗಿದ್ದರು. ಮನೆಯೊಳಗೆ ಐಶಾರಾಮಿ ವ್ಯವಸ್ಥೆ ಇತ್ತು. ಸ್ವಿಮ್ಮಿಂಗ್ ಪೂಲ್, ಜಿಮ್ ಮತ್ತು ಥಿಯೇಟರ್ ನಂತಹ ಐಶಾರಾಮಿ ವ್ಯವಸ್ಥೆ ಮನೆಯಲ್ಲಿತ್ತು.
ಇದನ್ನೂ ಓದಿ: ಬಳ್ಳಾರಿ ಬಾಣಂತಿಯರ ಸರಣಿ ಸಾವು ಕೇಸ್: ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲು
ಬೆಂಗಳೂರಿನ ಮಂಜುನಾಥ ನಗರದಲ್ಲಿ ಇರುವ ಡಿಹೆಚ್‌ಒ ಸುನಿಲ್ ನಿವಾಸದ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಆದರೆ, ಸುನಿಲ್ ಮಾತ್ರ ಮನೆಯ ಗೇಟ್ ತೆರೆಯದೆ, ನಾಲ್ಕು ಗಂಟೆಗಳ ಕಾಲ ಲೋಕಾಯುಕ್ತ ಅಧಿಕಾರಿಗಳನ್ನು ಸತಾಯಿಸಿದ್ದರು. ಈ ಬಗ್ಗೆಯೂ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಇದುವರೆಗೆ, ಸನಿಲ್ ಮನೆಯಲ್ಲಿ 15 ಲಕ್ಷ ನಗದು ಮತ್ತು ಕೆಜಿ ಗಟ್ಟಲೆ ಚಿನ್ನ ಸಿಕ್ಕಿದೆ ಎನ್ನಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:45 am, Wed, 11 December 24